ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಗಿಲ್ಲಿ (Gilli) ಹಾಗೂ ಅಶ್ವಿನಿಯ (Ashwini Gowda) ವಾಗ್ವಾದ ತಾರರಕ್ಕೇರಿದೆ. ಪ್ರತಿ ಮಾತು ಮಾತಿಗೂ ಇಬ್ಬರ ಮಧ್ಯೆ ವಾಗ್ವಾದ ಜೋರಾಗುತ್ತದೇ ಇದೆ. ಅದರಲ್ಲೂ ರಘು (Raghu) ಅವರ ಪರ ಗಿಲ್ಲಿ ಧ್ವನಿ ಎತ್ತಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ. ಮಾತಿನ ಮೂಲಕ ಅಶ್ವಿನಿ ಛಾಟಿ ಏಟು ಕೊಟ್ಟಿದ್ದಾರೆ ಗಿಲ್ಲಿ. `ನೇರವಾಗಿಯೇ ಗೇಟ್ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂತೀರಲ್ಲ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ?' ಎಂದು ಅಶ್ವಿನಿಗೆ ಹೇಳಿದ್ದಾರೆ ಗಿಲ್ಲಿ.
ಕಾಲಿನ ಮೇಲೆ ಕಾಲು ಹಾಕಿ ಕುಳಿತು ಅಶ್ವಿನಿಗೆ ಆವಾಜ್!
ಹೊಸ ಪ್ರೋಮೋ ಔಟ್ ಆಗಿದೆ. ಬಿಗ್ ಬಾಸ್ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿ ಉಂಟು ಮಾಡಬಹುದು. ಈ ವೇಳೆ ಅಶ್ವಿನಿ ಹಾಗೂ ಗಿಲ್ಲಿ ಮುಖಾಮುಖಿ ಆದರು.
ಗಿಲ್ಲಿ ಮಾತನಾಡಿ, `ರಘು ಅವರು ನಿಮ್ಮನ್ನ ಅಶ್ವಿನಿ ಅಲ್ಲದೇ ಆಶು ಅಂತ ಕರೆಯಬೇಕಿತ್ತಾ? ಅಶ್ವಿನಿ ಮೇಡಮ್, ನಿಮ್ಮ ಹೆಸರಿನ ಮುಂದೆ A ಮುಂಚೆ ಇದ್ದಿದ್ರೆ, A ಅಶ್ವಿನಿ ಅಂತ ಕರೆಯುತ್ತಾ ಇದ್ವಿ. ಗೇಟ್ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂದ್ರೆ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ? ಎಂದು ಗಿಲ್ಲಿ ನೇರವಾಗಿ ಅಶ್ವಿನಿಗೆ ಹೇಳಿದ್ದಾರೆ. ನಿನ್ನ ಅಂಥವರನ್ನ ಎಷ್ಟು ಜನ ನೋಡಿಲ್ಲ ಎಂದು ಅಶ್ವಿನಿ ಎದುರು ವಾದಿಸಿದ್ದಾರೆ. ಅದಕ್ಕೆ ಗಿಲ್ಲಿ ಖಡಕ್ ಆಗಿಯೇ, ಕಾಲು ಮೇಲು ಕಾಲು ಹಾಕಿಕೊಂಡು, ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ' ಎಂದು ಆವಾಜ್ ಹಾಕಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಗೇಮ್‌ನಲ್ಲಿ ಗೆದ್ದು ಬೀಗಿದ ಗಿಲ್ಲಿ!
ಸದಾ ಕಾಮಿಡಿ ಮಾಡಿಕೊಂಡು ಇರ್ತಾನೆ, ತೇಜೋವಧೆ ಮಾಡೋದೆ ಗಿಲ್ಲಿಗೆ ಕೆಲಸ, ಒಂದು ರೂಲ್ಸ್ ಬುಕ್ ಓದೋಕೆ ಬರಲ್ಲ, ವೇಸ್ಟ್ ಸ್ಪರ್ಧಿ ಎಂದು ಅಶ್ವಿನಿ ಗೌಡ ಅವರು ಅಭಿಷೇಕ್ ಬಳಿ ನಿನ್ನೆ ಮಾತನಾಡಿಕೊಂಡಿಕೊಂಡಿದ್ದರು. ಆದ್ರೆ ಫೈನಲ್ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ವಿರುದ್ಧ ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಟಾಸ್ಕ್ ಗೆದ್ದಿದ್ದಾರೆ ಗಿಲ್ಲಿ.
ನಿನ್ನೆ ಉಸ್ತುವಾರಿಗಳೇ ಟಾಸ್ಕ್ ನಿಭಾಯಿಸಬೇಕಿತ್ತು. ಕಾವ್ಯ ಹಾಗೂ ಸ್ಪಂದನಾ ಉಸ್ತುವಾರಿಗಳಾಗಿದ್ದರೆ, ತಂಡದ ನಾಯಕರುಗಳಾದ ಅಶ್ವಿನಿ ಹಾಗೂ ಗಿಲ್ಲಿ ಆಡಬೇಕಿತ್ತು. ಈ ಹಿಂದೆ ಅಶ್ವಿನಿ ತಂಡ ಎರಡು ಬಾರಿ ವಿನ್ ಆದ್ರೆ, ಈ ವಾರ ಗಿಲ್ಲಿ ತಂಡದ ಮೊದಲ ಗೆಲುವು ಇದಾಗಿತ್ತು. ಈ ಗೆಲುವು ತಂದು ಕೊಟ್ಟಿದ್ದೇ ಗಿಲ್ಲಿ. ಅಷ್ಟೇ ಅಲ್ಲ ರಕ್ಷಿತಾ ಅವರು ಕೂಡ ಸಖತ್ ಆಕ್ಟಿವ್ ಆಗಿ ಆಡಿದ್ದರು.
ಇದನ್ನೂ ಓದಿ: Bigg Boss Kannada 12: ಅಶ್ವಿನಿಯವರನ್ನ ಮಾತಿನಲ್ಲೇ ತಿವಿದ ಗಿಲ್ಲಿ; ಟಾಸ್ಕ್ ಮಾಸ್ಟರ್ ಅಂತ ಧ್ರುವಂತ್ ಪ್ರೂವ್!
ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡುತ್ತಿರೋ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಪದೇ ಪದೇ ಗಿಲ್ಲಿ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಅಭಿಷೇಕ್ ಮುಂದೆ ಮಾಡಿದ್ದರು. ಗೇಮ್ ಕಾಲು ಭಾಗವಷ್ಟೂ ಕಂಪ್ಲೀಟ್ ಮಾಡದೇ ಗಿಲ್ಲಿ ಮುಂದೆ ಹೀನಾಯ ಸೋಲುಂಡರು.