BBK 12: ಗಿಲ್ಲಿ ಬಗ್ಗೆ ಒಂದಕ್ಕಿಂತ ಒಂದು ಸೂಪರ್ ಸಾಂಗ್ಸ್; ಸೋಶಿಯಲ್ ಮೀಡಿಯಾ ತುಂಬಾ ಮಾತಿನ ಮಲ್ಲನ ಹವಾ, ಬಿಗ್ ಬಾಸ್‌ನಲ್ಲೇ ಇದು ಮೊದಲು!
Bigg Boss Kannada 12 Gilli Nata: ಗಿಲ್ಲಿ ನಟ ಅವರು ತಮ್ಮ ಒನ್ ಮ್ಯಾನ್ ಶೋ ಆಟದ ಶೈಲಿಯಿಂದ ಮತ್ತು ತಮ್ಮ ಮಾತಿನಿಂದಾಗಿ ಭಾರಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಅವರಿಗೆ ಫ್ಯಾನ್ಸ್ ಹೊಸ ಹಾಡುಗಳನ್ನು ರಚಿಸುತ್ತಿದ್ದಾರೆ.
-
ಬಿಗ್ ಬಾಸ್ ಮನೆಯಲ್ಲಿ ಒನ್ ಮ್ಯಾನ್ ಶೋನಂತೆ ಆಟ ಆಡುತ್ತಿರುವ ಗಿಲ್ಲಿ ನಟ ಅವರಿಗೆ ಫ್ಯಾನ್ಸ್ ಬಳಗ ದೊಡ್ಡದಾಗುತ್ತಿದೆ. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಬಂದಿದ್ದಾರೆ. ಈ ಮಧ್ಯೆ ಗಿಲ್ಲಿಯನ್ನು ಸಪೋರ್ಟ್ ಮಾಡಿ, ಹಾಡುಗಳನ್ನು ರಚಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಂತ ಹಾಡುಗಳದ್ದೇ ಎನ್ನಬಹುದು. ಅಷ್ಟೊಂದು ಕ್ರೇಜ್ ಈಗ ಶುರುವಾಗಿದೆ.
ಡಮಾಲ್ ಡಿಮಿಲ್ ಡಕ್ಕಾ!
ಈಚೆಗೆ ಸುದೀಪ್ ಅವರ ಎದುರಿಗೆ ನಡೆದ ವೀಕೆಂಡ್ ಸಂಚಿಕೆಯಲ್ಲಿ ಗಿಲ್ಲಿ ನಟ ಅವರು ಡಮಾಲ್ ಡಿಮಿಲ್ ಡಕ್ಕಾ ಎಂದು ಫನ್ನಿ ಸಾಂಗ್ ಹಾಡಿದ್ದರು. ಇದೀಗ ಅದೇ ಹಾಡನ್ನು ಹೊಸದಾಗಿ ಕಂಪೋಸ್ ಮಾಡಲಾಗಿದೆ. "ಬಂದಿದ್ದು ಒಬ್ಬನೇ, ಗೆಲ್ಲೋದು ಒಬ್ಬನೇ, ಕೆಣಕಬೇಡಿ ಸುಮ್ಮನೆ.. ಡಮಾಲ್ ಡಿಮಿಲ್ ಡಕ್ಕಾ.." ಎಂಬ ಕ್ಯಾಚಿ ಲಿರಿಕ್ಸ್ ಬರೆದು ಈ ಹಾಡನ್ನು ಕಂಪೋಸ್ ಮಾಡಲಾಗಿದೆ. ನಂತರ, "ಮಾತಲ್ಲೇ ಬಾಣನಾ ಸರ್ ಅಂತ ಬಿಡ್ತಾನೆ, ಕೌಂಟರ್‌ಗೆ ಎನ್‌ಕೌಂಟರ್.. ಗಿಲ್ಲಿ ಗೆಲ್ಲೋದು ಪಕ್ಕಾ.. ಮಾತಲ್ಲೇ ನಗಿಸ್ತಾನೆ, ನಲಿಸ್ತಾನೆ ಉರಿಸ್ತಾನೆ.. ಗಿಲ್ಲಿ..." ಎಂದು ಹಾಡು ಸಾಗುತ್ತದೆ.
