ಮುಂದಿನ ವಾರ ಬಿಗ್ಬಾಸ್ (Bigg Boss Kannada Finale) ಫಿನಾಲೆ ಇದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ತಮ್ಮ ತನ ತೋರಿಸಲು, ತಮ್ಮ ಆಟ ಆಡಲು. ತಮ್ಮ ವ್ಯಕ್ತಿತ್ವದ ಪ್ರದರ್ಶನ ಮಾಡಲು ಇದೀಗ ಸೂಕ್ತ ಸ,ಮಯವಾಗಿದೆ. ಶನಿವಾರ ಕಿಚ್ಚ ಪಂಚಾಯ್ತಿಯಲ್ಲಿ ಕೆಲವರಿಗೆ ಬುದ್ಧಿಮಾತನ್ನೂ ಹೇಳಿದ್ದಾರೆ. ಇನ್ನೂ ಕೆಲವರನ್ನು ಪ್ರಶಂಸಿದ್ದಾರೆ. ಶನಿವಾರ ಸ್ವಲ್ಪ ಗರಂ ಆಗಿದ್ರೆ, ಭಾನುವಾರ (Sunday) ಕಿಚ್ಚ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಇದೀಗ ಗಿಲ್ಲಿಗೆ ಬಂಪರ್ (Offer) ಆಫರ್ ಸಿಕ್ಕಿದೆ.
ಸುದೀಪ್ ನಕ್ಕು ನಕ್ಕು ಸುಸ್ತು
ಹೊಸ ಪ್ರೋಮೋ ಔಟ್ ಆಗಿದೆ. ಕೆಲವು ವಸ್ತುಗಳನ್ನು ಇಡಲಾಗಿದೆ. ಲಿಂಬು ಹಾಗೂ ವ್ಯಾಕ್ಸ್ ಈ ರೀತಿ. ಸ್ಪರ್ಧಿಗಳು ತಮಗೆ ತೊಂದರೆ ಕೊಟ್ಟ ಸ್ಪರ್ಧಿಗಳಿಗೆ ಇದನ್ನ ನೀಡಬೇಕು. ರಕ್ಷಿತಾ ಮೊದಲಿಗೆ ಧನುಷ್‌ಗೆ ಲಿಂಬು ಕೊಟ್ಟರು. ಕಾವ್ಯ ಅವರು ಗಿಲ್ಲಿ ಸಖತ್ ಇರಿಟೇಟ್ ಮಾಡಿದ್ದಾನೆ ಎಂದು ಗಿಲ್ಲಿ ಕಾಲಿಗೆ ವ್ಯಾಕ್ಸ್ ಮಾಡಿದ್ದಾರೆ. ನೋವಿನಲ್ಲಿ ಗಿಲ್ಲಿ ಕೂಗಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಜೊತೆ ಮಾತಾಡೋಕೆ ಪ್ರೈವೆಸಿ ಬೇಕಾ? ಇದೇನು ನಿನ್ನ ಮನೇನಾ? ರಕ್ಷಿತಾ ಮೆಲೆ ಉರಿದು ಬಿದ್ದ ರಾಶಿಕಾ
ರಘು ಅವರು ಗಿಲ್ಲಿಗೆ ಲಿಂಬು ಕೊಟ್ಟಿದ್ದಾರೆ. ರಾಶಿಕಾ ಕೂಡ ಗಿಲ್ಲಿಗೆ ವ್ಯಾಕ್ಸ್ ಮಾಡಿದ್ರೆ, ಅಶ್ವಿನಿ ಅವರು ಗಿಲ್ಲಿಗೆ ಲಿಂಬು ತಿನ್ನಿಸಿದ್ದಾರೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಈ ಸೀಸನ್ ಮರೆತು ಬಿಡಿ ಅಂತ ಗಿಲ್ಲಿ ಸಖತ್ ತಮಾಷೆ ಮಾಡಿದ್ದಾರೆ. ಗಿಲ್ಲಿ ಅವತಾರಕ್ಕೆ ಕಿಚ್ಚ ಸುದೀಪ್ ನಕ್ಕು ನಕ್ಕು ಸುಸ್ತಾದರು.
