ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ'; ಪುಸ್ತಕ ಬರೆಯಲು ರೆಡಿಯಾದ ಗಿಲ್ಲಿ ನಟ!

Bigg Boss 12 Gilli Nata: ಗಿಲ್ಲಿ ನಟ ಮತ್ತು ಧ್ರುವಂತ್ ಅವರ ನಡುವಿನ ಹಾಸ್ಯ ಸಂಭಾಷಣೆಯ ಹೊಸ ಪ್ರೋಮೋ ವೈರಲ್ ಆಗಿದೆ. ಧ್ರುವಂತ್ ಬಗ್ಗೆ ಪುಸ್ತಕ ಬರೆಯಲು ನಿರ್ಧರಿಸಿರುವ ಗಿಲ್ಲಿ ನಟ, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಶೀರ್ಷಿಕೆ ನೀಡಿದ್ದಾರೆ.

'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ'; ಬುಕ್‌ ಬರೆಯುತ್ತಾರಂತೆ ಗಿಲ್ಲಿ!

-

Avinash GR
Avinash GR Dec 4, 2025 5:50 PM

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ವೀಕ್ಷಕರಿಗೂ ಗಿಲ್ಲಿ ನಟ ಎಂದರೆ, ಅಚ್ಚುಮೆಚ್ಚು. ಸದ್ಯ ಧ್ರುವಂತ್‌ ಜೊತೆಗೆ ಸಖತ್‌ ತಮಾಷೆ ಮಾಡಿದ್ದಾರೆ ಗಿಲ್ಲಿ ನಟ. ಕಲರ್ಸ್‌ ಕನ್ನಡ ರಿಲೀಸ್ ಮಾಡಿರುವ‌ ಈ ಹೊಸ ಪ್ರೋಮೋದಲ್ಲಿ ಇಬ್ಬರ ನಡುವಿನ ತಮಾಷೆ ಸಖತ್‌ ನಗು ತರಿಸಿದೆ. ಅಂದಹಾಗೆ, ಗಿಲ್ಲಿ ನಟ ಅವರು ಧ್ರುವಂತ್‌ ಬಗ್ಗೆ ಪುಸ್ತಕ ಬರೆಯುವುದಾಗಿ ಹೇಳಿಕೊಂಡಿದ್ದಾರೆ.

ಪುಸ್ತಕದ ಹೆಸರೇನು?

ಮನೆಯ ಲಿವಿಂಗ್‌ ಏರಿಯಾದಲ್ಲಿ ಕುಳಿತಿರುವ ಧ್ರುವಂತ್‌ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದಾರೆ. ತುಂಬಾ ಚೆನ್ನಾಗಿದೆ ಎಂದು ಧ್ರುವಂತ್ ಹೊಗಳಿದ್ದಾರೆ. ನಂತರ ಧ್ರುವಂತ್‌ಗೆ ಒಂದೊಂದೇ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಧ್ರುವಂತ್‌ ಕೂಡ ಫನ್ನಿ ಉತ್ತರಗಳು ಸಿಕ್ಕಿವೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿ & ಧ್ರುವಂತ್‌ ಪ್ರಶ್ನೋತ್ತರ

ಗಿಲ್ಲಿ ನಟ: ಬಿಗ್‌ ಬಾಸ್‌ಗೆ ಬಂದು 10 ವಾರದಲ್ಲಿ ಏನು ಕಲಿತಿದ್ದೀರಿ?

ಧ್ರುವಂತ್:‌ ಬಿಗ್‌ ಬಾಸ್‌ ನನಗೆ ಸುಖ ನೀಡಿದರು.

ಗಿಲ್ಲಿ ನಟ: ಇಲ್ಲಿ ನಿಮಗೆ ತುಂಬಾ ಕಷ್ಟ ದಿನ ಅಂತ ಅನ್ನಿಸಿದ್ದು ಯಾವಾಗ?

ಧ್ರುವಂತ್:‌ ನನಗೆ ಯಾವತ್ತೂ ಹಾಗೇ ಅನ್ನಿಸಿಲ್ಲ.

Super Hit: ʻಬಿಗ್‌ ಬಾಸ್‌ʼ ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲೂ ಗಿಲ್ಲಿ ನಟನ ಹವಾ ಶುರು; ಹೀರೋ ಆಗಿಬಿಟ್ರು ಮಾತಿನ ಮಲ್ಲ!

