Bigg Boss Kannada 12: ನಮಗೇನು ತೆವಲಾ ಇಲ್ಲಿ ಅನ್ನಿಸಿಕೊಳ್ಳೋಕೆ ಅಂತ ಅಬ್ಬರಿಸಿದ ರಜತ್; ಇದೊಂದು ವಿಚಾರಕ್ಕೆ ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು!
Rajath: ಈ ವಾರ ಬಿಗ್ ಬಾಸ್ ಮನೆಯಲ್ಲಿ ಸದಸ್ಯರು ಲಕ್ಷುರಿ ಪಾಯಿಂಟ್ ಕಳೆದುಕೊಂಡಿದ್ದಾರೆ. ಹೀಗಾಗಿ ದಿನಸಿ ಇಲ್ಲವಾಗಿದೆ. ಇರೋ ಅಷ್ಟರಲ್ಲೇ ಮನೆ ಮ್ಯಾನೆಜ್ ಮಾಡಿಕೊಳ್ಳಬೇಕಾಗಿದೆ. ಈ ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದವಾಗಿದೆ. ಊಟದ ವಿಚಾರಕ್ಕೆ ರಜತ್, ಅಶ್ವಿನಿ ಹಾಗೂ ರಘು ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಸದಸ್ಯರು ಲಕ್ಷುರಿ ಪಾಯಿಂಟ್ (Luxury Point) ಕಳೆದುಕೊಂಡಿದ್ದಾರೆ. ಹೀಗಾಗಿ ದಿನಸಿ ಇಲ್ಲವಾಗಿದೆ. ಇರೋ ಅಷ್ಟರಲ್ಲೇ ಮನೆ ಮ್ಯಾನೆಜ್ ಮಾಡಿಕೊಳ್ಳಬೇಕಾಗಿದೆ. ಈ ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದವಾಗಿದೆ. ಊಟದ ವಿಚಾರಕ್ಕೆ ರಜತ್ (Rajath), ಅಶ್ವಿನಿ ಹಾಗೂ ರಘು (Raghu) ಮಧ್ಯೆ ಮಾತಿನ ಚಕಮಕಿ ನಡೆದಿದೆ. `ನನ್ನ ಪಾಲನ್ನು ತಿಂತಾ ಇದ್ದಾರೆ ಅಂದರೆ , ನಮಗೇನು ತೆವುಲಾ ಇಲ್ಲಿ ಅನ್ನಿಸಿಕೊಳ್ಳೋಕೆ' ಅಂತ ಕೂಗಾಡಿದ್ದಾರೆ ರಜತ್.
ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು!
ಹೊಸ ಪ್ರೋಮೊ ಔಟ್ ಆಗಿದೆ. ಕ್ಯಾಪ್ಟನ್ ಅಭಿಷೇಕ್ ಇದ್ದವರು ಯಾರೆದೆಲ್ಲ ಎಷ್ಟೆಷ್ಟು ಫುಡ್ ಅಂತ ಶೇರ್ ಮಾಡಿಕೊಳ್ಳಿ ಎಂದಿದ್ದಾರೆ. ಇದು ರಜತ್ ಕೋಪಕ್ಕೆ ಕಾರಣವಾಗಿದೆ. ಅದಕ್ಕೆ ರಜತ್ ಗರಂ ಆಗಿ, ʻಒಂದು ಕೆಲಸ ಮಾಡಿ, ಅಕ್ಕಿನೂ ಬಿಡಿಸಿಟ್ಟುಕೊಟ್ಟು ಬಿಡಿʼ ಎಂದಿದ್ದಾರೆ. ಅಷ್ಟೊತ್ತಿಗೆ ರಘು ಕೂಡ, ʻನಮಗೇನು ತೆವಲಾ? ನಿಮಗೆ ತಿನ್ನಸಬೇಕುʼ ಅಂತ ಮಾತನಾಡಿದ್ದಾರೆ. ರಘು ಮಾತಿಗೆ ಕೆಂಡವಾದ ಅಶ್ವಿನಿ, ʻನಿಮಗೆ ಆಗಲ್ಲ ಅಂದ್ರೆ ಬಿಡಿ ಸರ್ ಬೇರೆ ಅವರು ಮಾಡ್ತಾರೆʼ ಎಂದಿದ್ದಾರೆ. ʻನೀವು ಏಕೆ ಎಲ್ಲದಕ್ಕೂ ಮಾತನಾಡಲು ಬರ್ತೀರಾʼ ಅಂತ ರಘು ಕೇಳಿದ್ದಕ್ಕೆ ʻತೆವಲು ಅನ್ನೋದು ಏಕೆ ಅಂತʼ ಕೂಗಾಡಿದ್ದಾರೆ ಅಶ್ವಿನಿ.
