ಬಿಗ್ ಬಾಸ್ ಮನೆಯಲ್ಲಿ ರಾಜಮಾತೆ ಎಂದು ಕರೆಸಿಕೊಂಡ ಅಶ್ವಿನಿ ಗೌಡ ಮತ್ತು ಟಾಸ್ಕ್ ಮಾಸ್ಟರ್ ಎನಿಸಿಕೊಂಡ ಧನುಷ್ ಈಗ ಫಿನಾಲೆ ತಲುಪಿದ್ದಾರೆ. ಅಶ್ವಿನಿ ಅವರು ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದರೆ, ಧನುಷ್ ಕಿರುತೆರೆಯಲ್ಲಿ ಅಪಾರವಾದ ಜನಪ್ರಿಯತೆಯನ್ನು ಹೊಂದಿದ್ದಾರೆ. 112 ದಿನಗಳ ಕಾಲ ಇವರಿಬ್ಬರು ಬಿಗ್ ಬಾಸ್ ಮನೆಯಲ್ಲಿ ಇದ್ದು, ಈಗ ಫಿನಾಲೆ ತಲುಪಿದ್ದಾರೆ. ಇವರ ಬಗ್ಗೆ ಬಿಗ್ ಬಾಸ್ ತಮ್ಮದೇ ಆದ ಶೈಲಿಯಲ್ಲಿ ವರ್ಣನೆ ಮಾಡಿದ್ದಾರೆ.
ಧನುಷ್ ಮತ್ತು ಅಶ್ವಿನಿ ಗೌಡ ಅವರ ಜರ್ನಿ ಹೇಗಿತ್ತು?
ಇಂದು ಫಿನಾಲೆ ಇರುವ ಕಾರಣ, ಧನುಷ್ ಮತ್ತು ಅಶ್ವಿನಿ ಗೌಡ ಅವರಲ್ಲಿನ ಪಾಸಿಟಿವ್ ಅಂಶಗಳು, ಅವರು ನಡೆದುಕೊಂಡು ಬಂದ ಹಾದಿ, ಅವರು ಎದುರಿಸಿದ ಸವಾಲುಗಳನ್ನು ಒಂದೊಂದು ಪ್ರೋಮೋ ಮೂಲಕ ಕಲರ್ಸ್ ಕನ್ನಡ ಹಂಚಿಕೊಂಡಿದೆ.
BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
ಧನುಷ್ ಅವರ ಬಗ್ಗೆ ಹೇಳಿದ್ದೇನು?
ಧನುಷ್ ಅವನ್ನು ಕಲರ್ಸ್ ಕನ್ನಡ "ಟಾಸ್ಕ್ ಮಾಸ್ಟರ್, ನೋ ಫಿಲ್ಟರ್" ಎಂದು ಕರೆದಿದೆ. ಜೊತೆಗೆ ಅವರ ಬಗ್ಗೆ ಐದು ಅಂಶಗಳನ್ನು ಹಂಚಿಕೊಂಡಿದೆ.
- ಟಾಸ್ಕ್ ಮಾಸ್ಟರ್
- ಅಗತ್ಯ ಇದ್ದರಷ್ಟೇ ಮಾತು
- ಬಿಗ್ ಬಾಸ್ ಮನೆಯ ಹುಡುಗಿಯರ ಬೆಸ್ಟೀ
- ಸುಮ್ನಿದ್ರೆ ಸೈಲೆಂಟ್, ಕೆಣಕಿದ್ರೆ ವೈಲೆಂಟ್
- ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಂಬರ್ 1
ಅಶ್ವಿನಿ ಬಗ್ಗೆ ಹೇಳಿದ್ದೇನು?
ಧನುಷ್ ಅವರಿಗೆ ಹೇಳಿದಂತೆಯೇ, ಅಶ್ವಿನಿ ಗೌಡಗೆ "ಸವಾಲಿಗೇ ಸವಾಲು ಹಾಕೋ ಎದೆಗಾತಿ" ಎಂದು ಕರೆದಿರುವ ಬಿಗ್ ಬಾಸ್ ತಂಡ, ಅವರ ಬಗೆಗಿನ ಐದು ಪಾಸಿಟಿವ್ ಪಾಯಿಂಟ್‌ಗಳನ್ನು ಎತ್ತಿ ಹಿಡಿದಿದೆ.
- ತಾಕತ್ತು ಪದಕ್ಕೆ ಮತ್ತೊಂದು ಹೆಸರು
- ಊಟಕ್ಕಿಂತ ಮರ್ಯಾದೆ ಮುಖ್ಯ
- ವಾದಕ್ಕೆ ನಿಂತ್ರೆ ಹಿಂದೆ ಸರಿಯೋ ಮಾತೇ ಇಲ್ಲ
- ಅನಾಲಿಸಿಸ್ ಮಾಡೋದ್ರಲ್ಲಿ ಎತ್ತಿದ ಕೈ
- ಮಾತು ಮಾತ್ರ ಅಲ್ಲ, ಆಟನೂ ಸ್ಟ್ರಾಂಗ್
Bigg Boss Kannada 12: ಸೈಲೆಂಟ್ ಆಗಿರೋ ಅಶ್ವಿನಿ ಗೌಡರನ್ನ ಮತ್ತೆ ಕೆಣುಕಿದ ಗಿಲ್ಲಿ! ಏನಿದು ಅಶ್ವಿನಿ 2.0?
ಇದಿಷ್ಟೇ ಅಲ್ಲ, ರಘು, ಕಾವ್ಯ, ರಕ್ಷಿತಾ, ಗಿಲ್ಲಿ ನಟ ಅವರ ಬಗ್ಗೆಯೂ ಬಿಗ್ ಬಾಸ್ ತಂಡ ಇದೇ ಮಾದರಿಯ ಪ್ರೋಮೋಗಳನ್ನು ಹಂಚಿಕೊಳ್ಳಲಿದೆ. ಅವರ ಬಗೆಗಿನ ಪಾಟಿಸಿವ್ ವಿಚಾರಗಳನ್ನು ತಿಳಿಸಲಿದೆ.