ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahanati Winner: ವಂಶಿ ಮುಡಿಗೇರಿದ ಮಹಾನಟಿ ಕಿರೀಟ! ವಿಜೇತೆಗೆ ಸಿಕ್ಕ ಬಹುಮಾನ ಏನು?

ಇದೀಗ ಮಹಾನಟಿ (Mahanati Winner) ಸೀಸನ್-2ರ ವಿಜೇತರಾಗಿ ಮಂಗಳೂರಿನ ವಂಶಿ (Vamshi) ಹೊರಹೊಮ್ಮಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದರು. ಅಂತಿಮ ಸ್ಪರ್ಧಿಗಳಾಗಿರುವವರು ಇದಾಗಲೇ ನಿರ್ದೇಶಕರುಗಳಾದ ಹರಿ ಸಂತೋಷ್ (Hari Santhosh), ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಷಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಈ ಷಾರ್ಟ್ ಮೂವಿಗಳ ಸ್ಕ್ರೀನಿಂಗ್ ಇದೇ 3ರಂದು ಆಗಿದೆ.

ವಂಶಿ ಮುಡಿಗೇರಿದ ಮಹಾನಟಿ ಕಿರೀಟ! ವಿಜೇತೆಗೆ ಸಿಕ್ಕ ಬಹುಮಾನ ಏನು?

Vamshi Mahanati Winner -

Yashaswi Devadiga
Yashaswi Devadiga Nov 9, 2025 11:07 PM

ಯುವನಟಿಯರನ್ನು ಕನ್ನಡ ಸಿನಿರಂಗಕ್ಕೆ (Kannada Film Industry) ಪರಿಚಯಿಸುವ ವಿಭಿನ್ನ ಕಾರ್ಯಕ್ರಮವೇ 'ಮಹಾನಟಿ' (Mahanati Season 2). ಇದೇ ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ನಡೆದಿದೆ. ಅಂತೂ ವಿನ್ನರ್‌ ಅನೌನ್ಸ್‌ ಆಗಿದೆ. ಇದೀಗ ಮಹಾನಟಿ ಸೀಸನ್-2ರ ವಿಜೇತರಾಗಿ ಮಂಗಳೂರಿನ ವಂಶಿ (Vamshi Winner) ಹೊರಹೊಮ್ಮಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದರು.

ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿ

ಮಹಾನಟಿ ಸೀಸನ್- ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿಯಾಗಿದ್ದಾರೆ. ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಮಹಾನಟಿ ಸೀಸನ್-2ರ ಮೊದಲ Runner Up ಬೆಳಗಾವಿಯ ವರ್ಷಾ ಡಿಗ್ರಜೆ ಆಗಿದ್ದಾರೆ. ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಮಹಾನಟಿ ಸೀಸನ್-2ರ ಎರಡನೇ ರನ್ನರ್‌ ಅಪ್‌ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: Bigg Boss Kannada: ಗಿಲ್ಲಿಗೆ ಹೊಡೆದ ರಿಷಾ ಔಟ್‌ ಆಗೋದು ಫಿಕ್ಸ್‌? ಮನೆಮಂದಿ ನಿರ್ಧಾರ ಏನು?

ಶೋನ ಮುಖ್ಯ ಉದ್ದೇಶ

ಕಿರುತೆರೆಯಿಂದ ಸಿಲ್ವರ್ ಸ್ಕ್ರೀನ್‌ಗೆ ಪ್ರತಿಭಾನ್ವಿತ ನಟಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.

ಮಹಾನಟಿ ಸೀಸನ್ 1 ಅತ್ಯಂತ ಯಶಸ್ವಿ ಆಗಿದ್ದು ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸಿನೆಮಾ ಹಾಗೂ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿವೆ.

ಶಾರ್ಟ್ ಮೂವಿಗಳಲ್ಲಿ ನಟನೆ

ಮಹಾನಟಿ ಬಿ.ಸರೋಜಾ ದೇವಿ ಅವರ ಸ್ಮರಣಾರ್ಥ ಈ ಕಿರೀಟವನ್ನು ನೀಡಲಾಗುತ್ತಿದ್ದು, ಸರೋಜಮ್ಮನವರು ನಾಡು ಕಂಡ ಅದ್ವಿತೀಯ ಕಲಾವಿದೆ ಎಂದು ಸುಧಾರಾಣಿ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಡಮಾಲ್ ಡುಮಲ್ ಡಕ್ಕಾ, ಈ ಇಬ್ಬರು ಹೊರ ಹೋಗೋದು ಪಕ್ಕಾ?

ಅಂತಿಮ ಸ್ಪರ್ಧಿಗಳಾಗಿರುವವರು ಇದಾಗಲೇ ನಿರ್ದೇಶಕರುಗಳಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಈ ಶಾರ್ಟ್ ಮೂವಿಗಳ ಸ್ಕ್ರೀನಿಂಗ್ ಇದೇ 3ರಂದು ಆಗಿದೆ.