ಕೊನೆಯ ಕಿಚ್ಚನ ಚಪ್ಪಾಳೆ
ಇನ್ನು ಈ ಬಾರಿ ಕೊನೆಯ ಕಿಚ್ಚನ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ್‌ಗೆ ಸಿಕ್ಕಿದೆ. ಈ ಸೀಸನ್‌ನಲ್ಲಿ ಗಿಲ್ಲಿ, ರಕ್ಷಿತಾ ಸೇರಿದಂತೆ ಅನೇಕರು ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ. ಆದರೆ ಅಶ್ವಿನಿ ಗೌಡಗೆ ಮಾತ್ರ ಸಿಕ್ಕಿರಲಿಲ್ಲ. ಅವರು ಕ್ಯಾಪ್ಟನ್ ಕೂಡ ಆಗಿರಲಿಲ್ಲ. ಹಾಗಾಗಿ, ಕೊನೆಯ ಪಕ್ಷ ಕಿಚ್ಚನ ಚಪ್ಪಾಳೆಯನ್ನಾದರೂ ಪಡೆದುಕೊಳ್ಳಬೇಕು ಎಂದುಕೊಂಡಿದ್ದರು. ಅದು ಸಿಕ್ಕಿರಲಿಲ್ಲ. ಅದೊಂದು ಕನಸು ಅವರಲ್ಲಿತ್ತು. ಈ ವಾರ ಬಿಟ್ಟರೇ, ಮತ್ತೆಂದು ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತಿರಲಿಲ್ಲ. ಆದರೆ ಕೊನೆ ವಾರದಲ್ಲಿ ಕಿಚ್ಚ ಸರ್ಪ್ರೈಸ್ ನೀಡಿದ್ದು, ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ.
ಇದೇ ವಾರ ಅವರು ಉತ್ತಮ ಪಡೆದುಕೊಂಡಿದ್ದರು. ಇದೀಗ ಕಿಚ್ಚನ ಚಪ್ಪಾಳೆಯೂ ಅವರಿಗೆ ಸಿಕ್ಕಿರುವುದು ಅವರ ಖುಷಿಗೆ ಕಾರಣವಾಗಿದೆ. ಅದೇ ಖುಷಿಯಲ್ಲಿ ಅವರು ಭಾವುಕರಾಗಿ ಕಣ್ಣೀರಿಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಗೌಡ - ಧ್ರುವಂತ್ ಮೇಲೆ ಎಲ್ರಿಗೂ ಕಣ್ಣು; ಒಬ್ರು ಉತ್ತಮ, ಮತ್ತೊಬ್ರು ಕಳಪೆ!
"ಈ ವಾರದ ಎಪಿಸೋಡ್‌ಗಳನ್ನು ನೋಡಿದಾಗ ನನಗೆ ಕಾಣಿಸಿದ್ದು ಒಂದು ವ್ಯಕ್ತಿಯ ಹಠ, ಫೋಕಸ್ ಮಾತ್ರ. ಎಲ್ಲಿ ಅವಮಾನಗಳು ಆಗುತ್ತವೋ, ಅದೇ ಬಾಯಿಗಳಿಂದ ನಾವು ಹೊಗಳಿಸಿಕೊಳ್ಳುತ್ತೇವೆ, ಅಲ್ವಾ? ಅಲ್ಲಿಯೇ ಗೆಲುವಿನ ಪ್ರಾರಂಭ. ಈ ಸೀಸನ್‌ನ ಕೊನೆಯ ʻಕಿಚ್ಚನ ಚಪ್ಪಾಳೆʼ ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ..." ಎಂದು ಕಿಚ್ಚ ಸುದೀಪ್ ಘೋಷಿಸಿದರು.