Bigg Boss Kannada 12: ಅಶ್ವಿನಿಯವರನ್ನ ಮಾತಿನಲ್ಲೇ ತಿವಿದ ಗಿಲ್ಲಿ; ಟಾಸ್ಕ್ ಮಾಸ್ಟರ್ ಅಂತ ಧ್ರುವಂತ್ ಪ್ರೂವ್!
BBK 12: ಮೊದಲಿಗೆ ಅಶ್ವಿನಿ ಅವರು ಗೇಮ್‌ವೊಂದಕ್ಕೆ ಧನುಷ್ ಅವರನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ರು. ಆದರೆ ಇದಕ್ಕೆ ಧ್ರುವಂತ್ ಅವರು ಒಪ್ಪಲಿಲ್ಲ. ಬೇರೆಯವರಿಗೂ ಚಾನ್ಸ್ ಕೊಡಿ ಎಂದು ಕೂಗಾಡಲು ಶುರು ಮಾಡಿದರು. ಈ ಬಗ್ಗೆಯೇ ಅಶ್ವಿನಿ ಹಾಗೂ ಧ್ರುವಂತ್ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಅಶ್ವಿನಿ ವಿರುದ್ಧವೇ ಧ್ರುವಂತ್ ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಆಟ ಆಡಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಧ್ರುವಂತ್ ಇಲ್ಲ ಅಂದಿದ್ರೆ ಸೋಲು ನಿಮ್ಮದೇ ಅನ್ನೋ ಅರ್ಥದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರನ್ನ ಹೀಯಾಳಿಸಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್12 ರಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಧ್ರುವಂತ್ (Dhruvanth Bigg Boss) ಸದ್ಯ ಅಶ್ವಿನಿ (Ashwini) ಅವರಿಗೆ ಬಕೆಟ್ ಹಿಡಿಯಲು ನೋಡುತ್ತಿದ್ದಾರೆ. ಧ್ರುವಂತ್, ಅವರು ಅಶ್ವಿನಿ ಟೀಂ ಎನ್ನೋದು ಗೊತ್ತೇ ಇರುವ ವಿಚಾರ. ಆದರೆ ನಿನ್ನೆ ಅಶ್ವಿನಿ ವಿರುದ್ಧವೇ ಧ್ರುವಂತ್ ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಆಟ ಆಡಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ.
ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ, ನಾನು ನಿಮ್ಮ ಕೈಗೊಂಬೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧ್ರುವಂತ್ ಗೆದ್ದ ಬಳಿಕ ಗಿಲ್ಲಿ (Gilli) ಅವರು ಇದನ್ನೇ ಇಟ್ಟುಕೊಂಡು ಅಶ್ವಿನಿ ಅವರಿಗೆ ಪದೇ ಪದೇ ಮಾತಿನಲ್ಲೇ ತಿವಿದಿದ್ದಾರೆ. ಧ್ರುವಂತ್ ಇಲ್ಲ ಅಂದಿದ್ರೆ ಸೋಲು ನಿಮ್ಮದೇ ಅನ್ನೋ ಅರ್ಥದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರನ್ನ ಹೀಯಾಳಿಸಿದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ಆ ಒಂದು ತಪ್ಪಿಂದ ಇಡೀ ಮನೆಗೆ ಶಿಕ್ಷೆ!
ಧ್ರುವಂತ್ ಸೆಲೆಕ್ಟ್ ಮಾಡಲು ಒಪ್ಪದ ಅಶ್ವಿನಿ
ಮೊದಲಿಗೆ ಅಶ್ವಿನಿ ಅವರು ಗೇಮ್‌ವೊಂದಕ್ಕೆ ಧನುಷ್ ಅವರನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ರು. ಆದರೆ ಇದಕ್ಕೆ ಧ್ರುವಂತ್ ಅವರು ಒಪ್ಪಲಿಲ್ಲ. ಬೇರೆಯವರಿಗೂ ಚಾನ್ಸ್ ಕೊಡಿ ಎಂದು ಕೂಗಾಡಲು ಶುರು ಮಾಡಿದರು.
ಧನುಷ್ ಅವರನ್ನೇ ಆಡಿಸಬೇಕು ಎಂದು ಅಶ್ವಿನಿ ಗೌಡ ಆಗಲೇ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆಯೇ ಅಶ್ವಿನಿ ಹಾಗೂ ಧ್ರುವಂತ್ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು. ಜೋರು ಧ್ವನಿಯಲ್ಲಿ ಇಬ್ಬರು ಕಿತ್ತಾಡಲು ಆರಂಭಿಸಿದರು.
ಅಶ್ವಿನಿಗೆ ಮನವಿ!
ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ. ಧನುಷ್ ನಿನ್ನೆನೂ ಆಟ ಆಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಿ. ನಾನು ಆಡ್ತೀನಿ, ಯಾಕೆ ನೀವು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡುವುದಿಲ್ಲ. ನಾನು ಮನವಿ ಮಾಡುತ್ತಿದ್ದೇನೆ ಎಂದು ಅಶ್ವಿನಿ ಬಳಿ ಬೇಡಿದರು.
ಧ್ರುವಂತ್ ಮಾತುಗಳನ್ನು ಕೇಳಿದಮೇಲೆ ಅಶ್ವಿನಿ ಗೌಡ ಕೋಪ ಮಾಡಿಕೊಂಡರು. ಅಂತಿಮವಾಗಿ ಧನುಷ್ ಅವರ ಬದಲು ಧ್ರುವಂತ್‌ಗೆ ಆಟ ಆಡುವ ಚಾನ್ಸ್ ನೀಡಿದರು. ಆಟ ಆಡುವುದಕ್ಕೆ ಹೋದ ಧ್ರುವಂತ್ ಉತ್ತಮ ಪ್ರದರ್ಶನ ನೀಡಿದರು. ಕೊನೆಗೆ ಆ ಗೇಮ್ ಅನ್ನು ಧ್ರುವಂತ್ ಅತ್ಯುತ್ತಮವಾಗಿ ಆಡಿ ಗೆಲ್ಲಿಸಿಕೊಟ್ಟರು.
ಕಲರ್ಸ್ ಕನ್ನಡ ಪ್ರೋಮೋ
ಮಾತಿನಲ್ಲೇ ತಿವಿದ ಗಿಲ್ಲಿ!
ವಿನ್ ಆದ ಬಳಿಕ ಉಸ್ತುವಾರಿಗಳು ಗೆದ್ದ ತಂಡ ಬಗ್ಗೆ ಅನೌನ್ಸ್ ಮಾಡಬೇಕಿತ್ತು. ಆದರೆ ಇದರ ಮಧ್ಯೆ ಅಶ್ವಿನಿ ಹಾಗೂ ಗಿಲ್ಲಿ ನಡುವೆ ವಾರ್ ಆಗಿದೆ. ಗಿಲ್ಲಿ ಅವರು ಅನೌನ್ಸ್ ಮಾಡಲ್ಲ ಅಂತ ಕೂತೇ ಬಿಟ್ಟರು. ಬಳಿಕ, ಗಿಲ್ಲಿ ಅವರು ಅಶ್ವಿನಿ ಅವರಿಗೆ ಟಾಂಗ್ ಕೊಡುವ ವಿಚಾರವಾಗಿ, ಧ್ರುವಂತ್ ಹೆಸರನ್ನು ಪದೇ ಪದೇ ಹೇಳಿದ್ದಾರೆ.
ಈ ಟಾಸ್ಕ್ ಗೆಲ್ಲಲ್ಲೂ ಕಾರಣ ಧ್ರುವಂತ್. ಮೊದಲಿಗೆ ಅಶ್ವಿನಿ ಅವರು ಅವಕಾಶವನ್ನ ಧ್ರುವಂತ್‌ಗೆ ನೀಡಿರಲಿಲ್ಲ. ಆದರೂ ಹೋರಾಟ ಮಾಡಿ ಗೆದ್ದು ತೋರಿಸಿದ್ದಾರೆ. ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅಶ್ವಿನಿ ಎದುರೇ ಗೆದ್ದು ತೋರಿಸಿದ್ದಾರೆ ಎಂದು ಗಿಲ್ಲಿ ನೇರವಾಗಿಯೇ ಹೇಳಿದರು. ಗೆದ್ದ ಎತ್ತಿನ ಬಾಲ ಹಿಡಿಯುವುದಲ್ಲ.
ಇದನ್ನೂ ಓದಿ: Bigg Boss Kannada 12: ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ
ಅಶ್ವಿನಿ ತಂಡದಿಂದ ರಿಶಾ, ಜಾನ್ವಿ ಮತ್ತು ಧ್ರುವಂತ್ ಆಡಿದರೆ, ಗಿಲ್ಲಿ ತಂಡದಿಂದ ಕಾವ್ಯಾ, ರಾಶಿಕಾ ಮತ್ತು ಸೂರಜ್ ಆಡಿದರು. ಕಾವ್ಯಾ ಮತ್ತು ರಾಶಿಕಾ ಆರಂಭದಲ್ಲಿ ಚೆನ್ನಾಗಿ ಆಡಿದರು. ಧ್ರುವಂತ್ ತಾವೊಬ್ಬ ಟಾಸ್ಕ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.