ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

Rashika Shetty: ಬಿಗ್‌ ಬಾಸ್‌ ಸೀಸನ್‌ 12ರ ಸೂಪರ್‌ ಸಂಡೇ ವಿಥ್‌ ಬಾದ್‌ಷಾ ಸುದೀಪ ಸಂಚಿಕೆ ಮಸ್ತ್‌ ಆಗಿದೆ. ಮನೆಯ ಸದಸ್ಯರಿಗೆ ಸುದೀಪ್‌ ಅವರು ಒಂದು ಚಟುವಟಿಕೆ ನೀಡಿದ್ದರು. ಅದೇನೆಂದರೆ, ಮನೆಯೊಳಗೆ ಇರುವ ಪಂಚಿಂಗ್‌ ಬ್ಯಾಗ್‌ಗೆ ಪಂಚ್‌ ಮಾಡಬೇಕು, ಅದರ ಮೇಲೆ ಮನೆಯ ಸದಸ್ಯರ ಫೋಟೋವನ್ನು ಹಚ್ಚಿ, ಮನಸ್ಸಿಲ್ಲಿ ಏನು ಹೇಳಬೇಕೋ ಎಂದಿರುತ್ತೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಈ ವೇಳೆ ಅಶ್ವಿನಿ ಅವರು ಬೇಕಬಿಟ್ಟಿ ರಾಶಿಕಾ ಬಗ್ಗೆ ಮಾತನಾಡಿದ್ದಾರೆ ಎಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ. ರಾಶಿಕಾ ಬಗ್ಗೆ ಅಶ್ವಿನಿ ಹೇಳಿದ ಮಾತು ಫ್ಯಾನ್ಸ್‌ಗೂ ಬೇಸರ ತರಿಸಿದೆ.

ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 5, 2026 8:11 AM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಸೂಪರ್‌ ಸಂಡೇ ವಿಥ್‌ ಬಾದ್‌ಷಾ ಸುದೀಪ ಸಂಚಿಕೆ ಮಸ್ತ್‌ ಆಗಿದೆ. ಮನೆಯ ಸದಸ್ಯರಿಗೆ ಸುದೀಪ್‌ (Sudeep) ಅವರು ಒಂದು ಚಟುವಟಿಕೆ ನೀಡಿದ್ದರು. ಅದೇನೆಂದರೆ, ಮನೆಯೊಳಗೆ ಇರುವ ಪಂಚಿಂಗ್‌ ಬ್ಯಾಗ್‌ಗೆ ಪಂಚ್‌ ಮಾಡಬೇಕು, ಅದರ ಮೇಲೆ ಮನೆಯ ಸದಸ್ಯರ ಫೋಟೋವನ್ನು ಹಚ್ಚಿ, ಮನಸ್ಸಿಲ್ಲಿ ಏನು ಹೇಳಬೇಕೋ ಎಂದಿರುತ್ತೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಈ ವೇಳೆ ಅಶ್ವಿನಿ (Ashwini Gowda) ಅವರು ಬೇಕಬಿಟ್ಟಿ ರಾಶಿಕಾ ಬಗ್ಗೆ ಮಾತನಾಡಿದ್ದಾರೆ ಎಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ. ರಾಶಿಕಾ ಬಗ್ಗೆ (Rashika Shetty) ಅಶ್ವಿನಿ ಹೇಳಿದ ಮಾತು ಫ್ಯಾನ್ಸ್‌ಗೂ ಬೇಸರ ತರಿಸಿದೆ.

ಏನೂ ಹೇಳಬೇಕೋ, ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಸುದೀಪ್‌ ಹೇಳಿದ್ದೇ ತಡ, ಅಶ್ವಿನಿ ಗೌಡ ಅವರ ಫೋಟೋವನ್ನು ಪಂಚಿಂಗ್‌ ಬ್ಯಾಗ್‌ಗೆ ಅಂಟಿಸಿ ರಾಶಿಕಾ, "ಬರೀ ಮ್ಯಾನಿಪೂಲೇಟ್‌ ಮಾಡಿ, ಎದುರು ಇರುವ ವ್ಯಕ್ತಿಯನ್ನು ಬೇರೆ ಥರ ತೋರಿಸುವುದು ಇವರ ಗುಣ" ಎಂದು ಪಂಚಿಂಗ್ ಬ್ಯಾಗ್‌ ಪಂಚ್‌ ಮಾಡಿದ್ದಾರೆ. ಆ ಬಳಿಕ ಅಶ್ವಿನಿ ಗೌಡ ಸರದಿ.

