BBK 12: ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್ ಆದ ʻಕಾಕ್ರೋಚ್ʼ ಸುಧಿಗೆ ಬಿಗ್ ಬಾಸ್‌ನಿಂದ ಸಿಕ್ಕ ಹಣವೆಷ್ಟು?
Bigg Boss Kannada 12: ಕಾಕ್ರೋಚ್ ಸುಧಿ ಅವರು 49 ದಿನಗಳ ನಂತರ ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ. ಪ್ರಬಲ ಸ್ಪರ್ಧಿಯಾಗಿದ್ದರೂ, ಅವರು ಹೊರಬಿದ್ದಿರುವುದು ವೀಕ್ಷಕರಿಗೆ ಶಾಕ್ ನೀಡಿದೆ. ಎಲಿಮಿನೇಟ್ ಆದ ಸುಧಿಗೆ ಬಹುಮಾನವಾಗಿ ಸಿಕ್ಕ ಹಣವೆಷ್ಟು? ಇಲ್ಲಿದೆ ಮಾಹಿತಿ.
-
ʻಬಿಗ್ ಬಾಸ್ʼ ಮನೆಯಿಂದ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದಾರೆ. ಈ ಸೀಸನ್‌ನ ಪ್ರಬಲ ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ ಕೂಡ ಒಬ್ಬರು. ಆದರೆ 50 ದಿನಗಳು ಕಳೆಯುವುದರೊಳಗೆ ಅವರು ಎಲಿಮಿನೇಟ್ ಆಗಿದ್ದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಅಂದಹಾಗೆ, ಎಲಿಮಿನೇಟ್ ಆದ ಕಾಕ್ರೋಚ್ ಸುಧಿಗೆ ಸಿಕ್ಕ ಹಣವೆಷ್ಟು? ಮುಂದೆ ಓದಿ.
ಸುಧಿಗೆ ಸಿಕ್ಕಿದೆ ನಗದು ಬಹುಮಾನ
ಬಿಗ್ ಬಾಸ್ ಮನೆಯಲ್ಲಿ 49 ದಿನಗಳ ಕಾಲ ಇದ್ದ ಕಾಕ್ರೋಚ್ ಸುಧಿ, ಈಗ ಎಲಿಮಿನೇಟ್ ಆಗಿದ್ದಾರೆ. ಅವರಿಗೆ 123 ನ್ಯೂಡಲ್ಸ್ ಕಡೆಯಿಂದ 1 ಲಕ್ಷ ರೂ. ನಗದು ಬಹುಮಾನ ದೊರಕಿದೆ. ಜೊತೆಗೆ 50 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಕೂಡ ಸಿಕ್ಕಿದೆ. ಒಟ್ಟು 1.50 ಲಕ್ಷ ರೂ. ಮೊತ್ತದ ಬಹುಮಾನ ಅವರಿಗೆ ದಕ್ಕಿದೆ. ಅಂದಹಾಗೆ, ಇದು ಅವರು ಎಲಿಮಿನೇಷನ್ ಆದಾಗ ನೀಡಿದ ಬಹುಮಾನವಾಗಿದೆ.
Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ
ಇದರ ಜೊತೆಗೆ ವಾರಕ್ಕೆ ಇಂತಿಷ್ಟು ಎಂದು ʻಬಿಗ್ ಬಾಸ್ʼ ಕಡೆಯಿಂದ ಸಂಭಾವನೆ ಫಿಕ್ಸ್ ಆಗಿರುತ್ತದೆ. ಸುಮಾರು 7 ವಾರ ಬಿಗ್ ಬಾಸ್ ಮನೆಯಲ್ಲಿದ್ದ ಸುಧಿಗೆ ಆ ಮೊತ್ತವು ಸಿಗಲಿದೆ. ಒಟ್ಟಿನಲ್ಲಿ ಪ್ರಬಲ ಸ್ಪರ್ಧಿಯೊಬ್ಬರು ಈ ವಾರ ಎಲಿಮಿನೇಟ್ ಆಗಿದ್ದು ವೀಕ್ಷಕರಿಗೂ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ.
