ಬಿಗ್ ಬಾಸ್‌ನಲ್ಲಿ (Bigg Boss Kannada 12) ಸದ್ಯ ಫ್ಯಾಮಿಲಿ ವೀಕ್ ಕೂಡ ಆಗಿದೆ. ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಹಿಂದಿನ ವಾರವೇ ಸುದೀಪ್ ಅವರು ತಾವು ಈ ವೀಕೆಂಡ್‌ಗೆ ಬರೋದಿಲ್ಲ ಅಂತ ಅನೌನ್ಸ್ ಮಾಡಿದ್ದರು. ಹಾಗಾಗಿ ಸುದೀಪ್ ಅವರ ಬದಲಿಗೆ (Weekend) ಯಾರು ಬರ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಸದ್ಯ ಮನೆಯಲ್ಲಿ ಹೊಸ ಕ್ಯಾಪ್ಟನ್ (Captain) ಗಿಲ್ಲಿ ನಟನ ನಾಯಕತ್ವ ಮತ್ತು ಕಾವ್ಯಾ ಆಟದ ಬದಲಾವಣೆಗಳು ಸಂಚಿಕೆಯ ಕುತೂಹಲವನ್ನು ಹೆಚ್ಚಿಸಿವೆ.
ಕೆಡಿ ಟೀಂ ಎಂಟ್ರಿ?
ವರದಿಯ ಪ್ರಕಾರ ಬಿಗ್‌ಬಾಸ್ ಮನೆಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಸ್ಟಾರ್ ಕಾಂಬಿನೇಷನ್‌ನಲ್ಲಿ 'KD: The Devil' ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಚಾರಕ್ಕಾಗಿ ಬಿಬಿ ಹೌಸ್‌ಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಅಣ್ತಮ್ಮ ಜೋಡೆತ್ತು ಕಣೋ ಸುಂದರ ಹಾಡು ರಿಲೀಸ್ ಆಗಿದ್ದು, ಜನಪ್ರಿಯವಾಗುತ್ತಿದೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ನಿರ್ದೇಶಕ ಪ್ರೇಮ್ ಧ್ವನಿಯಾಗಿದ್ದಾರೆ.
ಸಿನಿಮಾ ಯಾವಾಗ ರಿಲೀಸ್
ಹಲವು ಸಮಯದಿಂದ ಕೆಡಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇತ್ತು. ಆದರೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚಿತ್ರತಂಡವು 2026ರ ಏಪ್ರಿಲ್ 30 ರಂದು ಕೆಡಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.
(ಡಿ.26) ರಿಲೀಸ್ ಆಗಿರುವ ಹೊಸ ಹಾಡಿನೊಂದಿಗೆ ಸೈಲೆಂಟ್ ಆಗಿಯೇ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಕೆಡಿ ಟೀಮ್. ಅಲ್ಲಿಗೆ ಈ ಚಿತ್ರ ತೆರೆಗೆ ಬರಲು ಅಭಿಮಾನಿಗಳು ಇನ್ನೂ 4 ತಿಂಗಳು ಕಾಯಬೇಕಿದೆ. ಇನ್ನು, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ಕನ್ನಡದ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ರೀಷ್ಮಾ ನಾಣಯ್ಯ ಮುಂತಾದವರು ನಟಿಸಿದ್ದಾರೆ. ನೋರಾ ಫತೇಹಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಗಿಲ್ಲಿ ಕ್ಯಾಪ್ಟನ್!
ವೈಸ್ ಕ್ಯಾಪ್ಟನ್ ಎಂದು ಹೇಳಿಕೊಳ್ಳುತ್ತಿದ್ದ ಗಿಲ್ಲಿ, ಕಡೆಗೂ ಈ ಸೀಸನ್‌ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ವಿರುದ್ಧ ಗೆದ್ದು, ಬಿಗ್ ಬಾಸ್ ಕನ್ನಡ 12 ನೇ ಸೀಸನ್‌ನ 13ನೇ ವಾರದ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ.ಕ್ಯಾಪ್ಟನ್ ರೂಂಗೆ ಅತ್ಯಂರ ಗಾಂಭೀರ್ಯದಿಂದ ಎಂಟ್ರಿ ಕೊಡುತ್ತಲೇ ಮೈಕ್ ಧರಿಸಿ ಎಂದು ಹೇಳಿದ್ದಾರೆ ಬಿಗ್ ಬಾಸ್ . ಸ್ಪಂದನಾ ಸೋಮಣ್ಣ ಅವರ ತಂದೆ-ತಾಯಿ, ರಘು ಅವರ ಪತ್ನಿ-ಮಗ, ಧನುಷ್ ಅವರ ತಾಯಿ, ಅಶ್ವಿನಿ ಗೌಡ ಅವರ ತಾಯಿ, ಧ್ರುವಂತ್ ಅವರ ಸಹೋದರ ಸೇರಿದಂತೆ ಹಲವರು ಗಿಲ್ಲಿಯನ್ನ ಬೆಂಬಲಿಸಿದರು.
ಇದನ್ನೂ ಓದಿ: Bigg Boss Kannada 12: ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡ ರಘು; ಪತ್ನಿ ಹೇಳಿದ್ದೇನು?
ಪರಿಣಾಮ, ಗಿಲ್ಲಿಗೆ ಅತ್ಯಧಿಕ ವೋಟ್‌ಗಳ ಬಂದವು. ಗಿಲ್ಲಿ ಕ್ಯಾಪ್ಟನ್ ಆಗಿರುವುದರಿಂದ ಈ ವಾರ ಮನೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.