ಗಿಲ್ಲಿ ನಟ: ಮನೆಯಿಂದ ಹೊರಗೆ ಹೋಗಬೇಕು ಎಂಬ ನಿರ್ಧಾರ ಏಕೆ?

ಧ್ರುವಂತ್:‌ ವೈಯಕ್ತಿಕ ಕಾರಣ.

ಗಿಲ್ಲಿ ನಟ: ಅದನ್ನು ಹೇಳೋದಕ್ಕೆ ಆಗಲ್ವಾ? ನೋ ಕಾಮೆಂಟ್ಸ್.

ಗಿಲ್ಲಿ ನಟ: ಬಿಗ್‌ ಬಾಸ್ ಮನೆಗೆ ಬಂದು ತುಂಬಾ ನಗಾಡಿದ್ದಂತಹ ಕ್ಷಣ ಯಾವುದು?

ಧ್ರುವಂತ್:‌ ಗಿಲ್ಲಿ ನಟನನ್ನು ಭೇಟಿಯಾದ ಕ್ಷಣಗಳು.

ಗಿಲ್ಲಿ ನಟ: ಓಹ್‌ .. ಸೂಪರ್..‌ ತುಂಬಾ ದುಃಖವಾದಂತಹ ದಿನ ಯಾವುದು?

ಧ್ರುವಂತ್:‌ ಗಿಲ್ಲಿ ನಟನನ್ನು ಭೇಟಿಯಾದ ಕ್ಷಣಗಳು.

ಗಿಲ್ಲಿ ನಟ: ಓಹ್‌ ಮೈ ಗಾಡ್.‌ ವಾಟ್‌ ಇಸ್ ದಿಸ್‌ ಯಾರ್..‌?

- ಹೀಗೆ ಇಬ್ಬರ ನಡುವಿನ ಫನ್ನಿ ಮಾತುಕತೆ ಸಖತ್ ವೈರಲ್‌ ಆಗಿದೆ.

ಗಿಲ್ಲಿ ನಟ ಧ್ರುವಂತ್‌ ಅವರ ಹೊಸ ಪ್ರೋಮೋ



ಹೊರಗೆ ಹೋಗುವ ಮಾತನಾಡಿದ ಧ್ರುವಂತ್‌

ಧ್ರುವಂತ್‌ ಈಚೆಗೆ ಬಿಗ್‌ ಬಾಸ್‌ ಮನೆಯಿಂದ ಆಚೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಕಳೆದ ವಾರ ಸುದೀಪ್‌ ಎದುರಿನಲ್ಲೂ ಈ ಮಾತನ್ನು ಧ್ರುವಂತ್‌ ಹೇಳಿದ್ದರು. "ಈ ಗೇಮ್‌ನಲ್ಲಿರೋದಕ್ಕೋಸ್ಕರ ಅಥವಾ ಸೇಫ್‌ ಆಗೋದಕ್ಕೋಸ್ಕರ ಇವರುಗಳ ಜೊತೆಗೆ ನಾಳೆಯಿಂದ ಬಹಳ ಒಳ್ಳೆಯವನಂತೆ ಮಾತನಾಡಿಕೊಂಡು ಇರೋದರ ಬದಲು, ನಾನು ಈ ಗೇಮ್‌ ಶೋನಿಂದ ಹೊರಗಡೆ ಹೋಗೋದೆ ನನಗೆ ಒಳ್ಳೆಯದು ಅಂತ ನನಗೆ ಅನಿಸುತ್ತೆ. ನಾನು ಇದನ್ನ ನಿಮ್ಮ ಹತ್ತಿರ ಮನವಿ ಮಾಡಿಕೊಳ್ತಿದ್ದೇನೆ ಬಿಗ್‌ ಬಾಸ್" ಎಂದು ಕ್ಯಾಮೆರಾ ಮುಂದೆ ನಿಂತು ಧ್ರುವಂತ್‌ ಹೇಳಿದ್ದರು. ಆದರೆ ಅವರು ಹೊರಗೆ ಹೋಗಬೇಕು ಎಂದರೆ, ಅದನ್ನು ಜನರು ನಿರ್ಧರಿಸಬೇಕು.