ಕಲರ್ಸ್ ಕನ್ನಡ ಪ್ರೋಮೋ
ಇದನ್ನೂ ಓದಿ: Bigg Boss Kannada 12: ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾಗೆ ಯೋಗ್ಯತೆನೇ ಇಲ್ಲ ಎಂದ ಮನೆಮಂದಿ
ಬುಜ್ಜಿ ಗರಂ!
ʻನನಗೆ ಬೇಕು ಅಂದರೆ ನಾನು ತಿಂತೀನಿ, ಅವರು ಬೇಕು ಅಂದ್ರೆ ಅವರು ತಿಂತಾರೆ. ನನ್ನ ಪಾಲನ್ನು ತಿಂತಾ ಇದ್ದಾರೆ ಅಂದರೆ , ನಮಗೇನು ತೆವುಲಾ ಇಲ್ಲಿನ ಅನ್ನಿಸಿಕೊಳ್ಳೋಕೆʼ ಅಂತ ಕೂಗಾಡಿದ್ದಾರೆ ರಜತ್. ಕಿಚ್ಚು ಹೆಚ್ಚಾಗಿರೊ ಮನೆಯಲ್ಲಿ ಹೋಗೋರು ಯಾರು ಉರ್ಕೊಳ್ಳೋರು ಯಾರು ಎಂಬುದೇ ವೀಕ್ಷರಲ್ಲಿ ಇರೋ ಕೂತೂಹಲ.
ಲಕ್ಷುರಿ ವೇಳೆಯೂ ಟ್ವಿಸ್ಟ್
ಈ ವಾರ ಲಕ್ಷುರಿ ವೇಳೆಯೂ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದರು. ಮನೆ ಹತ್ತು ಸಾವಿರ ಪಾಯಿಂಟ್ ಪಡೆದುಕೊಂಡಿತ್ತು. ಧನುಷ್, ರಕ್ಷಿತಾ, ಅಶ್ವಿನಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ ಅನ್ನೋ ಕಾರಣಕ್ಕೆ ಹೊರಗಿಟ್ಟಿದ್ದರು. ಆ ಬಳಿಕ ಬಿಗ್ ಬಾಸ್‌ಗ ಈ ಮೂವರಿಗೆ ಚರ್ಚಿಸಿ, ಲಕ್ಷುರಿ ಬಿಟ್ಟುಕೊಟ್ಟರೆ ಮನೆಯ ಸದಸ್ಯದವರಾಗುತ್ತೆ, ಇಲ್ಲ ನಿಮ್ಮದಾಗುತ್ತೆ ಎನ್ನುವ ಆಯ್ಕೆ ಕೊಟ್ಟಿದ್ದರು. ಉಳಿದ ಸ್ಪರ್ಧಿಗಳಿಗೋಸ್ಕರ ಈ ಮೂವರು ಲಕ್ಷುರಿ ಬಿಟ್ಟುಕೊಟ್ಟಿದ್ದರು. ಆದರೆ ಕೊನೆಗೆ ಇಡೀ ಮನೆಗೆ ಸಿಗದಾಗಿದೆ.
ಈ ವಾರ ಒಟ್ಟು 9 ಜನರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹತ್ತಿರ ಆಗಲಿರುವುದರಿಂದ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಸದ್ದಿಲ್ಲದೇ ಶುರುವಾಗಿದ್ಯಾ ಸೈಲೆಂಟ್ ಲವ್ ಸ್ಟೋರಿ? ಏನಿದು ಚರ್ಚೆ?
ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್‌ನಿಂದ ಪಾರಾಗಿದ್ದಾರೆ.