Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್‌ಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಇದೊಂದೆ!
Bigg Boss Dhruvanth: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸ್ಪರ್ಧಿಗಳು ಜಂಟಿ ಆಗಿ ಆಡುತ್ತಿದ್ದಾರೆ. ಆದರೆ ನಿನ್ನೆ ಸ್ಪರ್ಧಿಗಳೇ ತಮ್ಮ ಜೋಡಿಯನ್ನ ಆಯ್ಕೆ ಮಾಡಬೇಕಿತ್ತು. ಆದರೆ ಧ್ರುವಂತ್ ಅವರನ್ನ ಯಾರೂ ಆಯ್ಕೆ ಮಾಡಿಲ್ಲ. ಹೀಗಾಗಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಹುತೇಕ ಸ್ಪರ್ಧಿಗಳು ಧ್ರುವಂತ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಮನೆಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ್ದರು ಧ್ರುವಂತ್. ಈ ಹಿನ್ನೆಯಲ್ಲಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದ್ದಾರೆ. ಧ್ರುವಂತ್ ಅವರು ಅಶ್ವಿನಿ ಅವರ ಬಳಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಮತ್ತೆ ಸ್ಪರ್ಧಿಗಳು ಜಂಟಿ ಆಗಿ ಆಡುತ್ತಿದ್ದಾರೆ. ಆದರೆ ನಿನ್ನೆ ಸ್ಪರ್ಧಿಗಳೇ ತಮ್ಮ ಜೋಡಿಯನ್ನ ಆಯ್ಕೆ ಮಾಡಬೇಕಿತ್ತು. ಆದರೆ ಧ್ರುವಂತ್ (Dhruvanth) ಅವರನ್ನ ಯಾರೂ ಆಯ್ಕೆ ಮಾಡಿಲ್ಲ. ಹೀಗಾಗಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಹುತೇಕ ಸ್ಪರ್ಧಿಗಳು ಧ್ರುವಂತ್ ಅವರನ್ನೇ ನಾಮಿನೇಟ್ (Nominate) ಮಾಡಿದ್ದಾರೆ. ಮನೆಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ್ದರು ಧ್ರುವಂತ್. ಈ ಹಿನ್ನೆಯಲ್ಲಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದ್ದಾರೆ. ಧ್ರುವಂತ್ ಅವರು ಅಶ್ವಿನಿ ಅವರ ಬಳಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ನಾನು ಹೇಗೆ ಸೇಫ್ ಆಗ್ತಾ ಇದ್ದೀನಿ ಅನ್ನೋದು ನಂಗೆ ಗೊತ್ತಿಲ್ಲ ಎಂದಿದ್ದಾರೆ.
ಹೇಗೆ ಸೇವ್ ಆಗ್ತಾ ಇದ್ದೀನಿ ನಂಗೆ ಗೊತ್ತಿಲ್ಲ
ಧ್ರುವಂತ್ ಮೊದಲಿಗೆ ಧನುಷ್ ಹಾಗೂ ಅವರ ಗ್ಯಾಂಗ್ ಬಗ್ಗೆ ಚರ್ಚಿಸಿದರು. ಧನುಷ್ ತುಂಬಾ ತೂಕವಾಗಿ ಮಾತಾಡ್ತಾನೆ ಅಂದುಕೊಂಡಿದ್ದೆ ಎಂದಿದ್ದಾರೆ ಅಶ್ವಿನಿ.
ಇದನ್ನೂ ಓದಿ: Bigg Boss Kannada 12: ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್
ಅದಕೆ ಧ್ರುವ ಮಾತನಾಡಿ, ಈ ಶೋದ್ದು ಡೈನಾಮಿಕ್ ಹೇಗೆ ಇದೆ ಗೊತ್ತಾ? ಅಂದುಕೊಳ್ಳುವ ಥರ ಆಗಿದಿದ್ರೆ, ಇಷ್ಟೊತ್ತಿಗೆ ಚಂದ್ರಣ್ಣ, ಜಾಹ್ನವಿ ಇರಬೇಕಿತ್ತು. ಅಭಿ ಮಾಳು ಯಾವಗಲೋ ಟಿಕೆಟ್ ತೆಗೆದುಕೊಳ್ಳಬೇಕಿತ್ತು. ಡೈನಾಮಿಕ್ಸ್ ಬೇರೆ ಇದೆ ಎಂದಿದ್ದಾರೆ. ನಾನು ಯಾಕೆ ಇದ್ದೀನಿ ಅನ್ನೋದೇ ಇನ್ನೂ ಗೊತ್ತಿಲ್ಲ. ಪ್ರತಿ ವಾರ ನನ್ನ ಅಷ್ಟು ಹಾನೆಸ್ಟ್ ಆಗಿ ಪ್ಯಾಕ್ ಮಾಡೋರು ಯಾರೂ ಇಲ್ಲ. ನಾನು ರೆಡಿ ಆಗಿ, ಪ್ಯಾಕ್ ಮಾಡಿ, ಹೋಗೇ ಹೋಗ್ತಿನಿ ಅಂತ ಕೂರೋದು. ಹೇಗೆ ಸೇವ್ ಆಗ್ತಾ ಇದ್ದೀನಿ ನಂಗೆ ಗೊತ್ತಿಲ್ಲ. ಬೇರೆ ಅವರದ್ದು ಬಿಡಿ ಎಂದು ಅಶ್ವಿನಿ ಮುಂದೆ ಹೇಳಿದ್ದಾರೆ.
So Jai Mahakal out of this week jodi tasks, noone selected him.#Dhruvanth #Bbk12
— Patil Raviraj (@raviraj_spatil) December 2, 2025
pic.twitter.com/C4Sw4uIQLc
ಇದೀಗ ಧ್ರುವಂತ್‌ಗೆ ತಾನು ಹೇಗೆ ಸೇಫ್ ಆಗ್ತಿದ್ದೇನೆ ಎನ್ನೋದೇ ಡೌಟ್ ಆಗಿದೆ. ಅಷ್ಟೇ ಅಲ್ಲ ಧ್ರುವಂತ್ ಅವರ ಬಗ್ಗೆ ಹಲವರು ಮುಖವಾಡ ಹಾಕಿಕೊಂಡು ಇದ್ದಾರೆ ಎಂದು ಆರೋಪಿಸಿದ್ದಾರೆ. ಗಿಲ್ಲಿ ಜೊತೆ ಮಾತನಾಡುವಾಗಲೂ ಧ್ರುವಂತ್ ಅವರು ಕೆಲವು ಟಾಂಗ್ ಕೊಡ್ತಾ ಇದ್ದರು.
ಕ್ಯಾಪ್ಟನ್ಸಿ ಟಾಸ್ಕ್
ಸದ್ಯ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು. ಧ್ರುವಂತ್ ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್ ಮಾಡಿರಲಿಲ್ಲ.
ಆದರೆ ಗಿಲ್ಲಿ ನಟ ಹಾಗೂ ರಾಶಿಕಾ ಜೋಡಿ ವಿರುದ್ಧ ಸಖತ್ ಪೈಪೋಟಿ ಇದೆ. ರಾಶಿಕಾ ಅವರಂತೂ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್ ಸಖತ್ ವೈರಲ್
ಈ ವಾರ ನಾಮಿನೇಶನ್ ವೇಳೆ ಬಹುತೇಕ ಸ್ಪರ್ಧಿಗಳ ಮಧ್ಯೆ ವಾದ ವಿವಾದ ನಡೆದಿದೆ. ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ.