Bigg Boss Kannada 12: ಸುದೀಪ್ ಮುಂದೆ ಈ ವೀಕೆಂಡ್‌ನಲ್ಲಿ ಅಶ್ವಿನಿ ಡೈಲಾಗ್ ಹೇಗಿರತ್ತೆ? ಹಾಗಾದ್ರೆ ಒಮ್ಮೆ ʻಗಿಲ್ಲಿ' ಮಾತು ಕೇಳಿಬಿಡಿ!
Gilli Nata: ಅಶ್ವಿನಿ ಅವರು ತಾವು ಕುಡಿದ ಕಪ್ನ ತೊಳೆಯದೆ ಇಟ್ಟಿದ್ದರು. ಇದನ್ನು ಕ್ಲೀನ್ ಮಾಡುವಂತೆ ಅಶ್ವಿನಿಗೆ ರಘು ಅವರು ಸೂಚಿಸಿದರು. ಆದರೆ, ಇದನ್ನು ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ಅಶ್ವಿನಿ ಹಾಗೂ ರಘು ಮಧ್ಯೆ ಗಲಾಟೆ ಮಿತಮೀರಿತು. ಅಶ್ವಿನಿ ಅವರು ತಮಗೆ ಅವಮಾನ ಆಗಿದೆ ಎಂದು ಆರೋಪಿಸಿದರು. ಇಬ್ಬರ ಮಧ್ಯೆ ವಾಗ್ವಾದ ಜೋರಾಗುತ್ತದೆ. ಮನೆಯಿಂದ ಆಚೆ ಹೋಗ್ತೀನಿ ಅಂತ ಕೂಗಾಡ್ತಾರೆ. ಇತ್ತ ಗಿಲ್ಲಿ ಅವರು ರಘು ಹಾಗೂ ರಿಷಾ ಬಳಿ, ಸುದೀಪ್ ಅವರೊಂದಿಗೆ ಅಶ್ವಿನಿ ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ಇಮಿಟೇಟ್ ಮಾಡಿ ತೋರಿಸಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿ ಅವರ ರಂಪಾಟ ಜೋರಾಗಿತ್ತು. ಅದರಲ್ಲೂ ಗಿಲ್ಲಿ, ರಘು (Gilli Nad Raghu) ಹಾಗೂ ಅಶ್ವಿನಿ ಅವರ ಗಲಾಟೆಯೇ ತಾರಕಕ್ಕೇರಿತ್ತು. ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡುತ್ತಿರೋ ಅವರು ಕಣ್ಣೀರು ಹಾಕಿದ್ದಾರೆ.
ಅಲ್ಲದೆ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದಾರೆ. ಮನೆಯಿಂದ ಆಚೆ ಹೋಗ್ತೇನೆ ಎಂದು ಕಿರುಚಾಡಿದ್ದಾರೆ. ಆದರೆ ಗಿಲ್ಲಿ ಮಾತ್ರ ಈ ಸನ್ನಿವೇಶವನ್ನ ಮಜವಾಗಿ ತೆಗೆದುಕೊಂಡಂತಿದೆ. ಅಶ್ವಿನಿ (Ashwini Gowda) ಅವರ ರೀತಿಯೇ ಇಮಿಟೇಟ್ (imitate) ಮಾಡಿದ್ದಾರೆ. ವೀಕೆಂಡ್‌ನಲ್ಲಿ ಅಶ್ವಿನಿ ಹೇಗಿರ್ತಾರೆ ಅನ್ನೋದನ್ನ ಒಮ್ಮೆ ಗಿಲ್ಲಿ ಬಾಯಿಯಿಂದ ಕೇಳಿಬಿಡಿ.
ಇದನ್ನೂ ಓದಿ: Bigg Boss Kannada 12: ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಗೆದ್ದ ಗಿಲ್ಲಿ! ಅಶ್ವಿನಿಗೆ ಹೀನಾಯ ಸೋಲು
ಗಲಾಟೆ ಶುರುವಾಗಿದ್ದೇಕೆ?
ಅಶ್ವಿನಿ ಅವರು ತಾವು ಕುಡಿದ ಕಪ್ನ ತೊಳೆಯದೆ ಇಟ್ಟಿದ್ದರು. ಇದನ್ನು ಕ್ಲೀನ್ ಮಾಡುವಂತೆ ಅಶ್ವಿನಿಗೆ ರಘು ಅವರು ಸೂಚಿಸಿದರು. ಆದರೆ, ಇದನ್ನು ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ಅಶ್ವಿನಿ ಹಾಗೂ ರಘು ಮಧ್ಯೆ ವಾಗ್ವಾದ ಮಿತಮೀರಿತು. ಅಶ್ವಿನಿ ಅವರು ತಮಗೆ ಅವಮಾನ ಆಗಿದೆ ಎಂದು ಆರೋಪಿಸಿದರು. ‘ನನ್ನನ್ನು ಏಕವಚನದಲ್ಲಿ ಕರೆಯೋಕೆ ನೀನ್ಯಾರೋ’ ಎಂದು ಅಶ್ವಿನಿ ಪ್ರಶ್ನೆ ಮಾಡುತ್ತಾರೆ. ಆದರೆ ಇಬ್ಬರ ಮಧ್ಯೆ ವಾಗ್ವಾದ ಜೋರಾಗುತ್ತದೆ. ಮನೆಯಿಂದ ಆಚೆ ಹೋಗ್ತೀನಿ ಅಂತ ಕೂಗಾಡ್ತಾರೆ.
