ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ (Sudeep) ಅವರು ವಾರದ ಪಂಚಾಯಿತಿಯಲ್ಲಿ ಯಾವ ವಿಚಾರದ ಬಗ್ಗೆ ಮಾತನಾಡಬಹುದು ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ. ಈ ವಾರ ಜಂಟಿ ಕಥೆ ಬಗ್ಗೆ ಕಿಚ್ಚ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ. ಈ ವಾರ ಆಗಿರುವಂತಹ ಜಂಟಿಗಳ ವಾರ್‌ನಲ್ಲಿ (Janti War) ಒಂದಾಗಲ್ಲ ಅಂದುಕೊಂಡವರು ಒಟ್ಟಾಗ್ತಾರೆ. ಬೇರೆ ಆಗಲ್ಲ ಅಂದುಕೊಂಡವರು ಬೇರೆ ಆಗ್ತಾರೆ. ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಅನ್ನೋದೇ ಈ ವಾರದ ಪಂಚಾಯ್ತಿ.
ರಘು ಹಾಗೂ ಗಿಲ್ಲಿಯದ್ದೇ ಸಖತ್ ಹೈಲೆಟ್
ಪ್ರೋಮೋದಲ್ಲಿ ರಘು ಹಾಗೂ ಗಿಲ್ಲಿಯದ್ದೇ ಸಖತ್ ಹೈಲೇಟ್ ಆಗಿದೆ. ಕುಚಿಕು ಗೆಳಯ ರಘು ಈಗ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ರಘು ಅವರು ಪ್ಲೇಟ್ನಲ್ಲಿ ಚಪಾತಿ ತಿನ್ನುತ್ತಾ ಇರುತ್ತಾರೆ. ಅಲ್ಲಿಗೆ ತೆರಳುವ ಗಿಲ್ಲಿ ನಟ ತಮಗೆ ಒಂದು ಪೀಸ್ ಕೊಡುವಂತೆ ಕೇಳುತ್ತಾರೆ. ಹಲವು ನಿಮಿಷಗಳ ಕಾಲ ಇವರ ಮಧ್ಯೆ ಚರ್ಚೆ ಆಗುತ್ತದೆ. ಏನೇ ಮಾಡಿದರೂ ಇದಕ್ಕೆ ರಘು ಒಪ್ಪುವುದೇ ಇಲ್ಲ. ಆ ಬಳಿಕ ಬೇಸರದಲ್ಲಿ ಗಿಲ್ಲಿ ಅಲ್ಲಿಂದ ತೆರಳುತ್ತಾರೆ. ಇದು ನಿನ್ನೆಯಿಂದ ವೈರಲ್ ಆಗ್ತಿರೋ ವಿಡಿಯೋ.
ಅದಕ್ಕೂ ಮುಂಚೆ ಮನೆಯಲ್ಲಿ ಈ ವಾರ ಗಿಲ್ಲಿ ಮತ್ತು ರಘು ನಡುವೆ ಹಲವು ಮನಸ್ತಾಪಗಳು ಆಗಿವೆ. ಸದಾ ಕಾಲ ರಘು ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಆದರೆ ಈಗ ಜೋಡಿ ಹೀಗಿಲ್ಲ.
ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದ ರಘು
ಚೂರಿ ಇರಿಯುವ ಮೂಲಕ ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದರು. ಧನುಷ್‌ಗೆ ಕೂಡ ಒಂದು ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ರ್ಯಾಂಕಿಂಗ್ ನೀಡಬೇಕಿತ್ತು. ಗಿಲ್ಲಿಗೆ ಎರಡನೇ ಸ್ಥಾನವನ್ನು ನೀಡಿದ್ದರು ಧನುಷ್. ಇದು ರಘು ಅವರಿಗೆ ಕೋಪ ತರಿಸಿದೆ. ಅಲ್ಲಿಂದ ರಘು ಹಾಗೂ ಗಿಲ್ಲಿ ಮಧ್ಯೆ ವಾದ ವಿವಾದವೂ ನಡೆಯಿತು . ರಘು ಮೊದಲು ಧ್ರುವಂತ್‌ಗೆ ನಾಮಿನೇಟ್ ಮಾಡಿದರೆ, ಎರಡನೇಯದಾಗಿ ಗಿಲ್ಲಿಗೆ ನಾಮಿನೇಟ್ ಮಾಡಿದರು.
