ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಧ್ರುವಂತ್ (Dhruvanth) ಅವರು ಗಿಲ್ಲಿ ಮೇಲೆ ಟಾರ್ಗೆಟ್ ಮಾಡೋದು ಹೆಚ್ಚಾಗಿದೆ. ಬಡವ ಅಂತ ನಿಮ್ಮ ರೀತಿ ಬೇಕಾ ಬಿಟ್ಟಿ ತೋರಿಸಿಕೊಳ್ಳೋ ನಾಟಕ ನಾನು ಮಾಡಲ್ಲ ಅಂತ ಗಿಲ್ಲಿಗೆ ನೇರವಾಗಿ ಹೇಳಿದ್ದಾರೆ. ಗಿಲ್ಲಿ (Gilli) ಕೂಡ ಧ್ರುವಂತ್‌ಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಬಡವನಾಗಿ ಮುಖವಾಡ
ಗಿಲ್ಲಿ ಅವರು ಬನಿಯನ್ ಹಾಕ್ಕೊಂಡು ತಾನು ಬಡವನಾಗಿ, ಮುಖವಾಡ ಹಾಕಿಕೊಂಡು, ನನ್ನತ್ರ 100 ಕುರಿ ಇದೆ ಅಂತಾರೆ. ಇರೋರು ಹಾಗೇ ಅನ್ನಲ್ಲ. ನೀವು ಸಿರಿವಂತರು ಸರ್. ಇನ್ನು ಬಟ್ಟೆ ವಾಶ್ ಮಾಡದೇ, ಹಾಕದೇ ಕೆರಕ್ಕೊಂಡು ಪೋಟ್ರೇ ಮಾಡ್ತೀರಾ ಎಂದಿದ್ದಾರೆ.
ಗಿಲ್ಲಿ ಬಡವನಂತೆ ತೋರಿಸಿಕೊಳ್ಳುತ್ತಿದ್ದಾನೆ. ಬನಿಯನ್ ಹಾಕಿ ಓಡಾಡುತ್ತಿದ್ದಾನೆ. ಗಿಲ್ಲಿ ನಟನ ಬಳಿ ಇರೋದು ಎಂಜಿ ಹೆಕ್ಟರ್ ಕಾರು. 100 ಕುರಿ ಕೂಡ ಇದೆ. ಆಗ ಗಿಲ್ಲಿ ನಟನ ರಿಯಲ್ ಫೇಸ್ ಗೊತ್ತಾಯ್ತುಎಂದರು ಧ್ರುವಂತ್.
ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ
ಬಡವ ಅಂತ ಯಾವಾಗ ಹೇಳಿದ್ದೆ?
ಹೀಗೆ ಹೇಳುತ್ತಲೇ ಗಿಲ್ಲಿ, ನಾನು ಬಡವ ಅಂತ ಯಾವಾಗ ಹೇಳಿದ್ದೆ? ಅಂತ ತಿರುಗೇಟು ನೀಡಿದ್ದಾರೆ. ಬಡವ ಮಾತ್ರ ಬನಿಯನ್ ಹಾಕ್ತಾನಾ? ಬೇರೆ ಯಾರೂ ಹಾಕಲ್ವಾ? ಎಂಜಿ ಹೆಕ್ಟರ್ ಇರೋದು ಹೌದು. ಅದು ಸೆಕೆಂಡ್ ಹ್ಯಾಂಡ್ ತೆಗೆದುಕೊಂಡಿದ್ದು.
100 ಕುರಿ ತಂದು ಫಾರ್ಮ್ ಮಾಡಬೇಕು ಅಂತ ಅಂದುಕೊಂಡಿದ್ದೆ ಆದರೆ ಇನ್ನು ಕುರಿ ತಂದಿಲ್ಲ ಎಂದಿದ್ದಾರೆ. ಅಷ್ಟೆ ಅಲ್ಲ ಮಲ್ಲಮ್ಮ ಜೊತೆಗಿದ್ದು ಮಲ್ಲಮ್ಮ ಅವರನ್ನ ಕಳಿಸಿದ್ರು, ನಂತರ ಚಂದ್ರಪ್ರಭ, ನೋಡಿ ಮುಂದೆ ಅವರ ಜೊತೆ ಇರುವಾಗ ಹುಷಾರಾಗಿರಿ ಎಂದಿದ್ದಾರೆ.
ಕಾವ್ಯ ಬಳಿ ಗಲಾಟೆ
ಕಳೆದ ಸಂಚಿಕೆಯಲ್ಲಿ ಧ್ರುವಂತ್ ಹಾಗೂ ರಾಶಿಕಾ, ಕಾವ್ಯ ನಡುವೆಯೂ ಜೋರಾಗಿ ಜಗಳ ಆಗಿದೆ. ಹೆಣ್ಮಕ್ಕಳ ಜೊತೆ ಮಾತಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ. ‘ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ’ಎಂದು ಕಾವ್ಯ ಅವರು ತಿರುಗೇಟು ನೀಡಿದ್ದಾರೆ. ರಾಶಿಕಾ ಬಗ್ಗೆ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.
ಕಾವ್ಯ ಬಳಿ ಹೋಗಿ ಧ್ರುವಂತ್ ನೀಡಿದ ಹೇಳಿಕೆ ದೊಡ್ಡ ಜಗಳಕ್ಕೆ ಕಾರಣ ಆಗಿದೆ. ರಾಶಿಕಾ ಮೊದಲಿಗೆ ನನ್ನ ಜೊತೆ ಹತ್ತಿರ ಆಗೋಕೆ ಬಂದ್ರು, ಬಳಿಕ ಅಭಿಷೇಕ, ಈಗ ಸೂರಜ್ ಅನ್ನೋ ಧ್ರುವಂತ್ ಮಾತು ರಾಶಿಕಾಗೆ ಗೊತ್ತಾಗಿದೆ. ಕಾವ್ಯ ಅವರೇ ಈ ಬಗ್ಗೆ ಹೇಳಿದ್ದಾರೆ.
ರಕ್ಷಿತಾ ವಿರುದ್ಧ ಧ್ರುವಂತ್ ಗರಂ
ರಕ್ಷಿತಾ ಬಗ್ಗೆಯೂ ಕೂಗಾಡಿದ್ದಾರೆ ಧ್ರುವಂತ್ ರಕ್ಷಿತಾ ವಿರುದ್ಧ ಧ್ರುವಂತ್ ಮಾತನಾಡಿ, ನಾನು ಕೂಡ ಮಂಗಳೂರಿನವನು. ಎಂತ ಗೊತ್ತುಂಟ ಗಾಯ್ಸ್ ಅನ್ನೋದೆಲ್ಲ ನಾಟಕ. ಶನಿವಾರ ಮಾತ್ರ ಅವರಿಗೆ ಕನ್ನಡ ಬರಲ್ಲ. ಅದೇನಾದ್ರೂ ಜಗಳಕ್ಕೆ ನಿಂತರೆ ಯಾವುದೇ ಭಾಷೆಯ ಸಮಸ್ಯೆ ಇರಲ್ಲ. ಇದೇ ರಕ್ಷಿತಾ ಅವರ ನಾಟಕೀಯ ಫೇಕ್ ಮುಖವಾಡ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada: ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್! ಗಿಲ್ಲಿ ಹೇಳಿದ್ದು ಕೊನೆಗೂ ಸತ್ಯವಾಯ್ತು
ಇನ್ನು ಧ್ರುವಂತ್ ಅವರ ಈ ನಡೆಗೆ ಧೃವಂತ್ ಗೆ ಬುದ್ದಿ ಬರಲ್ಲ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.