ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಕ್ಯಾಪ್ಟನ್ಸಿ ರೇಸ್‌ನಲ್ಲಿ ಭರ್ಜರಿ ಟ್ವಿಸ್ಟ್! ಈ ವಾರದ ಬಿಗ್ ಬಾಸ್ ಮನೆಯ ಹೊಸ ಅಧಿಪತಿಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ವೀಕ್‌ ಆಗಿತ್ತು. ಮನೆಯ ಎಲ್ಲ ಸದಸ್ಯರ ತಂದೆ ತಾಯಿ ಮನೆಗೆ ಬಂದು ಹೋಗಿದ್ದಾರೆ. ʻಫ್ಯಾಮಿಲಿ ವೀಕ್‌ʼನಲ್ಲಿ ಗಿಲ್ಲಿ ನಟನಿಗೆ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಹೆಚ್ಚಿನ ಬೆಂಬಲ ದೊರೆಯಿತು. ಈ ವಿಶೇಷ ವಾರದಲ್ಲಿ ಕುಟುಂಬ ಸದಸ್ಯರಿಗೆ ಕ್ಯಾಪ್ಟನ್ಸಿ ರೇಸ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ನೀಡಲಾಗಿತ್ತು. ಈ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಅತ್ಯಧಿಕ ವೋಟ್‌ಗಳನ್ನ ಪಡೆದು ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು.

ಕ್ಯಾಪ್ಟನ್ಸಿ ರೇಸ್‌ನಲ್ಲಿ ಭರ್ಜರಿ ಟ್ವಿಸ್ಟ್! ಇವರೇ ಮನೆಯ ಹೊಸ ಅಧಿಪತಿ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 27, 2025 7:42 AM

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಫ್ಯಾಮಿಲಿ ವೀಕ್‌ ಆಗಿತ್ತು. ಮನೆಯ ಎಲ್ಲ ಸದಸ್ಯರ ತಂದೆ ತಾಯಿ ಮನೆಗೆ ಬಂದು ಹೋಗಿದ್ದಾರೆ. ʻಫ್ಯಾಮಿಲಿ ವೀಕ್‌ʼನಲ್ಲಿ ಗಿಲ್ಲಿ ನಟನಿಗೆ (Gilli Nata) ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಹೆಚ್ಚಿನ ಬೆಂಬಲ ದೊರೆಯಿತು. ಈ ವಿಶೇಷ ವಾರದಲ್ಲಿ ಕುಟುಂಬ ಸದಸ್ಯರಿಗೆ ಕ್ಯಾಪ್ಟನ್ಸಿ ರೇಸ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ನೀಡಲಾಗಿತ್ತು. ಈ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಅತ್ಯಧಿಕ ವೋಟ್‌ಗಳನ್ನ ಪಡೆದು ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು.

ವೈಸ್‌ ಕ್ಯಾಪ್ಟನ್‌ ಎಂದು ಹೇಳಿಕೊಳ್ಳುತ್ತಿದ್ದ ಗಿಲ್ಲಿ, ಕಡೆಗೂ ಈ ಸೀಸನ್‌ನಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ವಿರುದ್ಧ ಗೆದ್ದು, ಬಿಗ್‌ ಬಾಸ್‌ ಕನ್ನಡ 12 ನೇ ಸೀಸನ್‌ನ 13ನೇ ವಾರದ ಕ್ಯಾಪ್ಟನ್‌ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ.

ನಯಾ ಟ್ವಿಸ್ಟ್‌

ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ಮೊದಲಿಗೆ ಕ್ಯಾಪ್ಟನ್ಸಿ ಟಾಸ್ಕ್‌ ವೇಳೆ ನಯಾ ಟ್ವಿಸ್ಟ್‌ ಕೊಟ್ಟಿದ್ದಾರೆ. ಗಿಲ್ಲಿ ಹಾಗೂ ಅಶ್ವಿನಿ ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದೀರಿ ಎಂದು ಬಿಗ್‌ ಬಾಸ್‌ ಆದೇಶಿಸಿದೆ. ಅಶ್ವಿನಿ ಅವರು ಕ್ಯಾಪ್ಟನ್ಸಿ ರೇಸ್‌ನಲ್ಲಿ ಇದ್ದಾರೆ ಎಂದು ತಿಳಿದು ಒಂದು ಕ್ಷಣ ಗಾಬರಿ ಆದರು ಗಿಲ್ಲಿ.

