ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಮನೆಯಿಂದ ಹೊರಗೆ ಒಬ್ಬನೇ ಬಾ ಇದೆ ನಿಂಗೆ! ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸ್ಪರ್ಧಿಗಳು

Raghu: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ವಾದ ವಿವಾದಗಳೂ ಹೆಚ್ಚಾಗುತ್ತಿವೆ. ಇನ್ನೇನು ಬಿಗ್‌ ಬಾಸ್‌ ಮುಗಿಯಲು ಎರಡು ವಾರ ಬಾಕಿ ಇವೆ. ಆದರೂ ಧ್ರುವಂತ್‌ ಹಾಗೂ ರಘು ನಡುವೆ ಜಗಳ ಅಂತ್ಯವಾದಂತೆ ಕಾಣುತ್ತಿಲ್ಲ. ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ಧ್ರುವಂತ್ ನೀಡಿದ ಕಾರಣಗಳಿಂದ ರಘು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ತನ್ನ ಅಡುಗೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲರಾದ ರಘು , ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ ನೇರ ಸವಾಲು ಹಾಕಿದ್ದಾರೆ.

ಮನೆಯಿಂದ ಹೊರಗೆ ಒಬ್ಬನೇ ಬಾ!  ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 5, 2026 6:38 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವೆ ವಾದ ವಿವಾದಗಳೂ ಹೆಚ್ಚಾಗುತ್ತಿವೆ. ಇನ್ನೇನು ಬಿಗ್‌ ಬಾಸ್‌ (Bigg Boss) ಮುಗಿಯಲು ಎರಡು ವಾರ ಬಾಕಿ ಇವೆ. ಆದರೂ ಧ್ರುವಂತ್‌ ಹಾಗೂ ರಘು ನಡುವೆ ಜಗಳ ಅಂತ್ಯವಾದಂತೆ ಕಾಣುತ್ತಿಲ್ಲ. ಬಿಗ್‌ಬಾಸ್ ನಾಮಿನೇಷನ್ (Bigg Boss Nomination) ಪ್ರಕ್ರಿಯೆಯಲ್ಲಿ, ಧ್ರುವಂತ್ ನೀಡಿದ ಕಾರಣಗಳಿಂದ ರಘು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ತನ್ನ ಅಡುಗೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲರಾದ ರಘು (Raghu), ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ (Dhruvanth) ನೇರ ಸವಾಲು ಹಾಕಿದ್ದಾರೆ.

ನಿನಗೆ ಚಾಲೆಂಜ್

ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಇಬ್ಬರೂ ಕೂಡ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಕಿತ್ತಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಜಗಳ ನಡೆದಿದೆ. ಚೆಂಡಿಗೆ ರಘು ಫೋಟೋ ಅಂಟಿಸಿ ಧ್ರುವಂತ್ ನಾಮಿನೇಟ್ ಮಾಡುತ್ತಾರೆ. ಧ್ರುವಂತ್ ನೀಡಿದ ಕಾರಣಗಳು ತಪ್ಪು ಎಂದು ರಘು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ರಘು ಹೇಳಿದಂತೆ ತಮ್ಮನ್ನು ತೋರಿಸಿಕೊಳ್ಳಲ್ಲ. ಜಿಮ್ ಟ್ರೈನರ್, ಜಡ್ಜ್ ಎಂದು ಹೇಳಿಕೊಂಡು ಲೀಟರ್‌ಗಟ್ಟಲೇ ಎಣ್ಣೆ ಬಳಸಿ ಅಡುಗೆ ಮಾಡ್ತಾರೆ ಎಂದು ಧ್ರುವಂತ್ ಹೇಳುತ್ತಾರೆ. ಭಾನುವಾರವೂ ಇದೇ ಕಾರಣಗಳನ್ನು ನೀಡಿದ್ದರು. ಇದಕ್ಕೆ ರಘು ಸಿಟ್ಟಾಗಿ, ನಿನಗೆ ನಾಚಿಕೆ ಆಗಬೇಕು. ನಾನು ತಯಾರಿಸಿ ಅಡುಗೆ ಊಟ ಮಾಡಲು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಹೊರಗಡೆ ನೀನು ಎಲ್ಲಿಗೆ ಕರೀತಿಯಾ ಅಲ್ಲಿಗೆ ನಾನು ಒಬ್ಬನೇ ಬರುತ್ತೇನೆ. ನಾನು ಒಬ್ಬನೇ ನಿನಗೆ ಸಾಕು. ಬೇರೆ ಯಾರು ಬೇಡ. ಇವತ್ತು ನಾನು ನಿನಗೆ ಚಾಲೆಂಜ್ ಹಾಕ್ತಿದ್ದೀನಿ ಎಂದು ರಘು ಸವಾಲ್‌ ಹಾಕಿದ್ದಾರೆ.

