ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಗಿಲ್ಲಿ ಆಟಕ್ಕೆ (Gilli Nata) ಅನೇಕರು ಮನಸೋತಿದ್ದಾರೆ. ಫಿನಾಲೆ ಮುಂಚೆಯೇ ಗಿಲ್ಲಿಯೇ ಈ ಬಾರಿ ಕಪ್ ಗೆಲ್ಲೋದು ಅಂತ ಕಮೆಂಟ್ ಮಾಡ್ತಿದ್ದಾರೆ. ಗಿಲ್ಲಿ ಜೊತೆ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿರೋ ಅದೆಷ್ಟೋ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ .ಕಲರ್ಸ್ ಕನ್ನಡದ ಮಂಗಳ ಗೌರಿ ಮದುವೆಯಲ್ಲಿ ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದ ಯಶಸ್ವಿನಿ ಕೆ ಸ್ವಾಮಿ (yashaswini k swamy) ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾರು ಈ ನಟಿ?
ಯಶಸ್ವಿನಿ ಕೆ ಸ್ವಾಮಿ ಅವರಿಗೆ ಸ್ಟಾರ್ ಸುವರ್ಣ ವಾಹಿನಿಯ 'ಅನುರೂಪ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. ರಾಜಾ ರಾಣಿ ಧಾರಾವಾಹಿಯಲ್ಲಿಯೂ ಮಿಂಚಿದ್ದರು.ಕಲರ್ಸ್ ಕನ್ನಡದ ಮಂಗಳ ಗೌರಿ ಮದುವೆಯಲ್ಲಿ ಸ್ನೇಹಾ ಪಾತ್ರಕ್ಕೆ ಜೀವ ತುಂಬಿದವರು. ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಭಾಗಿಯಾಗಿ ಪರಭಾಷೆ ಸೀರಿಯಲ್‌ನಲ್ಲಿ ಮಿಂಚಿದವರು. 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿಯೂ ಭಾಗಿಯಾಗಿದ್ದರು ನಟಿ. ಇದೀಗ ನಟಿ ಸಂದರ್ಶನವೊಂದರಲ್ಲಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್ ಮಾಡಿದ ಧ್ರುವಂತ್-ಅಶ್ವಿನಿ; ಸ್ನೇಹಿತನಿಗೆ ಕಾವು ಬುದ್ಧಿ ಮಾತು
ರೈತನ ಮಗ ಅವನು!
ಮಾಧ್ಯಮವೊಂದರ ಸಂದರ್ಶನದಲ್ಲಿ ನಟಿ ಮಾತನಾಡಿ, ಗಿಲ್ಲಿ ಈಗ ಬಿಗ್ ಬಾಸ್ ಮನೆಯಲ್ಲಿ ಹೇಗೆ ಇದ್ದಾನೆ. ಹಾಗೇ ಅವನು ಇರೋದು. ಹಳ್ಳಿ ಜನರು ತುಂಬಾ ಮುಗ್ದ ಜನರು ಅಂತ. ಹಾಗೇ ಅವನಿಗೆ ಎಲ್ಲಿ ಏನು ಮಾತಾಡಬೇಕು ಅಂತ ಗೊತ್ತಾಗಲ್ಲ. ಸಖತ್ ಇರಿಟೇಟ್ ಕೂಡ ನಾನು ಆಗ್ತಿದ್ದೆ. ಬೈಸ್‌ಕೊಳ್ಳೋನು. ಒಂದು ಹಳ್ಳಿಯಲ್ಲಿ ರೈತನ ಮಗ ಅವನು. ಅವನು ಹೇಗೆ ಇದ್ದಾನೆ ಹಾಗೇ ಇದ್ದಾನೆ. ಅವನು ಮಾಡೋದು ಯಾವುದೂ ನಾಟಕ ಅಲ್ಲ. ನಾಟಕ ಮಾಡಿ ಬದುಕೋಕೆ ಅವನಿಗೆ ಬರಲ್ಲ.
ಇನ್ನು ಡ್ಯಾನ್ಸ್ ಪ್ರಾಕ್ಟಿಸ್ ಬರುವಾಗಲೂ ಅವನು ಸಿಂಪಲ್ ಇದ್ದ. ಅವನು ಹೇಗಿದ್ದ ಅನ್ನೋದು ಜನ ನೋಡಿಲ್ಲ. ಅವನ ಮಾತು ಅಷ್ಟೇ ಜನ ನೋಡಿದ್ದು. ಅವನು ಚೆನ್ನಾಗಿ ರೆಡಿ ಆಗಬೇಕು ಅನ್ನೋದು ಅವನ ಮನಸ್ಸಿಗೆ ಬರಬೇಕು. ಆದರೆ ಅವನಿಗೆ ಆ ಥರ ಎನ್ನಿಲ್ಲ ಎಂದು ಹೊಗಳಿದ್ದಾರೆ.
ಇನ್ನು ಈ ವಿಡಿಯೋ ಸಾಕಷ್ಟು ವೈರಲ್ ಆಗತ್ತಿದೆ. ನೀವು ಗಿಲ್ಲಿ ಬಗ್ಗೆ ಮಾತಾಡಿದ್ದು ನೋಡಿ ನಿಮ್ಮ ಫ್ಯಾನ್ ಆಗ್ಬಿಟ್ಟೆ ಒಳ್ಳೆ ಮನಸು ಇದೇ ನಿಮಗೆ ಅಂತ ಗಿಲ್ಲಿ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ
ಸಾಕಷ್ಟು ಬಾರಿ ಗಿಲ್ಲಿ ಮನೆಯಲ್ಲಿ ಇರೋದು ಫೇಕ್ ಅಂತ ಅಶ್ವಿನಿ ಸೇರಿದಂತೆ ಕೆಲವು ಸ್ಪರ್ಧಿಗಳು ವಾದಿಸಿದ್ದರು. ಫ್ಯಾಮಿಲಿ ರೌಂಡ್ ವೇಳೆ ಗಿಲ್ಲಿ ತಾಯಿ ಸವಿತಾ, ಗಿಲ್ಲಿ ತಲೆಗೆ ಎಣ್ಣೆ ಹಚ್ಚುವಾಗ, ‘ನೀನು ಹೊರಗೆ ಹೇಗೆ ಇರ್ತಿದ್ಯೋ ಇಲ್ಲಿಯೂ ಹಾಗೆ ಇರ್ತೀಯಾ. ನನಗೆ ಅದು ಖುಷಿ ಕೊಟ್ಟಿದೆ. ನಿಮ್ಮ ಅಪ್ಪ ತುಂಬಾನೇ ಖುಷಿಯಾದರು’ ಎಂದಿದ್ದರು. ಸವಿತಾ. ‘ಹೊರಗೆ ಯಾವ ರೀತಿ ಇದೀನೋ ಇಲ್ಲಿಯೂ ಅದೇ ರೀತಿ ಇರಬೇಕು. ಆಗಲೇ ಉತ್ತಮವಾಗಿರುತ್ತದೆ’ ಎಂದಿದ್ದರು ಗಿಲ್ಲಿ.