ಇದನ್ನೂ ಓದಿ: Bigg Boss Kannada 12: ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಗಿಲ್ಲಿ! ಕಾವು ಉತ್ತರ ಏನು?

ಬಳಿಕ ಚೆಂಡಿನ ಟಾಸ್ಕ್‌ ನೀಡಿದ್ದಾರೆ ಬಿಗ್‌ ಬಾಸ್‌. ತಮ್ಮ ಬುಟ್ಟಿಯಲ್ಲಿ ಅತಿ ಹೆಚ್ಚು ಚೆಂಡುಗಳನ್ನು ಹೊಂದಿರುವ ಸ್ಪರ್ಧಿ ವಿನ್‌ ಆಗುತ್ತಾರೆ. ಅದರಂತೆ ಗಿಲ್ಲಿ ಟಾಸ್ಕ್‌ನಲ್ಲಿ ವಿನ್‌ ಆಗಿ, ಕ್ಯಾಪ್ಟನ್‌ ಆಗಿದ್ದಾರೆ. ಇನ್ನು ಗಿಲ್ಲಿ ಲುಕ್‌ ಚೆಂಜ್‌ ಆಗಿದೆ.

ಯಾರೆಲ್ಲ ಸಪೋರ್ಟ್‌?

ಕ್ಯಾಪ್ಟನ್‌ ರೂಂಗೆ ಅತ್ಯಂರ ಗಾಂಭೀರ್ಯದಿಂದ ಎಂಟ್ರಿ ಕೊಡುತ್ತಲೇ ಮೈಕ್‌ ಧರಿಸಿ ಎಂದು ಹೇಳಿದ್ದಾರೆ ಬಿಗ್‌ ಬಾಸ್‌ . ಸ್ಪಂದನಾ ಸೋಮಣ್ಣ ಅವರ ತಂದೆ-ತಾಯಿ, ರಘು ಅವರ ಪತ್ನಿ-ಮಗ, ಧನುಷ್‌ ಅವರ ತಾಯಿ, ಅಶ್ವಿನಿ ಗೌಡ ಅವರ ತಾಯಿ, ಧ್ರುವಂತ್‌ ಅವರ ಸಹೋದರ ಸೇರಿದಂತೆ ಹಲವರು ಗಿಲ್ಲಿಯನ್ನ ಬೆಂಬಲಿಸಿದರು.

ಪರಿಣಾಮ, ಗಿಲ್ಲಿಗೆ ಅತ್ಯಧಿಕ ವೋಟ್‌ಗಳ ಬಂದವು. ಗಿಲ್ಲಿ ಕ್ಯಾಪ್ಟನ್‌ ಆಗಿರುವುದರಿಂದ ಈ ವಾರ ಮನೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ವೈರಲ್‌ ವಿಡಿಯೋ



ಸೂರಜ್‌, ರಘು ಅಸಮಾಧಾನ

ಇನ್ನು ಗಿಲ್ಲಿ ಬಗ್ಗೆ ಇದಕ್ಕೂ ಮುಂಚೆ ರಾತ್ರಿ ಮಲಗಿರುವಾಗ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ‘ಗಿಲ್ಲಿ ಇವತ್ತು ಮಲಗೋದಿಲ್ಲ.

ಇದನ್ನೂ ಓದಿ: Bigg Boss Kannada 12: ರಜತ್ ಪ್ರಕಾರ ಬಿಗ್ ​ಬಾಸ್​ನಲ್ಲಿ ಅಶ್ವಿನಿ ಗೌಡ ಹೇಗೆ? ಗಿಲ್ಲಿ ಹೊಗಳಿದ `ಬುಜ್ಜಿ'!

ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದರು ರಘು. ಆಗ ಸೂರಜ್ ಅವರು, ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದಿದ್ದರು.