ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada: ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್‌! ಗಿಲ್ಲಿ ಹೇಳಿದ್ದು ಕೊನೆಗೂ ಸತ್ಯವಾಯ್ತು

ಮಧ್ಯರಾತ್ರಿ ಗೆಜ್ಜೆ (Bigg Boss Kannada 12) ಸೌಂಡ್ ಮಾಡಿ, ಅದನ್ನ ರಕ್ಷಿತಾ ಶೆಟ್ಟಿ (Rakshitha shetty) ಮೇಲೆ ಹಾಕೋಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಯತ್ನಿಸಿದರು. ಆದರೆ, ಜಾಹ್ನವಿ ದಿಂಬಿನಲ್ಲಿದ್ದ ಗೆಜ್ಜೆಯನ್ನ ತೆಗೆದು ತೋರಿಸಿ ಗಿಲ್ಲಿ ಬಳಿ ರಕ್ಷಿತಾ ಶೆಟ್ಟಿ ಸತ್ಯ ಹೇಳಿಬಿಟ್ಟರು. ಮನೆಯವರನ್ನು ಬಕ್ರಾ ಮಾಡೋಣ ಎಂದು ಇಬ್ಬರೂ ಜಗಳ ಮಾಡೋದಾಗಿ ಮಾತನಾಡಿಕೊಂಡಿದ್ದಾರೆ. ಸ್ವತಃ ಗಿಲ್ಲಿ (Gilli) ಅವರು ಅಶ್ವಿನಿ ಜಾಹ್ನವಿ ಜಗಳ ಆದ ಬಳಿಕ ಇದೆಲ್ಲ ನಾಟಕ ಅಂತ ಹೇಳಿಕೊಂಡಿದ್ದರು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮೈಕ್‌ ಇಲ್ಲದೇ ಸಮಯದಲ್ಲಿ ಈ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದಾರೆ ಅಶ್ವಿನಿ. ಈ ಸಂಚಿನ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ವಾರ ಕಿಚ್ಚನ ಕ್ಲಾಸ್‌ ಪಕ್ಕಾಆದಂತಿದೆ.

ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್‌

Ashwini Bigg Boss Kannada -

Yashaswi Devadiga
Yashaswi Devadiga Nov 11, 2025 7:57 AM

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಅಂತೂ ಅಶ್ವಿನಿ ಹಾಗೂ ಜಾಹ್ನವಿ ಅವರ ಮುಖವಾಡ ಬಯಲಾಗಿದೆ. ಸ್ವತಃ ಗಿಲ್ಲಿ ಅವರೇ ಇದು ಇವರಿಬ್ಬರದ್ದೂ ನಾಟಕ ಎಂದು ಹೇಳಿದ್ದರು. ಅದರಂತೆ ಅಶ್ವಿನಿ ಅವರೇ ಈಗ ಒಪ್ಪಿಕೊಂಡಿದ್ದಾರೆ. ಈ ವೀಕೆಂಡ್‌ ಕಿಚ್ಚನಿಂದ (Kichcha Sudeep) ಕ್ಲಾಸ್‌ ಪಕ್ಕಾ ಆದಂತಿದೆ. ಹಿಂದೊಮ್ಮೆ ಗೆಜ್ಜೆ ವಿಚಾರ ಬಯಲಾದ ನಂತರ, ಅಶ್ವಿನಿ ಹಾಗೂ ಜಾಹ್ನವಿ (Ashwini Jhanvi) ನಡುವೆ ಜಗಳ ಶುರುವಾಗಿತ್ತು. ಆಗ ಸ್ವತಃ ಗಿಲ್ಲಿ ಅವರೇ ಇದು ಇವರಿಬ್ಬರದ್ದೂ ನಾಟಕ ಎಂದು ಹೇಳಿದ್ದರು.

ಮನೆಯವರಿಗೆ ಬಕ್ರಾ ಮಾಡಿದ ಕಿಲಾಡಿ ಜೋಡಿ!

ಮಧ್ಯರಾತ್ರಿ ಗೆಜ್ಜೆ ಸೌಂಡ್ ಮಾಡಿ, ಅದನ್ನ ರಕ್ಷಿತಾ ಶೆಟ್ಟಿ ಮೇಲೆ ಹಾಕೋಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಯತ್ನಿಸಿದರು. ಆದರೆ, ಜಾಹ್ನವಿ ದಿಂಬಿನಲ್ಲಿದ್ದ ಗೆಜ್ಜೆಯನ್ನ ತೆಗೆದು ತೋರಿಸಿ ಗಿಲ್ಲಿ ಬಳಿ ರಕ್ಷಿತಾ ಶೆಟ್ಟಿ ಸತ್ಯ ಹೇಳಿಬಿಟ್ಟರು. ಮನೆಯವರನ್ನು ಬಕ್ರಾ ಮಾಡೋಣ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ ಎಂದು ಗಿಲ್ಲಿ ಅವರು ಅಶ್ವಿನಿ ಜಾಹ್ನವಿ ಜಗಳ ಆದ ಬಳಿಕ ಹೇಳಿಕೊಂಡಿದ್ದರು. ಈಗ ಅದು ಸತ್ಯವಾಗಿದೆ. ಡ್ರೆಸ್ಸಿಂಗ್​ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿಕೊಂಡ ವಿಷಯವನ್ನು ಅಶ್ವಿನಿ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ : Bigg Boss Kannada 12: ವಿಶೇಷ ಅಧಿಕಾರ ಬಳಸಿದ ಸುಧಿ, ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದ ಚಂದ್ರಪ್ರಭ

