ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಈ ವಾರ ಕ್ಯಾಪ್ಟನ್ಸಿ (Captaincy) ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಗಿಲ್ಲಿ-ಕಾವ್ಯ (Gilli Kavya) ಹಾಗೂ ರಾಶಿಕಾ-ಸೂರಜ್ (Rashika Sooraj) ಮಧ್ಯೆ ಜಿದ್ದಾಜಿದ್ದಿ ಇತ್ತು. ಆದರೆ ರಘು ಹಾಗೂ ಅಶ್ವಿನಿ ಟೀಂ ಟಾಸ್ಕ್‌ನಲ್ಲಿ ಮುಂದೆ ಹೋಗಿದೆ. ಟಾಸ್ಕ್ ಒಂದರಲ್ಲಿ ರಘು ಮತ್ತು ಅಶ್ವಿನಿ (Raghu Ashwini) ಗೆದ್ದಿದ್ದಾರೆ. ಬಿಗ್ಬಾಸ್ ಆಜ್ಞೆಯಂತೆ ಒಂದು ಜೋಡಿಯನ್ನು ಅಶ್ವಿನಿ ಮತ್ತು ರಘು ಅವರು ಟಾಸ್ಕ್‌ನಿಂದ ಹೊರಗೆ ಇಡಬೇಕಿದೆ. ಈಗ ಅಶ್ವಿನಿ ಮತ್ತು ರಘು ಅವರುಗಳು ಯಾರನ್ನು ಹೊರ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಗಿಲ್ಲಿ ಮತ್ತು ಕಾವ್ಯ (Gilli Nata and Kavya Shaiva) ಜೋಡಿಯನ್ನೇ ಹೊರಗೆ ಹಾಕಬಹುದು ಎಂಬುದು ನೆಟ್ಟಿಗರ ಅಭಿಪ್ರಾಯ.
ವಿನ್ ಆದ ಅಶ್ವಿನಿ-ರಘು ಜೋಡಿ
ಮೇಲಿನಿಂದ ಎಸೆಯುವ ರಿಂಗ್‌ಗಳನ್ನು ಭುಜದಲ್ಲಿ ಹಾಗೂ ಕುತ್ತಿಗೆಯಲ್ಲಿ ರಿಂಗ್‌ಗಳನ್ನು ಸಂಗ್ರಹಿಸಬೇಕು. ಅತಿ ಹೆಚ್ಚು ರಿಂಗ್‌ಗಳನ್ನು ತಮ್ಮದಾಗಿಸಿಕೊಳ್ಳುವ ಜೋಡಿ ಟಾಸ್ಕ್ ಗೆಲ್ಲುತ್ತದೆ. ಇದರಲ್ಲಿ ಅಶ್ವಿನಿ ಹಾಗೂ ರಘು ಜೋಡಿ ಗೆದ್ದಿದೆ. ಆದರೆ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದರು. ಉಳಿದ ಜೋಡಿಯಲ್ಲಿ ಒಂದು ಜೋಡಿಯನ್ನ ಹೊರಗೆ ಇಡಬೇಕು ಎಂದು ಆದೇಶಿಸಿದ್ದರು ಬಿಗ್ ಬಾಸ್. ಅದರಂತೆ ಯಾರು ಟಾಸ್ಕ್‌ನಿಂದ ಹೊರಗೆ ಹೋಗ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್ ಆದ ಅಶ್ವಿನಿ ಗೌಡ
ಕಲರ್ಸ್ ಕನ್ನಡ ಪ್ರೋಮೋ
ಬಿಗ್ ಬಾಸ್ ಮನೆಯಲ್ಲೀಗ ಸ್ಪರ್ಧಿಗಳು ಮತ್ತೆ ಜಂಟಿಯಾಗಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ಮತ್ತೆ ಒಟ್ಟಿಗೆ ಆಡುತ್ತಿದ್ದಾರೆ. ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು.
ಧ್ರುವಂತ್ ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್ ಮಾಡಿರಲಿಲ್ಲ. ಗಿಲ್ಲಿಗೆ ಈ ಟಾಸ್ಕ್‌ನ್ನು ತುಂಬಾ ಸೀರೆಯೆಸ್ ಆಗಿ ತೆಗೆದುಕೊಂಡಂತಿದೆ. ಅಷ್ಟೇ ಅಲ್ಲ ಈ ವಾರದ ಟಾಸ್ಕ್ ವಿನ್ ಆದ್ರೆ ಆ ಜೋಡಿ ಮನೆಯ ಮುಂದಿನ ಕ್ಯಾಪ್ಟನ್ ಆಗುತ್ತಾರೆ.
ಬಹುತೇಕ ಸ್ಪರ್ಧಿಗಳ ಮಧ್ಯೆ ವಾದ ವಿವಾದ
ಈ ವಾರ ನಾಮಿನೇಶನ್ ವೇಳೆ ಬಹುತೇಕ ಸ್ಪರ್ಧಿಗಳ ಮಧ್ಯೆ ವಾದ ವಿವಾದ ನಡೆದಿದೆ. ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್‌ಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಇದೊಂದೆ!
ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್‌ನಿಂದ ಪಾರಾಗಿದ್ದಾರೆ. ಇನ್ನು ನಾಮಿನೇಶನ್ ಪ್ರಕ್ರಿಯೆ ಆ ಬಳಿಕ ಧ್ರುವಂತ್ ಅವರು ಅಶ್ವಿನಿ ಬಳಿ ಚರ್ಚಿಸಿದ್ದಾರೆ.