ಫಿನಾಲೆ ವಿನ್ನರ್ ಆಗಿದ್ದ ಕಾಕ್ರೋಚ್ ಸುಧಿ
ವಿಶೇಷವೆಂದರೆ, ಕಾಕ್ರೋಚ್ ಸುಧಿ ಈ ಬಾರಿ ನೇರವಾಗಿ ಜನರ ಬಳಿ ಹೋಗಿ, "ಬಿಗ್ ಬಾಸ್‌ಗೆ ನಾನು ಹೋಗಬೇಕಾ? ಬೇಡ್ವಾ" ಎಂದು ಅಭಿಪ್ರಾಯ ಕೇಳಿದ್ದರು. ಈ ರೀತಿ ಸ್ಪರ್ಧಿಯೇ ನೇರವಾಗಿ ಜನರ ಬಳಿ ಅಭಿಪ್ರಾಯ ಕೇಳಿ, ಆನಂತರ ಬಿಗ್ ಬಾಸ್‌ಗೆ ಹೋಗಿದ್ದು ಇದೇ ಮೊದಲು. ಆ ರೀತಿ ಹೋಗಿದ್ದು ಕಾಕ್ರೋಚ್ ಸುಧಿ ಅವರ ಸಾಧನೆ. ಈ ಬಾರಿ ಮೂರನೇ ವಾರದಲ್ಲೇ ಒಂದು ಫಿನಾಲೆ ಮಾಡಲಾಗಿತ್ತು. ಅದರಲ್ಲಿ ಕಾಕ್ರೋಚ್ ಸುಧಿ ವಿನ್ನರ್ ಆಗಿದ್ದರು. ಆಗ ಅವರಿಗೆ ಒಂದು ಸೂಪರ್ ಪವರ್ ಸಿಕ್ಕಿತ್ತು. ಎಲಿಮಿನೇಷನ್‌ನಿಂದ ಬಚಾವ್ ಆಗುವ ಅವಕಾಶ ಅದಾಗಿತ್ತು. ಆದರೆ ಕಳೆದ ವಾರ ಅದನ್ನೂ ಕೂಡ ಕಾಕ್ರೋಚ್ ಸುಧಿ ಕಳೆದುಕೊಂಡಿದ್ದರು.
ಕಾಕ್ರೋಚ್ ಸುಧಿ ಪತ್ನಿ ಏನಂದ್ರು?
ಇನ್ನು, ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಿರುವುದಕ್ಕೆ ಅವರ ಪತ್ನಿ ಬೇಸರ ಮಾಡಿಕೊಂಡಿದ್ದಾರೆ. ಸುದೀಪ್ ಎದುರೇ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, "ಸುಧಿಗೆ ಉತ್ತಮವಾಗಿ ಆಟ ಆಡುವ ಸಾಮರ್ಥ್ಯ ಇತ್ತು. ಆದರೆ ಅವರು ಮಾಡಲಿಲ್ಲ. ಅಶ್ವಿನಿ ಗೌಡ, ಜಾಹ್ನವಿ ಅವರ ಗ್ರೂಪ್‌ನಲ್ಲಿ ಕಳೆದು ಹೋಗಬಾರದಿತ್ತು" ಎಂದು ಹೇಳಿದ್ದಾರೆ.
Bigg Boss Kannada 12: ಬಿಗ್ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್; ʻಸೂಪರ್ ಪವರ್ʼ ಸುಧಿಯ ಜರ್ನಿ ಹೇಗಿತ್ತು?
ಅಂದಹಾಗೆ, ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲಿ ಅಂತಿಮವಾಗಿ ಜಾಹ್ನವಿ, ರಘು, ರಿಷಾ ಗೌಡ ಮತ್ತು ಕಾಕ್ರೋಚ್ ಸುಧಿ ಅಂತಿಮ ಸುತ್ತಿನಲ್ಲಿದ್ದರು. ಅವರಲ್ಲಿ ಸುಧಿ ಅವರು ಎಲಿಮಿನೇಟ್ ಆಗಿ ಹೊರಬಂದರೆ, ಉಳಿದ ಮೂವರು ನಿಟ್ಟುಸಿರು ಬಿಟ್ಟು ವಾಪಸ್ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.