jhanvi ashwini Gowda

ಮಾಸ್ಟರ್‌ ಪ್ಲ್ಯಾನ್

ಹೌದು ಜಾಹ್ನವಿ, ಅಶ್ವಿನಿ ಅವರಿಬ್ಬರ ನಾಟಕ ರಿವೀಲ್‌ ಆಗಿದೆ. ಇಬ್ಬರೂ ದೂರವಾದ ಹಾಗೆ ನಾಟಕ ಮಾಡೋಣ ಎಂದು ಚರ್ಚೆ ಮಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಅದರದ್ದೇ ಆದ ನಿಯಮವಿದೆ. ಮೈಕ್‌ ಇಲ್ಲದೇ ಮಾತನಾಡುವ ಹಾಗಿಲ್ಲ. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮೈಕ್‌ ಇಲ್ಲದೇ ಸಮಯದಲ್ಲಿ ಈ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಈ ವಾರ ಕಿಚ್ಚನ ಕ್ಲಾಸ್‌ ಪಕ್ಕಾಆದಂತಿದೆ.

ಗೆಜ್ಜೆ ವಿಚಾರ ದೊಡ್ಡದಾದಾಗ, ಜಾಹ್ನವಿ ಹಾಗೂ ಅಶ್ವಿನಿ ಒಂದು ಸಂಚು ಮಾಡಿದ್ದರು ಇಬ್ಬರೂ ಮನೆಯವರ ಎದುರು ಮಾತು ಬಿಟ್ಟುಕೊಳ್ಳೋಣ ಎಂದಿದ್ದರಂತೆ. ಜಾಹ್ನವಿ ಜೊತೆಗಿನ ವೈರತ್ವ ಹೆಚ್ಚಿದ ಬಳಿಕ ಅಶ್ವಿನಿ ಗೌಡ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ರಕ್ಷಿತಾ ಹೇಳಿದ್ದು ಸತ್ಯವಾಯ್ತು!

ರಕ್ಷಿತಾ ಹೇಳಿದ್ದು ತಪ್ಪಿಲ್ಲ ಇದು ಧಾರಾವಾಹಿ ಅಲ್ಲ ಆಕ್ಟ್ ಮಾಡ್ಬೇಡಿ ಅಂತಾ. ಆದ್ರೂ ಇವ್ರು ಇಲ್ಲೂ ಆಕ್ಟ್ ಮಾಡಿ ತೋರಿಸಿದ್ರಲಾ ವೀಕ್ಷಕರನ್ನೇ ಬಕ್ರಾ ಮಾಡಿದ್ರಲಾ. ಆದ್ರೆ ಯಾರು ಬ ಕ್ರಾ ಆಗಿಲ್ಲ ಯಾಕಂದ್ರೆ ಎಲರಿಗೂ ಗೊತ್ತಿತ್ತು ಇವ್ರ ಡ್ರಾಮಾ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

ಗಿಲ್ಲಿ ಹೇಳಿದ್ದೂ ಇದೆ!

ಕಳೆದ ವಾರ ಸುದೀಪ್‌ ಕೂಡ ಹೇಳಿದ್ದರು. ಗೆಜ್ಜೆ ಪ್ರಕರಣದಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ ಇಬ್ಬರದ್ದೂ ತಪ್ಪಿದೆ. ಆದರೆ, ಹೆಚ್ಚು ಹೈಲೈಟ್ ಆಗಿದ್ದು ಅಶ್ವಿನಿ ಗೌಡ. ಜಾನ್ವಿ ತಪ್ಪಿಸಿಕೊಂಡರು ಎಂದಿದ್ದರು. ಅಶ್ವಿನಿ ಗೌಡ, ಜಾಹ್ನವಿ ಅವರು ಪರಸ್ಪರ ಬಿಗ್‌ ಬಾಸ್‌ ಮನೆಯಲ್ಲಿ ಇರಲು ಯಾಕೆ ಅರ್ಹತೆ ಇದೆ ಎನ್ನುವ ಅರ್ಥದಲ್ಲಿ ವಾದ ಮಾಡಬೇಕಿತ್ತು.

ಇದನ್ನೂ ಓದಿ: Dharmendra: ಧರ್ಮ ಮೀರಿದ ಪ್ರೇಮವಿವಾಹ! ಡ್ರೀಮ್ ಗರ್ಲ್ ಮೇಲೆ ಲವ್; ಧರ್ಮೇಂದ್ರ - ಹೇಮಾ ಮಾಲಿನಿ ಕ್ಯೂಟ್‌ ಪ್ರೇಮ ಕಥೆ ಇದು

ನನ್ನ ಸ್ನೇಹವನ್ನು ಬಳಸಿಕೊಂಡರು ಎಂಬ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ. ಆಮೇಲೆ ಇವರು ಮಾತನಾಡಲೇ ಇಲ್ಲ. ಹೀಗಿದ್ದರೂ ಕೂಡ ಜಾಹ್ನವಿ, ಅಶ್ವಿನಿ ಗೌಡ ಅವರು ಮಾತನಾಡುತ್ತಿದ್ದಾರೆ, ಬೇರೆ ಆಗಿರುವ ಥರ ನಾಟಕ ಮಾಡುತ್ತಿದ್ದಾರೆ, ಕರ್ನಾಟಕ ಜನತೆಯನ್ನು ಯಾಮಾರಿಸುತ್ತಿದ್ದಾರೆ ಎಂದು ಗಿಲ್ಲಿ ನಟ ಹೇಳಿದ್ದರು.