ಅಶ್ವಿನಿಗೆ ಸಖತ್‌ ಆಗಿ ಟಾಂಗ್‌

ಇನ್ನೊಂದು ಕಡೆ ಅಶ್ವಿನಿ -ಗಿಲ್ಲಿ ನಡುವೆ ಮಾತು ತಾರಕಕ್ಕೇರಿದೆ. ಅಶ್ವಿನಿಗೆ ಕಾಲೆಳೆದ ಗಿಲ್ಲಿ ನಟಮನೆಯ ಕಿಚನ್‌ನಲ್ಲಿ ಕ್ಲೀನಿಂಗ್‌ ಮಾಡುವುದರಲ್ಲಿ ಬ್ಯುಸಿ ಆಗಿರುವ ಗಿಲ್ಲಿ ನಟ ಅವರು ನೀರು ಕುಡಿಯಲು ಬಂದಿದ್ದ ಅಶ್ವಿನಿಗೆ ಸಖತ್‌ ಆಗಿ ಟಾಂಗ್‌ ಕೊಟ್ಟಿದ್ದಾರೆ.

"ನಾನೊಬ್ಬಳ್ಳೆ ಇದ್ದಾಗ ಇವರಿಂದ ನನಗೆ ಮೆಂಟಲಿ ಟಾರ್ಚರ್‌ ಆಗತ್ತೆ. ನನಗೆ ಹೆಲ್ಪ್‌ ಮಾಡಿ ಧ್ರುವ್‌, ನನಗೆ ಪ್ರೊಟೆಕ್ಷನ್‌ ಕೊಡಿ ಧ್ರುವ್‌.. ನನ್‌ ಕೈಲಿ ಆಗ್ತಿಲ್ಲ ಧ್ರುವ್‌.." ಎಂದು ಅಶ್ವಿನಿ ಥರ ಇಮಿಟೇಟ್‌ ಮಾಡಿದ್ದಾರೆ ಗಿಲ್ಲಿ ನಟ. ಬಳಿಕ ನೇರಾನೇರ ಮಾತಿಗಿಳಿದ ಅವರು, "ವಯಸ್ಸಾಯ್ತು ಪಾಪ.. ಕ್ಯಾಪ್ಟನ್‌ ಆಗೋಕು ಆಗಲಿಲ್ಲ. ಒಂದು ಉಸ್ತುವಾರಿ ಕೂಡ ಸರಿಯಾಗಿ ಮಾಡೋಕೆ ಬರೋದಿಲ್ಲ" ಎಂದು ಗಿಲ್ಲಿ ಕಾಲೆಳೆದರೆ, ತಕ್ಷಣವೇ ರಾಶಿಕಾ ಶೆಟ್ಟಿ ಸಾಥ್‌ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಗೌಡಗೆ ಮತ್ತೆ ಕಾಲೆಳೆದ ಗಿಲ್ಲಿ ನಟ; ಈ ಬಾರಿ ಸಾಥ್‌ ನೀಡಿದ ರಾಶಿಕಾ ಶೆಟ್ಟಿ!

"ಅವರಿಗೆ ಕ್ಯಾಪ್ಟನ್‌ ಆಗೋಕೆ ಆಗಿಲ್ಲ ಸುಮ್ನಿರು.. ಕ್ಯಾಪ್ಟನ್‌ ಕೂಡ ಆಗದೇ ಇರೋರು ಇನ್ನು ಉಸ್ತುವಾರಿ ಎಲ್ಲಿಂದ ಆಗ್ತಾರೆ" ಎಂದು ರಾಶಿಕಾ ಹೇಳಿದ್ದಾರೆ. ಇನ್ನು, ರಾಶಿಕಾಗೆ ಸಾಥ್‌ ಕೊಟ್ಟ ಕಾವ್ಯ, "ನಿನಗೆ ಕ್ಯಾಪ್ಟನ್‌ ಆಗೋ ಯೋಗ್ಯತೆಯೇ ಇಲ್ಲ. ನಾನು ಅಖಾಡದಲ್ಲಿ ಸಾಬೀತು ಮಾಡಿದೆ ಅಂತಾರೆ. ಆದರೆ ಏನೂ ಆಗಲೇ ಇಲ್ಲ" ಎಂದು ಅಶ್ವಿನಿಗೆ ಟಕ್ಕರ್‌ ಕೊಟ್ಟಿದ್ದಾರೆ.