ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಕ್ಯಾಪ್ಟನ್ಸಿ ರೇಸ್‌ನಲ್ಲಿ (Captaincy Race) ಪೈಪೋಟಿ ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್ಗಳು ಜೋರಾಗಿ ನಡೆಯುತ್ತಿದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ (Finale) ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ. ಇದೀಗ ಆಡುವ ಭರದಲ್ಲಿ ಧ್ರುವಂತ್ ಅವರು ಕಾವ್ಯ ಅವರಿಗೆ ಕಾವ್ಯ ಬಾಯ್ ಮುಚ್ಕೊಂಡ್ ಕೂತ್ಕೋ ಎಂದೂ ಹೇಳಿದ್ದಾರೆ.
ಧ್ರುವಂತ್ ಅನ್‌ಫೇರ್ ಆಟ!
ಹೊಸ ಪ್ರೋಮೋ ವೈರಲ್ ಆಗಿದೆ. ಧ್ರುವಂತ್ ಉಸ್ತುವಾರಿ ವಹಿಸಿಕೊಂಡಂತಿದೆ. ಬಿಗ್ ಬಾಸ್ ಒಂದು ಟಾಸ್ಕ್‌ಗಳನ್ನು ನೀಡಿದ್ದರು. ಸುರಂಗದಲ್ಲಿರುವ ಪೈಪ್‌ವನ್ನು ತೆಗೆದು, ದಾರಿಯಲ್ಲಿ ಸರಿ ಪಡಿಸಿಕೊಳ್ಳಬೇಕು. ಮೊದಲು ಘಂಟೆ ಬಾರಿಸುವ ಜೋಡಿ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅರ್ಹತೆ ಪಡೆಯುತ್ತದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕಾ ಪ್ಲೇಯರ್; ಶೋಗೆ ನ್ಯಾಯ ಒದಗಿಸುತ್ತ ಇರೋದು ಇವರೇ ಎಂದ ಸೂರಜ್!
ಈ ವೇಳೆ ಹತ್ತು ಸೆಕೆಂಡ್ ಧ್ರುವಂತ್ ಅವರು ಗಿಲ್ಲಿ ಅವರ ಆಟವನ್ನು Pause ಮಾಡಿದ್ದಾರೆ. ಈ ಬಗ್ಗೆ ರಾಶಿಕಾ ಅವರಿಗೆ ಸಿಟ್ಟು ಬಂದಿದೆ. ರಕ್ಷಿತಾ ಕೂಡ ಅನ್‌ಫೇರ್ ಎಂದಿದ್ದಾರೆ. ಕಾವ್ಯ ಕೂಡ ಗಿಲ್ಲಿ ಪರ ನಿಂತಿದ್ದಾರೆ. ಈ ವೇಳೆ ಧ್ರುವಂತ್ ಅವರು ಗಿಲ್ಲಿಗೆ ಬಾಯ್ ಮುಚ್ಕೊಂಡ್ ಕೂತ್ಕೋ, ನಾನ್ ಮಾಡ್ತೀನಿ ಎಂದಿದ್ದಾರೆ. ಈ ಮಾತನ್ನು ಗಿಲ್ಲಿಗೆ ಹೇಳಿದ್ರಾ ಅಥವಾ ಕಾವ್ಯಗೆ ಅಂದ್ರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ವೈರಲ್ ಪ್ರೋಮೋ
ಹೇಗಿತ್ತು ಟಾಸ್ಕ್?
ಮೊದಲಿಗೆ ಸ್ಪಂದನಾ ಮತ್ತು ರಾಶಿಕಾ ನಡುವೆ ಬಿಲ್ಲೆಯ ಟಾಸ್ಕ್ ಒಂದು ನಡೆಯಿತು. ರಾಶಿಕಾ ತೋಳ್ಬಲ ಬಳಸಿ ಸ್ಪಂದನಾ ಗೆಲ್ಲದಂತೆ ತಡೆದರು ಮಾತ್ರವಲ್ಲದೆ ಕಡಿಮೆ ಬಿಲ್ಲೆಗಳಿದ್ದರೂ ಸಹ ಗೆದ್ದು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆದರು. ಬಳಿಕ ಪುರುಷ ಸ್ಪರ್ಧಿಗಳಿಗೆ ಟಾಸ್ಕ್ ಆಯೋಜನೆ ಆಯ್ತು. ಈ ಟಾಸ್ಕ್ನಲ್ಲಿ ಧನುಶ್ ಭರ್ಜರಿ ಮುನ್ನಡೆಯಿಂದ ಗೆದ್ದರು. ದ್ವಿತೀಯ ಸ್ಥಾನ ಪಡೆದಿದ್ದು ರಘು, ತೃತೀಯ ಸ್ಥಾನ ಧ್ರುವಂತ್ ಪಡೆದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್
ಗಿಲ್ಲಿಗೆ ರಘು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆಗಬೇಕಿತ್ತು ಆದರೆ ಅಶ್ವಿನಿ ಧ್ರುವಂತ್ ಪರವಾಗಿ ನಿಂತಿದ್ದರು. ಬಹಳ ಹೊತ್ತು ಚರ್ಚೆ, ಜಗಳ, ವಾಗ್ವಾದ ನಡೆಯಿತು. ಅಂತಿಮವಾಗಿ ರಘು ಅವರನ್ನು ಆಯ್ಕೆ ಮಾಡಲಾಯ್ತು.