ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಅಶ್ವಿನಿ ಗೌಡ - ಧ್ರುವಂತ್ ಮೇಲೆ ಎಲ್ರಿಗೂ ಕಣ್ಣು; ಒಬ್ರು ಉತ್ತಮ, ಮತ್ತೊಬ್ರು ಕಳಪೆ!

Bigg Boss Kannada 12 Update: ಬಿಗ್‌ ಬಾಸ್‌ ಸೀಸನ್ 12ರ ಅಂತ್ಯ ಸಮೀಪಿಸುತ್ತಿರುವ ಬೆನ್ನಲ್ಲೇ ಮನೆಯೊಳಗೆ ಮಹತ್ವದ ಬೆಳವಣಿಗೆ ನಡೆದಿದೆ. ಈ ವಾರ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಶ್ವಿನಿ ಗೌಡ 'ಉತ್ತಮ' ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಇಡೀ ವಾರ ಅಶ್ವಿನಿ ಜೊತೆ ಸೇರಿ ಟಾಸ್ಕ್ ಗೆದ್ದಿದ್ದರೂ, ಧ್ರುವಂತ್ ಅವರು ಮನೆಯವರ ಕೆಂಗಣ್ಣಿಗೆ ಗುರಿಯಾಗಿ 'ಕಳಪೆ' ಪಟ್ಟ ಪಡೆದುಕೊಂಡಿದ್ದಾರೆ.

ಅಶ್ವಿನಿಗೆ 'ಉತ್ತಮ' ಕಿರೀಟ; ಆಟದಲ್ಲಿ ಗೆದ್ದರೂ ಧ್ರುವಂತ್‌ಗೆ 'ಕಳಪೆ' ಪಟ್ಟ!

-

Avinash GR
Avinash GR Jan 10, 2026 8:30 AM

ಬಿಗ್‌ ಬಾಸ್‌ 12 ಮುಕ್ತಾಯಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಮನೆಯೊಳಗೆ ಇಬ್ಬರು ತುಂಬಾ ಹೈಲೈಟ್‌ ಆಗುತ್ತಿದ್ದಾರೆ. ಹೌದು, ಒಬ್ಬರು ಅಶ್ವಿನಿ ಗೌಡ ಆದರೆ, ಮತ್ತೊಬ್ಬರು ಧ್ರುವಂತ್. ಇವರಿಬ್ಬರು ಈ ವಾರ ಒಂದಷ್ಟು ಟಾಸ್ಕ್‌ಗಳನ್ನು ಜೊತೆಯಾಗಿ ಗೆದ್ದಿದ್ದಾರೆ. ಆದರೆ ವೀಕೆಂಡ್‌ ಹತ್ತಿರ ಬರುತ್ತಿದ್ದಂತೆಯೇ, ಇವರ ಬಗ್ಗೆ ಮನೆಯವರಿಗೆ ಇರುವ ಅಭಿಪ್ರಾಯಗಳು ಗೊತ್ತಾಗಿವೆ. ಅಶ್ವಿನಿ ಗೌಡ ಉತ್ತಮ ಪಡೆದುಕೊಂಡರೆ, ಧ್ರುವಂತ್‌ ಕಳಪೆ ಆಗಿರುವುದು ಅಚ್ಚರಿ.

ಅಶ್ವಿನಿಗೆ ಉತ್ತಮ ಕೊಟ್ಟಿದ್ದು ಯಾರು?

ಧ್ರುವಂತ್‌ ಅವರು ಅಶ್ವಿನಿಗೆ ಮೊದಲು ಉತ್ತಮ ನೀಡಿದರು. "ಗೇಮ್‌ ಅನ್ನು ಉತ್ತಮವಾಗಿ ಆಡಿದರು. ತಮ್ಮ ಮೇಲೆ ವಾಗ್ದಾಳಿಗಳು ನಡೆದಾಗಲೂ ಅದನ್ನು ಕ್ರೀಡಾಸ್ಪೂರ್ತಿಯಿಂದ ತಗೊಂಡು ಆಟದ ಮುಖಾಂತರ ತೋರಿಸಿದರು. ಅಡುಗೆ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ" ಎಂದು ಹೊಗಳಿದರು. ಆನಂತರ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ರಘು, ಕಾವ್ಯ ಶೈವ, ರಾಶಿಕಾ ಶೆಟ್ಟಿ‌, ಧನುಷ್ ಅವರು ಕೂಡ ಅಶ್ವಿನಿಗೆ ಉತ್ತಮ ನೀಡಿದರು.

BBK 12: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ-ಅಶ್ವಿನಿ ನಡುವೆ ವಾರ್: ಮೂಕವಿಸ್ಮಿತರಾದ ಮನೆಮಂದಿ

ಈ ವಾರ ಅಶ್ವಿನಿ ಗೌಡ ಅವರು ಉತ್ತಮವಾಗಿ ಗೇಮ್‌ ಆಡಿದರು ಎಂಬ ಕಾರಣವೇ ಅಶ್ವಿನಿ ಗೌಡಗೆ ಉತ್ತಮ ಸಿಗಲು ಕಾರಣವಾಯ್ತು. ಇನ್ನು, ಮುಕ್ತಕಂಠದಿಂದ ಅಶ್ವಿನಿಯನ್ನು ಇಡೀ ಮನೆ ಉತ್ತಮ ಎಂದು ಆಯ್ಕೆ ಮಾಡಿದರೆ, ಅಶ್ವಿನಿ ತಮ್ಮ ಸರದಿ ಬಂದಾಗ ಧ್ರುವಂತ್‌ಗೆ ಉತ್ತಮ ನೀಡಿದರು.

Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ

ಧ್ರುವಂತ್‌ಗೆ ಕಳಪೆ ಕೊಟ್ಟವರು ಯಾರು?

ಅತ್ತ ಧ್ರುವಂತ್‌ಗೆ ಕಳಪೆ ನೀಡಿದ ಗಿಲ್ಲಿ ನಟ, "ಟಾಸ್ಕ್‌ ಅನ್ನು ತುಂಬಾ ಚೆನ್ನಾಗಿ ಆಗಿ ಆಡಲಿಲ್ಲ. ಆಟದಲ್ಲಿ ಗೆದ್ದರೂ, ಅದು ಅವರಿಂದ ಅಲ್ಲ, ಅಶ್ವಿನಿ ಗೌಡ ಅವರಿಂದ" ಎಂದು ಹೇಳಿದ್ದಾರೆ. ರಘು ಕೂಡ ಕಳಪೆ ನೀಡಿದ್ದು, "ಧ್ರುವಂತ್‌ ಅವರು ಬೇರೆ ಬೇರೆ ಅಡುಗೆ ಮಾಡಿಕೊಂಡಿದ್ದು ನನಗೆ ಇಷ್ಟವಾಗಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಕಾವ್ಯ ವೋಟ್‌ ಕೂಡ ಧ್ರುವಂತ್‌ಗೆ ಸಿಕ್ಕಿದೆ. ವಿಶೇಷವೆಂದರೆ, ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ಕೂಡ ತಲಾ ಎರಡು ಕಳಪೆ ವೋಟ್‌ಗಳನ್ನು ಪಡೆದುಕೊಂಡಿದ್ದರು. ಆದರೆ ಧ್ರುವಂತ್‌ಗೆ ಮೂರು ವೋಟ್‌ ಸಿಕ್ಕಿದ್ದರಿಂದ ಅವರಿಗೆ ಈ ವಾರದ ಕಳಪೆ ನೀಡಲಾಯಿತು.