ಇತ್ತ ಗಿಲ್ಲಿ ಅವರು ರಘು ಹಾಗೂ ರಿಷಾ ಬಳಿ, ಸುದೀಪ್ ಅವರೊಂದಿಗೆ ಅಶ್ವಿನಿ ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ಇಮಿಟೇಟ್ ಮಾಡಿ ತೋರಿಸಿದ್ದಾರೆ.
Where you hiding, #Gilli haters?💀
— Trend_X_Now (@TrendxNow) November 20, 2025
Burnol stock empty aa? 😂🔥
No competition… no comparison…
Gilli is running a SOLO RACE! 🏆✨
One-sided domination!#BBK12 #Gilli #GilliNata
pic.twitter.com/3ahcPC3N3s
ಗಿಲ್ಲಿ ಹೇಳಿದ್ದು ಹೀಗೆ,
ʻಅಣ್ಣಾ ಎಲ್ಲೋ ಒಂದು ಕಡೆ ನನ್ನ ಯೋಚನೆ ಸರಿ ಇತ್ತು. ಆದರೆ ತಪ್ಪು ಅಂತ ಈಗ ನನಗೆ ಅರಿವಾಯ್ತು. ಮಾತಾಡೋ ಭರದಲ್ಲಿ , ವೇಗದಲ್ಲಿ ಎಲ್ಲೋ ಒಂದು ಕಡೆ ನಾನು ತಪ್ಪು ಮಾಡಿದ್ದೀನಿ. ಕಿಚ್ಚ ಸುದೀಪ್ ಅವರು ಮ,ತ್ತೆ ಯಾಕೆ ಮನೆಯಿಂದ ಆಚೆ ಹೋಗ್ತೀನಿ ಅಂತ ಹೇಳಿದ್ರಿ? ಅಂದಿದಕ್ಕೆ, ಅಶ್ವಿನಿ ಅವರು ಬ್ಯಾಕ್ ಪೇನ್ ಇದ್ದ ಕಾರಣ ಅನ್ನಿಸತ್ತು ಅಂತಾ ಹೇಳ್ತಾರಂತೆ. ನಾನು ಮನೆಯಿಂದ ಆಚೆ ಹೋಗಿ ಸರ್ಜರಿ ಮಾಡಿಸಬೇಕು ಅನ್ನಿಸಿತ್ತು. ಆದರೆ ನಂಗೆ ಆಮೇಲೆ ಅನ್ನಿಸಿತು ಯಾಕೆ ಹೋಗಬೇಕು ಅಂತ. ಎಲ್ಲೋ ಒಂದು ಕಡೆ ಇವಾಗ ಮನಸ್ಸು ಚೇಂಜ್ ಮಾಡಿದ್ದೀನಿ. ಹೋಗ್ತೀನಿ ಅಂದ್ರೆ ಹೋಗಕ್ಕೆ ಆಗಲ್ಲ. ಇರ್ತೀನಿ ಅಂದ್ರೆ ಇರೋಕೆ ಆಗಲ್ಲ. ಜನ ವೋಟ್ ಮಾಡಿ ಡಿಸೈಡ್ ಮಾಡ್ತಾರೆʼ ಎಂದು ಅಶ್ವಿನಿ ಅವರನ್ನ ಇಮಿಟೇಟ್ ಮಾಡಿದ್ದಾರೆ ಗಿಲ್ಲಿ.
ವೈರಲ್ ವಿಡಿಯೋ
Gilli exposed Ashwini by imitating her attention seeking and sympathy drama😂#Gilli #BBK12 pic.twitter.com/5aEPuWbE2f
— Manu (@yoitzmanu) November 20, 2025
ನೆಟ್ಟಿಗರಿಂದ ಬಹುಪರಾಕ್!
ಗಿಲ್ಲಿ ಬಿಬಿ ಇತಿಹಾಸದಲ್ಲಿ ಅತ್ಯಂತ ಪ್ರತಿಭಾನ್ವಿತ ಸ್ಪರ್ಧಿ. ಗಿಲ್ಲಿ ಸೋಲೋ ರೇಸ್ ನಡೆಸುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು. ಗಿಲ್ಲಿ ಇಮೆಟೇಟ್ ಮೂಲಕ ಅಶ್ವಿನಿ ನಾಟಕವನ್ನ ಬಯಲು ಮಾಡಿದ ಸ್ಪರ್ಧಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ರಾಶಿಕಾ ಆಯ್ಕೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Bigg Boss Kannada 12: ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ
ಮೂರು ಪಂದ್ಯಗಳ ಪೈಕಿ ಗಿಲ್ಲಿ ಅವರು ಗೆದ್ದಿದ್ದು ಒಂದು ಬಾರಿ ಮಾತ್ರ. ಈ ರೀತಿ ಗೆದ್ದಾಗ ಯಾರನ್ನು ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಮಾಡಬೇಕು ಎಂಬುದು ಅವರ ಎದುರು ಇರೋ ದೊಡ್ಡ ಚಾಲೆಂಜ್ಗಳಲ್ಲಿ ಒಂದಾಗಿತ್ತು. ಆಗ ಅವರು ಯೋಚಿಸಿ ರಾಶಿಕಾ ಹೆಸರನ್ನು ತೆಗೆದುಕೊಂಡರು.