ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ, ಅವರಿಗಿಂತ ನನ್ನಲ್ಲಿ ಹೆಚ್ಚು ಕ್ವಾಲಿಟಿ ಇತ್ತು ಎಂದ ಮಾಳು!

malu nipanal: 'ಬಿಗ್‌ಬಾಸ್ ಕನ್ನಡ-12' ಸ್ಪರ್ಧಿಗಳಲ್ಲಿ ಒಬ್ಬರಾದ ಮಾಳು ನಿಪನಾಳ ದೊಡ್ಮನೆಯಿಂದ ಹೊರಬಂದಿರೋದು ಗೊತ್ತೇ ಇದೆ. ಬಿಗ್‌ ಬಾಸ್ ಮನೆಯಿಂದ ಔಟ್ ಆಗಿರೋ ಮಾಳು ಅವರು ನಿರಂತರವಾಗಿ ಮಾದ್ಯಮಗಳಿಗೆ ಸಂದರ್ಶನ ಕೊಡುತ್ತಾ ಬ್ಯುಸಿ ಆಗಿದ್ದಾರೆ.. ಮೀಡಿಯಾ ಜೊತೆ ಮಾತನಾಡುತ್ತಾ ಮಾಳು ಅವರು ಕೆಲವೊಂದು ಸ್ಟೇಟ್‌ಮೆಂಟ್ ನೀಡಿ ಗಿಲ್ಲಿ ಫ್ಯಾನ್ಸ್‌ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮಾಳು ಅವರು ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ, ಅವರಿಗಿಂತ ನನ್ನಲ್ಲಿ ಹೆಚ್ಚು ಕ್ವಾಲಿಟಿ ಇತ್ತು ಎಂದು ನೇರವಾಗಿ ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ

'ಬಿಗ್‌ಬಾಸ್ ಕನ್ನಡ-12' (Bigg Boss Kannada 12) ಸ್ಪರ್ಧಿಗಳಲ್ಲಿ ಒಬ್ಬರಾದ ಮಾಳು ನಿಪನಾಳ (Malu Nipanal) ದೊಡ್ಮನೆಯಿಂದ ಹೊರಬಂದಿರೋದು ಗೊತ್ತೇ ಇದೆ. ಬಿಗ್‌ ಬಾಸ್ ಮನೆಯಿಂದ ಔಟ್ ಆಗಿರೋ ಮಾಳು (Malu Nipanala) ಅವರು ನಿರಂತರವಾಗಿ ಮಾದ್ಯಮಗಳಿಗೆ ಸಂದರ್ಶನ ಕೊಡುತ್ತಾ ಬ್ಯುಸಿ ಆಗಿದ್ದಾರೆ.. ಮೀಡಿಯಾ ಜೊತೆ ಮಾತನಾಡುತ್ತಾ ಮಾಳು ಅವರು ಕೆಲವೊಂದು ಸ್ಟೇಟ್‌ಮೆಂಟ್ ನೀಡಿ ಗಿಲ್ಲಿ ಫ್ಯಾನ್ಸ್‌ ಗಳ (Gilli Fans) ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮಾಳು ಅವರು ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ, ಅವರಿಗಿಂತ ನನ್ನಲ್ಲಿ ಹೆಚ್ಚು ಕ್ವಾಲಿಟಿ ಇತ್ತು ಎಂದು ನೇರವಾಗಿ ಹೇಳಿದ್ದಾರೆ.

ಚಪ್ಪಾಳೆಕ್ಕಿಂತ ದೊಡ್ಡದು

ಜನರಿಂದ ನಾನು ಕ್ಯಾಪ್ಟನ್‌ ಆಗಿದ್ದೇನೆ. ವ್ಯಕ್ತಿತ್ವಕ್ಕೆ ಎಷ್ಟು ಬೇಕು ಅಷ್ಟು ಆಡಿದ್ದೇನೆ. ಕಿಚ್ಚ ಸುದೀಪ್‌ ಅವರ ಚಪ್ಪಾಳೆ ತೆಗೆದುಕೊಳ್ಳೊಕ್ಕಿಂತ ಹೆಚ್ಚಾಗಿ, ಅವರನ್ನು ಭೇಟಿ ಮಾಡಬೇಕು ಅನ್ನೋ ಆಸೆ ತುಂಬಾ ಇತ್ತು. ಅದರಂತೆ ಹಲವರಿಗೆ ನಾನು ಸಂಪರ್ಕ ಕೂಡ ಮಾಡಿದ್ದೆ, ಸುದೀಪ್‌ ಅವರನ್ನು ಭೇಟಿ ಆಗಬೇಕು ಎಂದು. ಆದರೆ ಆಗೇ ಇರಲಿಲ್ಲ. ಅವರನ್ನು ಹಗ್‌ ಮಾಡಿದ್ದು ಖುಷಿ ಆಯು. ದೇವರ ದರ್ಶನ ಆದಂಗಾಯ್ತು. ಚಪ್ಪಾಳೆಕ್ಕಿಂತ ದೊಡ್ಡದು ಎಂದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕನ್ನಡ ಕಿರುತೆರೆ ನಟಿ ಮೆಚ್ಚುಗೆ

