ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಮಧ್ಯೆ ಜಗಳ ಆಗುತ್ತಲೇ ಇರುತ್ತಿತ್ತು. ಅನೇಕ ಬಾರಿ ಇಬ್ಬರು ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಗಿಲ್ಲಿಯಂತೂ ಚಾನ್ಸ್ ಸಿಕ್ಕಾಗೆಲ್ಲಾ ಕಾಲೆಳೆದಿದ್ದಾರೆ. ಸದ್ಯ ಇಬ್ಬರು ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಗಿಲ್ಲಿ ನಟ ಅವರು ಅಶ್ವಿನಿಗೆ ಕ್ಷಮೆ ಕೇಳಿದ್ದಾರೆ.
ಹೊಸ ಪ್ರೋಮೋದಲ್ಲಿ ಏನಿದೆ?
ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಪ್ರೋಮೋದಲ್ಲಿ ಮನೆಯ ಗಾರ್ಡನ್ ಏರಿಯಾದಲ್ಲಿ ಒಂದು ಫೈರ್ ಕ್ಯಾಂಪ ಹಾಕಲಾಗಿದೆ. ಅಲ್ಲಿ ಮಾತನಾಡಿರುವ ಗಿಲ್ಲಿ ನಟ, "ಜಗಳ ಆಡುವ ಭರದಲ್ಲಿ ನಾನೇ ಹೋಗೆ ಬಾರೇ ಎಂದು ಕರೆದಿದ್ದೇನೆ. ಅದರ ಅವಶ್ಯಕತೆ ಇರಲಿಲ್ಲ. ನೀವು ವಯಸ್ಸಲ್ಲಿ ದೊಡ್ಡವರು. ಇದನ್ನೆಲ್ಲಾ ನೆನೆಸಿಕೊಂಡ ಸಿಕ್ಕಾಪಟ್ಟೆ ಬೇಜಾರು ಆಗುತ್ತದೆ. ನಿಮ್ಮ ಮನಸ್ಸಿಗೆ ತುಂಬಾ ನೋವು ಮಾಡಿದ್ದೇನೆ, ಅದಕ್ಕೆ ಸಾರಿ" ಎಂದು ಕ್ಷಮೆ ಕೇಳಿದ್ದಾರೆ.
Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಗಿಲ್ಲಿ ನಟನಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಅಶ್ವಿನಿ ಗೌಡ?
ಇನ್ನು, ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣವೇನು? "ಜೀವನವನ್ನು ನಿನ್ ಥರ ತುಂಬಾ ಲೈಟಾಗಿ ತೆಗೆದುಕೊಂಡು, ಎಂಜಾಯ್ ಕೂಡ ಮಾಡಬಹುದು. ಎಲ್ಲವನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕೆಂದೇನಿಲ್ಲ. ಈ ವೇದಿಕೆಯಲ್ಲಿ ನಾನು ನಿನಗೆ ಥ್ಯಾಂಕ್ಸ್ ಹೇಳುತ್ತೇನೆ. ನಿನ್ನಿಂದ ನಾನು ಒಂದು ಒಳ್ಳೆಯ ಪಾಠವನ್ನು ಕಲಿತಿದ್ದೇನೆ" ಎಂದು ಅಶ್ವಿನಿ ಗೌಡ ಹೇಳಿದ್ದಾರೆ ಮತ್ತು ಗಿಲ್ಲಿಗೆ ಅಪ್ಪುಗೆ ನೀಡಿದ್ದಾರೆ.
ಗಿಲ್ಲಿ ನಟ - ಅಶ್ವಿನಿ ಗೌಡ ಹೊಸ ಪ್ರೋಮೋ ರಿಲೀಸ್
ಇನ್ನೇನು ಬಿಗ್ ಬಾಸ್ ಫಿನಾಲೆಗೆ ಮೂರು ದಿನಗಳಷ್ಟೇ ಬಾಕಿ ಇದೆ. ಧನುಷ್, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ರಘು ಅವರು ಈ ಸೀಸನ್‌ನ ಫಿನಾಲೆಯನ್ನು ತಲುಪಿದ್ದು, ಭಾನುವಾರ ರಾತ್ರಿ ಯಾರು ವಿನ್ನರ್ ಅನ್ನೋದು ಗೊತ್ತಾಗಲಿದೆ.