ಗಿಲ್ಲಿ ಬಗ್ಗೆ ಮಸ್ತ್ ಸಾಂಗ್
New Song... ಡಮಾಲ್ ಡಿಮಿಲ್ ಡಕ್ಕಾ
— Pramod (@PRAMODBSG) December 4, 2025
The only contestant who has won the hearts of so many fans in such a short time is Gilii.#Gilli 🔥#GilliNata #BBKSeason12 #BBK12 pic.twitter.com/QqAOzmkG3F
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
"ಬಿಗ್ ಬಾಸ್‌ನಲ್ಲಿ.. ಗಿಲ್ಲಿ ಗಿಲ್ಲಿ ಗಿಲ್ಲಿ.. ಕಿಂಗ್ ಮಾತಲ್ಲಿ.. ಗಿಲ್ಕಿ ಆಡಿಸ್ದಾಂಗೆ ಆಡಿಸ್ತಾನಿಲ್ಲಿ.. ಡಮಾಲ್ ಡಿಮಿಲ್ ಡಕ್ಕಾ.. ಗಿಲ್ಲಿ ಗೆಲ್ಲೋದು ಪಕ್ಕಾ.." ಎಂದು ಪಂಚಿಂಗ್ ಪದಗಳನ್ನು ಈ ಹಾಡಿನಲ್ಲಿ ಸೇರಿಸಲಾಗಿದೆ. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಓಂ ಚಿತ್ರ ಹಾಡು ರಿಮಿಕ್ಸ್
ಕನ್ನಡ ಹಾಡುಗಳು ಗಿಲ್ಲಿಗಾಗಿ ರಿಮಿಕ್ಸ್!
ಶಶಾಂಕ್ ಎಂಬುವವರು ಓಂ ಸಿನಿಮಾದ ಮೆಹಬೂಬಾ ಸಾಂಗ್ ಅನ್ನು ಗಿಲ್ಲಿಗಾಗಿ ರಿಮಿಕ್ಸ್ ಮಾಡಲಾಗಿದೆ. "ಕೌಂಟ್ರಲ್ಲಿ ಪಂಟರು.. ರೋಸ್ಟಲ್ಲಿ ಮಾಸ್ಟರು.. ಸೂರ್ಯವಂಶದ ಕುಡಿ.. ಪಕ್ಕಾ ಎಂಟರ್‌ಟೇನರು.. ಮಂಡ್ಯದ ಹುಲಿ, ಅಪೋನೆಂಟ್ ಯಾರಿರ್ಲಿ, ತಗ್ಲಾಕೊಂಡ್ ಬಿಟ್ರೆ ಬಲಿ.. ಮಾತಲ್ಲೇ ಮ್ಯಾಜಿಕ್ಕು, ಕೌಂಟ್ರಲ್ಲೇ ಲಾಜಿಕ್ ಕ್ಯಾಪ್ಟನ್ ಯಾರಿರ್ಲಿ.. ವೈಸ್ ಕ್ಯಾಪ್ಟನ್ ನಮ್ ಗಿಲ್ಲಿ.. ಭಲೇ ಭಲೇ ಭಲೇ ಎಂಟರ್ಟೇನರ್.." ಎಂಬ ಸಾಲುಗಳನ್ನು ಬರೆದು ಸಖತ್ ಆಗಿರುವ ರಿಮಿಕ್ಸ್ ಮಾಡಿದ್ದಾರೆ. ಇದರ ಜೊತೆಗೆ ತೃಪ್ತಿ ವೆಂಕಟೇಶ್ ಎಂಬುವವರು ಉಪೇಂದ್ರ ಅವರ ರಕ್ತ ಕಣ್ಣೀರು ಚಿತ್ರದ ಡೇಂಜರ್ ಸಾಂಗ್ ಅನ್ನು ಗಿಲ್ಲಿ ನಟನಿಗಾಗಿ ರಿಮಿಕ್ಸ್ ಮಾಡಿದ್ದಾರೆ. ಇದು ಕೂಡ ಸಖತ್ ಆಗಿ ಮೂಡಿಬಂದಿದೆ.
ರಕ್ತ ಕಣ್ಣೀರು ಚಿತ್ರದ ಹಾಡು ರಿಮಿಕ್ಸ್
ಒಟ್ಟಾರೆಯಾಗಿ ಗಿಲ್ಲಿ ನಟ ಬಗೆ ದಿನದಿಂದ ದಿನಕ್ಕೆ ಕ್ರೇಜ್ ಜಾಸ್ತಿ ಆಗ್ತಿರುವುದಂತೂ ಪಕ್ಕಾ. ಈಚೆಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಕೆಲ ಸ್ಪರ್ಧಿಗಳು ಕೂಡ ಈ ಸಲ ಗಿಲ್ಲಿನೇ ಗೆಲ್ಲೋದು ಕಾನ್ಫಿಡೆಂಟ್ ಆಗಿ ಹೇಳುತ್ತಿರುವುದು ಕೂಡ ಗಿಲ್ಲಿಗಿರುವ ಜನಪ್ರಿಯತೆಯನ್ನು ಸಾರಿ ಸಾರಿ ಹೇಳುತ್ತಿದೆ.