ಟಾಸ್ಕ್‌ನಲ್ಲಿ ಗ್ರೂಪ್‌ ಮೂಲಕ ಆಡಿದ್ದು, ವೈಯಕ್ತಿಕವಾಗಿ ಆಡಲು ಆಗಿಲ್ಲ. ಈಗಲಾದರೂ ವೈಯಕ್ತಿಕವಾಗಿ ಗೆಲ್ಲುತ್ತೇನೆ. ನಾಲ್ಕು ಜನ ಜೊತೆ ಸೋಲ್ತೀನಿ ಅಂದರೆ ನಾನು ಒಪ್ಪಲ್ಲ. ವೈಯಕ್ತಿಕವಾಗಿ ಸೋತಿದ್ದರೆ ಒಪ್ಪಿಕೊಳ್ಳುತ್ತೇನೆ. ನಾನು ಸೋತೆ ಅಂತ ಹೇಳಲ್ಲ ಎಂದಿದ್ದಾರೆ.



ನಂದು ಗಿಲ್ಲಿದು ವ್ಯಕ್ತಿತ್ವ ಮ್ಯಾಚ್ ಆಗಲ್ಲ

ನಾನೊಬ್ಬ ಸಿಂಗರ್‌, ಗಿಲ್ಲಿ ರಿಯಾಲಿಟಿ ಶೋನಲ್ಲಿ ಇದ್ದವರು. ನನ್ನ ವ್ಯಕ್ತಿತ್ವಕ್ಕೂ ಅವರದ್ದು ಮ್ಯಾಚ್‌ ಆಗುವುದಿಲ್ಲ. ಅವರು ಬಂದಿರೋ ದಾರಿ ಬೇರೆ. ನಂದೇ ಬೇರೆ. ಅವರಿಗೆ ಚಾನ್ಸ್‌ ಸಿಕ್ಕಿದೆ. ಬಳಕೆ ಮಾಡಿಕೊಂಡಿದ್ದಾರೆ. ಕಾಮಿಡಿ ಅವರಷ್ಟು ನಾನು ಮಾಡಲ್ಲ. ಬರೊಲ್ಲ. ಅವರಿಗೆ ಸಿಗಿಂಗ್‌ ಬರಲ್ಲ. ಅವರಿಗಿಂತ ಹೆಚ್ಚು ಕ್ವಾಲಿಟಿ ನಂಗೆ ಇತ್ತು. ಒಳ್ಳೆಯ ವ್ಯಕ್ತಿ. ಯಾವುದೋ ಒಂದು ಚಟುವಟಿಕೆ ಅಂತ ಬಂದಾಗ, ಕಾವ್ಯ ಹಾಗೂ ನಾನೇ ಫೈನಲಿಸ್ಟ್‌ ಅನ್ನೋ ಭಾವನೆ ಇದೆ.

ಎಲ್ಲರೂ ಗೆಲ್ಲಲ್ಲು ಬಂದಿರೋದು. ಕಾಮಿಡಿ ಓಕೆ, ಅವರು ತುಂಬಾ ಬೇರೆಯವರನ್ನು ಕೀಳು ಮಟ್ಟಕ್ಕೆ ಮಾತಾಡ್ತಾರೆ. ಅದು ನನಗೆ ಇಷ್ಟವಾಗುದಿಲ್ಲ. ರಘು ಅವರು ಎಷ್ಟೋ ಬಾರಿ ಬೇಸರ ಮಾಡಿಕೊಂಡಿದ್ದಾರೆ. ಅದೆಲ್ಲ ಸ್ವಲ್ಪ ನನಗೂ ಬೇಸರ ತರಿಸಿದೆ ಎಂದಿದ್ದಾರೆ.

ಇನ್ನು ಬಿಗ್‌ ಬಾಸ್‌ ಮನೆ ವಿಚಾರಕ್ಕೆ ಬಂದರೆ, ಬಿಗ್‌ ಬಾಸ್‌ ಇನ್ನೇನು ಕೊನೆಯ ಘಟ್ಟ ತಲಪುವ ಹಂತದಲ್ಲಿಯೇ ಗಿಲ್ಲಿ-ಅಶ್ವಿನಿ ನಡುವೆ ಜಗಳ ಜೋರಾಗುತ್ತಿದೆ. 2.0 ಅಂತ ಅನ್ನುತ್ತಿದ್ದ ಅಶ್ವಿನಿ ಅವರು ಈಗ ಕೆಂಡ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್‌ ಮಾಡಿದ ಧ್ರುವಂತ್-ಅಶ್ವಿನಿ; ಸ್ನೇಹಿತನಿಗೆ ಕಾವು ಬುದ್ಧಿ ಮಾತು

ಸೆಕೆಂಡ್‌ ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗಿದೆ ಅಂತ ಅನ್ನುವಾಗಲೇ ಅಶ್ವಿನಿ ಅವರು ಬೇಕಾಬಿಟ್ಟಿ ಕೆಲವು ಪದಗಳನ್ನು ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ಆದರೆ ಗಿಲ್ಲಿಗೆ ಅಶ್ವಿನಿ ಅವರು ಈಗ ಜೋಕರ್, ಥರ್ಡ್​ ಕ್ಲಾಸ್ ಎಂದೆಲ್ಲ ಹೇಳಿದ್ದಾರೆ.

Yashaswi Devadiga

View all posts by this author