ಇದನ್ನೂ ಓದಿ: Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಒರಕೊಳೋಕೆ ರಘು ತೊಡೆ ಬೇಕು

ಅಶ್ವಿನಿ ಮಾತನಾಡಿ, ಮಿಸ್‌ ಯೂನಿವರ್ಸ್‌ ಅಂದುಕೊಂಡಿರುವ ರಾಶಿಕಾ.. ಇನ್ನೊಂದು ಟ್ರ್ಯಾಕ್‌, ಮತ್ತೊಂದು ಟ್ರ್ಯಾಕ್‌ ಅಂತ ನಾನು ಶುರು ಮಾಡಿಕೊಂಡಿರಲಿಲ್ಲ. ನಿನಗೆ ನಿಯತ್ತು ಇಲ್ಲ ಅನ್ನೋಕೆ ಸೂರಜ್‌ ಇದ್ನಲ್ಲ ಅವನೇ ದೊಡ್ಡ ಉದಾಹರಣೆ. ನಿನಗೆ ಒರಗಿಕೊಳ್ಳೋಕೆ ರಘು ಅವರ ತೊಡೆ, ರಘು ಅವರ ಹೆಗಲು ಬೇಕು ನನಗೆ ಅವಶ್ಯಕತೆ ಇಲ್ಲ.ನಾನು ಇನ್ನೊಬ್ಬರಿ ಹೆಗಲಾಗೆಗಿರ್ತೀನಿ ಎಂದು ಹೇಳಿದ್ದಾರೆ.



ನೆಟ್ಟಿಗರು ಗರಂ

ಈ ಕ್ಲಿಪ್‌ ವೈರಲ್‌ ಆಗಿದೆ. ಕೋಪಗೊಂಡಾಗ ಅಶ್ವಿನಿ ಗೌಡ ಬಳಸುವ ಪದಗಳು ಅವಳನ್ನು ನಿಜವಾಗಿಯೂ ಮೂರ್ಖಳನ್ನಾಗಿ ಕಾಣುವಂತೆ ಮಾಡುತ್ತದೆ. ಕಳೆದ ಎರಡು ದಿನಗಳಿಂದ ರಾಶಿಕಾ ಯಾವುದೇ ನಿಜವಾದ ಕಾರಣವಿಲ್ಲದೆ ಅವಳನ್ನು ಗುರಿಯಾಗಿಸಿಕೊಂಡಾಗ ಅವಳು ರಾಶಿಕಾಳನ್ನು ನಿರ್ಲಕ್ಷಿಸಿ ಹೆಚ್ಚು ಪ್ರಬುದ್ಧತೆಯನ್ನು ತೋರಿಸಬೇಕಾಗಿತ್ತು.

ಇಬ್ಬರೂ ತಪ್ಪಿತಸ್ಥರು ಆದರೆ AG ಖಂಡಿತವಾಗಿಯೂ ತನ್ನ ಮಾತುಗಳಿಂದ ಅದನ್ನು ಇನ್ನಷ್ಟು ಹದಗೆಡಿಸಿದ್ದಾರೆ ಎಂದು ಅಶ್ವಿನಿ ಬಗ್ಗೆ ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಅಸಹ್ಯಕರವಾಗಿತ್ತು... ನಿಮ್ಮ ಅಹಂಕಾರವನ್ನು ಸಾಬೀತುಪಡಿಸಲು ರಶಿಕಾಳನ್ನು ಬಳಸಿಕೊಂಡಿದ್ದೀರಿ ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ; ನಾಮಿನೇಶನ್‌ ವೇಳೆ ಭರ್ಜರಿ ಕೂಗಾಟ

ನಂತರ ಈ ಅವಕಾಶವು ರಕ್ಷಿತಾ ಶೆಟ್ಟಿ ಅವರಿಗೆ ಸಿಕ್ಕಿತ್ತು. ಅವರು ಧ್ರುವಂತ್‌ ಫೊಟೋವನ್ನು ಅಂಟಿಸಿ, ಪಂಚ್‌ ಮಾಡಲು ಆರಂಭಿಸಿದರು. "ಒಬ್ಬ ವ್ಯಕ್ತಿಗೆ ಅಸಹ್ಯ ಅಂತೀರಲ್ಲ, ಯಾರೂ ನಿಮಗೆ ಅಧಿಕಾರ ನೀಡಿದರು" ಎಂದು ಅಬ್ಬರಿಸಿದರು. ರಕ್ಷಿತಾ ಪಂಚ್‌ ಮಾಡುವ ರೀತಿಗೆ ಪಂಚಿಂಗ್‌ ಬ್ಯಾಗ್‌ ಕಿತ್ತೇ ಹೋಯಿತು. ಆದರೂ ಅದನ್ನು ಎತ್ತಿಕೊಂಡು ಪಂಚ್‌ ಹೊಡೆಯುತ್ತಲೇ ಇದ್ದರು ರಕ್ಷಿತಾ. "ಇವರಿಗೆ ಎಷ್ಟು ಹೊಡೆದರೂ ಸಾಕಾಗಲ್ಲ" ಎನ್ನುತ್ತಲೇ ಪಂಚ್‌ ಮಾಡಿದರು ರಕ್ಷಿತಾ. ಇದನ್ನು ಕಂಡ ಧ್ರುವಂತ್‌ಗೆ ನಗು ತಡೆಯಲು ಸಾಧ್ಯವಾಗಲಿಲ್ಲ.