ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಮೊದಲ ಫಿನಾಲೆ ಟಿಕೆಟ್‌ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್‌ ಚಾಲೆಂಜ್‌!

Gilli Nata: ಬಿಗ್ ‌ಬಾಸ್‌ ಸೀಸನ್‌ 12ರ ಫಿನಾಲೆ ಇನ್ನೇನು ಸಮೀಪಿಸಲು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ನಾಮಿನೇಶನ್‌ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಸ್ಪರ್ಧಿಗಳ ಮಧ್ಯೆ ಈಗ ಪೈಪೋಟಿ ಜೋರಾಗಿದೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ನಾಮಿನೇಟ್‌ ಆಗಿದ್ದಾರೆ. ಇದೀಗ ಫಿನಾಲೆ ಟಿಕೆಟ್‌ ಯಾರಿಗೆ ಸಿಗುತ್ತೆ ಎಂಬುದೇ ಕುತೂಹಲ.ಮೊದಲ ಟಿಕೆಟ್‌ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಗಿಲ್ಲಿ ಔಟ್‌ ಆಗ್ತಾರಾ?

ಬಿಗ್‌ ಬಾಸ್‌ ಕನ್ನಡ

ಬಿಗ್ ‌ಬಾಸ್‌ ಸೀಸನ್‌ 12ರ (Bigg Boss Kannada 12) ಫಿನಾಲೆ ಇನ್ನೇನು ಸಮೀಪಿಸಲು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ನಾಮಿನೇಶನ್‌ (Nomination) ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಸ್ಪರ್ಧಿಗಳ ಮಧ್ಯೆ ಈಗ ಪೈಪೋಟಿ ಜೋರಾಗಿದೆ. ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ನಾಮಿನೇಟ್‌ (Nominate) ಆಗಿದ್ದಾರೆ. ಇದೀಗ ಫಿನಾಲೆ ಟಿಕೆಟ್‌ ಯಾರಿಗೆ ಸಿಗುತ್ತೆ ಎಂಬುದೇ ಕುತೂಹಲ.ಮೊದಲ ಟಿಕೆಟ್‌ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಗಿಲ್ಲಿ ಔಟ್‌ ಆಗ್ತಾರಾ?

ಟಾಸ್ಕ್‌ಗಳಿಂದ ಔಟ್‌ ಆಗ್ತಾರಾ ಗಿಲ್ಲಿ?

ಧ್ರುವಂತ್‌ ಹಾಗೂ ಅವರು ಸೂಚಿಸುವ ಸದಸ್ಯ ಮುಂದಿನ ಟಾಸ್ಕ್‌ ಆಡಬೇಕು. ಟಾಸ್ಕ್‌ನಲ್ಲಿ ಸೋಲುವ ಸದಸ್ಯರು ಮೊದಲ ಟಿಕೆಟ್‌ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಔಟ್‌ ಆಗುತ್ತಾರೆ. ಹೀಗಾಗಿ ಧ್ರುವಂತ್‌ ಅವರುಗಿಲ್ಲಿಯನ್ನ ಆಯ್ಕೆ ಮಾಡಿದರು. ಕಾಮಿಡಿ ಬಿಟ್ಟರೆ ಅವರು ಯಾವುದರಲ್ಲೂ ಆಕ್ಟಿವ್‌ ಇಲ್ಲ.

ಇದನ್ನೂ ಓದಿ: Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಮನೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲೂ ಅವರು ಫೇಲ್‌. ಮನೆಗೆ ಅವರ ಕಾಂಟ್ರಿಬ್ಯುಷನ್‌ ನಾನು ನೋಡಿಲ್ಲ ಎಂದಿದ್ದಾರೆ. ಇನ್ನು ಈ ಟಾಸ್ಕ್‌ನಲ್ಲಿ ಯಾರು ಗೆಲ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ವೈರಲ್‌ ವಿಡಿಯೊ



ಯಾರೆಲ್ಲ ನಾಮಿನೇಟ್‌?

ಬಿಗ್ ಬಾಸ್ ಆಟದಲ್ಲಿ ನೂರು ದಿನಗಳು ಕಳೆದಿವೆ. ಹಲವಾರು ಟಾಸ್ಕ್ ಗೆಲ್ಲಬೇಕು. ಆ ಎಲ್ಲ ಹಂತಗಳನ್ನು ದಾಟಿಕೊಂಡು ಈ 8 ಮಂದಿ ಸ್ಪರ್ಧಿಗಳು ಕೊನೇ ವಾರದ ನಾಮಿನೇಷನ್ ತನಕ ಬಂದಿದ್ದಾರೆ. ಇನ್ನು ನಿನ್ನೆಯ ನಾಮಿನೇಶನ್‌ ಪ್ರಕ್ರಿಯೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ದೊಡ್ಡ ಜಗಳ ಆಗಿದೆ.

ಇದನ್ನೂ ಓದಿ: Bigg Boss Kannada 12: ಮನೆಯಿಂದ ಹೊರಗೆ ಒಬ್ಬನೇ ಬಾ ಇದೆ ನಿಂಗೆ! ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸ್ಪರ್ಧಿಗಳು

ಇಬ್ಬರೂ ಕೂಡ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಅದೇ ರೀತಿ ಮ್ಯೂಟೆಂಟ್ ರಘು ಮತ್ತು ಧ್ರುವಂತ್ ಕೂಡ ಜಗಳ ಮಾಡಿಕೊಂಡಿದ್ದಾರೆ. ಈ ವಾರ ಅಶ್ವಿನಿ ಗೌಡ ಮಾತ್ರವೇ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದರು. ಧನುಷ್ ಅವರು ಕ್ಯಾಪ್ಟನ್ ಆದ್ದರಿಂದ ನಾಮಿನೇಷನ್​​ನಿಂದ ಸೇಫ್ ಆಗಿದ್ದಾರೆ. ಇನ್ನುಳಿದ ಎಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ. ಕೇವಲ ಒಂದೇ ವೋಟ್​​ನಿಂದ ಗಿಲ್ಲಿ ಕೂಡ ನಾಮಿನೇಟ್ ಆಗಿದ್ದಾರೆ.

Yashaswi Devadiga

View all posts by this author