ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಎಲ್ಲರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ ಗಿಲ್ಲಿ! ಕ್ಯಾಪ್ಟನ್ಸಿ ರೇಸ್‌ಗೆ ರಾಶಿಕಾ ಆಯ್ಕೆ

Rashika Bigg Boss: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ರೆಡ್‌ ಟೀಂಗೆ ಅಶ್ವಿನಿ ಅವರು ನಾಯಕಿ ಆದ್ರೆ, ಬ್ಲೂ ತಂಡಕ್ಕೆ ಗಿಲ್ಲಿ ನಾಯಕ. ಪ್ರತಿ ಬಾರಿ ಆಡುವಾಗ, ಸ್ಪರ್ಧಿಗಳನ್ನ ಆಯ್ಕೆ ಮಾಡಬಹುದು. ಪ್ರತಿ ಬಾರಿಯೂ ತಂಡಕ್ಕ ಬೇರೆ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಇತ್ತು. ರಾಶಿಕಾ ಅವರು ಮೂರು ಬಾರಿ ಗಿಲ್ಲಿ ತಂಡಕ್ಕಾಗಿ ಆಟ ಆಡಿದರು.ಇಷ್ಟೂ ದಿನ ರಾಶಿಕಾ ಅವರು ಗ್ರೂಪಿಸಮ್‌ ಅಲ್ಲೇ ಕಳೆದು ಹೋಗಿದ್ದರು. ಆದರೆ ಈ ವಾರ ವೈಯಕ್ತಿಕವಾಗಿ ಆಟ ಆಡುತ್ತಿದ್ದಾರೆ.

ಕ್ಯಾಪ್ಟನ್ಸಿ ರೇಸ್​ಗೆ ರಾಶಿಕಾ; ಇದರ ಹಿಂದಿದೆ ಗಿಲ್ಲಿಯ ಅಚ್ಚರಿಯ ನಿರ್ಧಾರ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 21, 2025 10:29 AM

ಬಿಗ್‌ ಬಾಸ್‌ (Bigg Boss Kannada 12) ಆರಂಭವಾದಾಗಿನಿಂದಲೂ ರಾಶಿಕಾ (Rashika) ಹಾಗೂ ಗಿಲ್ಲಿ (Gilli) ಮಧ್ಯೆ ಅಂತರವಿತ್ತು. ಅದರಲ್ಲೂ ಈ ಹಿಂದೆ ಕಬ್ಬಡ್ಡಿ (Kabbaddi Task) ಟಾಸ್ಕ್‌ನಲ್ಲಿಯೂ ರಾಶಿಕಾಗೆ ಅಡ್ಡಗಾಲು ಹಾಕಿದ್ದರು ಗಿಲ್ಲಿ. ಹಾಗೇ ಸ್ಟುಡೆಂಟ್‌ ಆಫ್‌ ದಿ ವೀಕ್‌ ಪಟ್ಟ ರಾಶಿಕಾ (Rashika) ಅವರಿಗೆ ಕೊಡಲು ನಿರ್ಧಾರ ಮಾಡಿದ್ದರು. ಆದರೆ ಅದಕ್ಕೆ ಗಿಲ್ಲಿ ನಟ ಬ್ರೇಕ್‌ ಹಾಕಿದ್ದರು. ಆದರೀಗ ಎಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಕ್ಯಾಪ್ಟನ್ಸಿ (Captaincy Race) ರೇಸ್​ಗೆ ರಾಶಿಕಾರನ್ನು ಆಯ್ಕೆ ಮಾಡಿದರು. ಈ ವಾರ ರಾಶಿಕಾ ಅವರು ಮೂರು ಬಾರಿ ಗಿಲ್ಲಿ ತಂಡಕ್ಕಾಗಿ ಆಟ ಆಡಿದರು.

ಮೂರು ಬಾರಿ ಗಿಲ್ಲಿ ತಂಡಕ್ಕಾಗಿ ಆಟ ಆಡಿದ ರಾಶಿಕಾ

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ರೆಡ್‌ ಟೀಂಗೆ ಅಶ್ವಿನಿ ಅವರು ನಾಯಕಿ ಆದ್ರೆ, ಬ್ಲೂ ತಂಡಕ್ಕೆ ಗಿಲ್ಲಿ ನಾಯಕ. ಪ್ರತಿ ಬಾರಿ ಆಡುವಾಗ, ಸ್ಪರ್ಧಿಗಳನ್ನ ಆಯ್ಕೆ ಮಾಡಬಹುದು. ಪ್ರತಿ ಬಾರಿಯೂ ತಂಡಕ್ಕ ಬೇರೆ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಇತ್ತು. ರಾಶಿಕಾ ಅವರು ಮೂರು ಬಾರಿ ಗಿಲ್ಲಿ ತಂಡಕ್ಕಾಗಿ ಆಟ ಆಡಿದರು.

ಇದನ್ನೂ ಓದಿ: Bigg Boss Kannada 12: ‘ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ’ ಅಂತ ಅಶ್ವಿನಿಗೆ ಖಡಕ್‌ ಆಗಿ ಹೇಳಿದ ಗಿಲ್ಲಿ

ರಾಶಿಕಾ ಹಾಗೂ ಗಿಲ್ಲಿ ಮೊದಲಿಂದಲೂ ಅಷ್ಟಾಗಿ ಮಾತಾಡ್ತಾ ಇರಲಿಲ್ಲ. ಗಿಲ್ಲಿಯ ಪ್ರತಿ ಮಾತಿಗೂ ಉರಿದು ಬೀಳ್ತಾ ಇದ್ದರು. ಆದರೆ, ಈ ವಾರ ಅವರು ಬದಲಾಗಿದ್ದಾರೆ. ಆದರೆ ಟಾಸ್ಕ್‌ಗೆದ್ದ ಬಳಿಕ ಅಶ್ವಿನಿ, ಜಾಹ್ನವಿ, ಧನುಷ್‌ ಮಾತನಾಡಿಕೊಂಡಿದ್ದು, ಕಾವ್ಯಾಗೆ ಗಿಲ್ಲಿ ಚಾನ್ಸ್‌ ಕೊಡ್ತಾರೆ ಎಂದು. ಆದರೆ ಅವರೆಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ.



ಆಯ್ಕೆ ಬಗ್ಗೆ ಗಿಲ್ಲಿ ಕೊಟ್ಟ ಕಾರಣ

ರಾಶಿಕಾ ಅವರ ಆಯ್ಕೆ ಬಗ್ಗೆ ಗಿಲ್ಲಿ ಕೊಟ್ಟ ಕಾರಣ, ʻರಾಶಿಕಾ ಅವರನ್ನ ನಾನು ಆಯ್ಕೆ ಮಾಡುವೆ. 3 ಬಾರಿ ಸಖತ್‌ ಆಗಿ ಎಫರ್ಟ್‌ ಹಾಕಿ ಆಡಿದ್ದರು. ಇನ್ನೊಂದು ವಿಚಾರ ಏನಂದರೆ, ಕಬ್ಬಡ್ಡಿ ಟಾಸ್ಕ್‌ನಲ್ಲಿ ನಾನು ತಪ್ಪಾಗಿ ಅರ್ಥೈಸಿಕೊಂಡು ಕ್ಯಾಪ್ಟನ್ಸಿ ಓಟಕ್ಕೆ ಹೋಗದೇ ಇರೋ ತರ ಮಾಡಿದ್ದೆ. ಆ ಗಿಲ್ಟ್‌ ನನಗೂ ಇತ್ತು' ಎಂದರು. ಈ ಕಾರಣದಿಂದ ಅವರು ಕ್ಯಾಪ್ಟನ್ಸಿ ರೇಸ್​ಗೆ ರಾಶಿಕಾ ಅವರನ್ನು ಗಿಲ್ಲಿ ನಟ ಆಯ್ಕೆ ಮಾಡಿದರು.

ಇದನ್ನೂ ಓದಿ: Bigg Boss Kannada 12: ಸುದೀಪ್‌ ಮುಂದೆ ಈ ವೀಕೆಂಡ್‌ನಲ್ಲಿ ಅಶ್ವಿನಿ ಡೈಲಾಗ್‌ ಹೇಗಿರತ್ತೆ? ಹಾಗಾದ್ರೆ ಒಮ್ಮೆ ʻಗಿಲ್ಲಿ' ಮಾತು ಕೇಳಿಬಿಡಿ!

ಸಖತ್‌ ಆಗಿ ಆಡ್ತಿರೋ ರಾಶಿಕಾ

ಇಷ್ಟೂ ದಿನ ರಾಶಿಕಾ ಅವರು ಗ್ರೂಪಿಸಮ್‌ ಅಲ್ಲೇ ಕಳೆದು ಹೋಗಿದ್ದರು. ಆದರೆ ಈ ವಾರ ವೈಯಕ್ತಿಕವಾಗಿ ಆಟ ಆಡುತ್ತಿದ್ದಾರೆ. ಅಶ್ವಿನಿ ಅವರು ಕೂಗಾಡಿದ ಬಳಿಕ ರಿಷಾ ಅವರ ಬಳಿ ರಘು ಅವರದ್ದೇ ಸರಿ ಎಂದು ಮಾತನಾಡಿದ್ದಾರೆ. ಅಷ್ಟೇ ಅಲ್ಲ ಈ ವಾರ ತುಂಬಾ ಪ್ರಬುದ್ಧತೆಯಿಂದ ಆಟ ಆಡಿ, ಮಾತನಾಡುವಲ್ಲಿ ಮಾತ್ರ ಧ್ವನಿ ಎತ್ತುತ್ತಿದ್ದಾರೆ.