ಕಲರ್ಸ್ ಕನ್ನಡ ಪ್ರೋಮೋ
ರಘು ಅವರು ಗಿಲ್ಲಿ ಬಗ್ಗೆ ಅನೇಕ ಕಾರಣವನ್ನು ಕೊಟ್ಟರು ಆದರೆ ಗಿಲ್ಲಿ ಕೂಡ ಸುಮ್ಮನಾಗಿಲ್ಲ. ʻನನ್ನ ಡ್ರಾಯರ್‌ಗೆ ಕೈಹಾಕಿ ಬಟ್ಟೆ ಮುಟ್ಟೋಕೆ ನೀನ್ಯಾರು ಅಂದಿದ್ರೆ ನೀನೇ ತಪ್ಪಿತಸ್ಥ ಆಗ್ತಿದ್ದೆ. ಬಟ್ಟೆಗಳನ್ನ ಎಸೆದಿದ್ದು ಅದಕ್ಕಿಂತ ದೊಡ್ಡ ತಪ್ಪು. ಟಾಸ್ಕ್‌ಗಳಲ್ಲಿ ನಾನೂ ಆಡಿದೆ. ನೀವು ಆಡಿ ಗೇಮ್‌ನಲ್ಲಿ ಸೋತ್ರಿʼ ಎಂದು ರಘುಗೆ ಗಿಲ್ಲಿ ಹೇಳಿದ್ದರು. ಆ ಬಳಿಕ ರಘು ಕೂಡ ನನ್ನ ಪಕ್ಕ ಇನ್ನು ಮುಂದೆ ಕೂರಬೇಡ ಅಂತ ಗಿಲ್ಲಿಗೆ ಹೇಳಿದರು, ʻನೀನಂದ್ರೆ ನಂಗೆ ಇಷ್ಟ. ನೀನು ನನ್ನ ಫ್ರೆಂಡ್. ನಾನು ಕುಚ್ಚಿಕ್ಕುನಾ ಬಿಟ್ಟುಕೊಡೋದಿಲ್ಲʼ ಅಂತ ಗಿಲ್ಲಿ ಹೇಳಿದ್ದರು. ಇಷ್ಟಾಗಿಯೂ ನಿನ್ನೆ ರಘು ಮತ್ತೆ ಗಿಲ್ಲಿ ಬಗ್ಗೆ ಅಸಮಾಧನ ವ್ಯಕ್ತಪಡಿಸಿದರು.
ಗಿಲ್ಲಿ ವಿರುದ್ಧ ರಕ್ಷಿತಾ
ರಕ್ಷಿತಾ ವಿಚಾರಕ್ಕೆ ಬರೋದಾದರೆ, ಗಿಲ್ಲಿ ಅವರು 2ನೇ ಸ್ಥಾನಕ್ಕೆ ಅರ್ಹರಲ್ಲ ಎಂದು ಕೂಗಾಡಿದರು. ತಾವು ಒಂದು ಅಥವಾ ಎರಡನೇ ಸ್ಥಾನ ಪಡೆಯಬೇಕು ಎಂದು ಆಲೋಚಿಸುವ ಬದಲು ಮಾಳುಗೆ 11ನೇ ಸ್ಥಾನ ನೀಡಿದ್ದು ಏಕೆ ಎಂದು ಪ್ರಶ್ನೆ ಮಾಡಲು ಆರಂಭಿಸಿದರು.ಗಿಲ್ಲಿ ಕೂಡ ನಾಮಿನೇಟ್ ಮಾಡುವ ಸಮಯದಲ್ಲಿ, ರಕ್ಷಿತಾ ಅವರಿಗೆ ಮಾತಿನಲ್ಲಿ ತಿವಿದರು. ನೀನು ಬೇರೆ ಅವರನ್ನು ಗೆಲ್ಲಿಸಲು ಬಂದಿದ್ದೀಯಾನೀನು ಗೆಲ್ಲಲು ಬಂದಿದ್ದೀಯಾ ಅಂತ ನೇರವಾಗಿಯೇ ಕೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್ ಮಾಡಿದ್ದೇಕೆ ಚೈತ್ರಾ ಕುಂದಾಪುರ?
ಅಶ್ವಿನಿ ಹಾಗೂ ರಘು ಈ ವಾರ ಜೋಡಿಯಾಗಿ ಆಡಿದ್ದಾರೆ. ರಜತ್ ಹಾಗೂ ಚೈತ್ರಾ ಒಟ್ಟಿಗೆ ಬಂದಿದ್ದೃೂ ಜೋಡಿ ಒಟ್ಟಿಗೆ ಆಟ ಆಡಿಲ್ಲ. ಒಟ್ಟಾರೆಯಾಗಿ ಈ ವಾರ ಈ ಎಲ್ಲ ವಿಚಾರಗಳ ಕುರಿತು ಕಿಚ್ಚ ಮಾತನಾಡಲಿದ್ದಾರೆ.