Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್ ಮಾಡಿದ್ದೇಕೆ ಚೈತ್ರಾ ಕುಂದಾಪುರ?
Gilli Nata: ಈ ವಾರ ರಘು ಸೇರಿದಂತೆ ಬಹುತೇಕರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ. ರಘು ಕೂಡ ಕೆಲ ದಿನಗಳಿಂದ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಕೂಡ ಗಿಲ್ಲಿ ವಿರುದ್ಧ ವಾಯ್ಸ್ ರೈಸ್ ಮಾಡಿದ್ದಾರೆ. ವಯಸ್ಸಿನ ವಿಚಾರ ಮುಂದಿಟ್ಟು ನಿನ್ನ ಆಟ ನನ್ ಹತ್ರ ನಡೆಯಲ್ಲ ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ -
ಗಿಲ್ಲಿ ನಟನ (Gilli Nata) ಮಾತು ಕೆಲವೊಮ್ಮೆ ಅತಿರೇಕವಾಗಿರುತ್ತೆ ಎಂಬುದು ಕೆಲವರ ವಾದ. ಕೆಲವೊಮ್ಮೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾತಾಡ್ತಾರೆ. ಕಿರಿಕಿರಿ ಎನಿಸುತ್ತದೆ ಎಂಬುದು ಬಹುತೇಕ ಕಂಟೆಸ್ಟೆಂಟ್‌ಗಳ ಆರೋಪವಾಗಿದೆ. ಹೀಗಾಗಿ ಈ ವಾರ ರಘು (Raghu) ಸೇರಿದಂತೆ ಬಹುತೇಕರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ. ರಘು ಕೂಡ ಕೆಲ ದಿನಗಳಿಂದ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿರುವ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ (Chaitthra Kundapura) ಕೂಡ ಗಿಲ್ಲಿ ವಿರುದ್ಧ ವಾಯ್ಸ್ ರೈಸ್ ಮಾಡಿದ್ದಾರೆ. ವಯಸ್ಸಿನ ವಿಚಾರ ಮುಂದಿಟ್ಟು ನಿನ್ನ ಆಟ ನನ್ ಹತ್ರ ನಡೆಯಲ್ಲ ಎಂದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಳಪೆಯನ್ನು ಗಿಲ್ಲಿಗೆ ನೀಡಿದ್ದಾರೆ. `ನಮ್ಮ ವಿಚಾರ ನಿಮ್ಮ ಪ್ರಚಾರ ಆಗಿದೆ' ಅಂತ ಅಶ್ವಿನಿ ಅವರು ಹೇಳಿದ್ದಾರೆ. `ಕಾಮಿಡಿ ಹಾಗೂ ಪರ್ಸನಲ್ ಮಧ್ಯೆ ಒಂದು ಲೈನ್ ಇರುತ್ತೆ. ಆ ಲೈನ್ ಯಾವತ್ತೂ ಕ್ರಾಸ್ ಮಾಡಬಾರದು' ಅಂತ ರಘು ಅವರು ಗಿಲ್ಲಿ ಅವರಿಗೆ ಕಳಪೆ ಕೊಟ್ಟರು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಜಂಟಿ ಕ್ಯಾಪ್ಟನ್ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು
ಚೈತ್ರ ಗರಂ!
ʻವಯಸ್ಸಿನ ವಿಷಯದಲ್ಲಿ ಹೇಳಿದ್ದು ಸರಿ ಇರಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರ್ತಾರೆ. ಎಚ್ಚರಿಕೆಯಿಂದ ಇರಬೇಕಿತ್ತುʼ ಎಂದಿದ್ದಾರೆ. ಚೈತ್ರಾ ಅವರು ಈ ಕಾರಣ ಹೇಳುತ್ತಿದ್ದಂತೆ ಗಿಲ್ಲಿಗೆ ಕೋಪ ಬಂದಿದೆ. ʻವಯಸ್ಸಾಗಿದೆಯಾ ನಿಂಗೆ?ʼ ಅಂತ ಅಬ್ಬರಿಸಿದ್ದಾರೆ. ಮತ್ತೊಮ್ಮೆ ವಯಸ್ಸಾಗಿದೆಯಾ ನಿಂಗೆ ಅಂತ ಗಿಲ್ಲಿ ಟೀಸ್ ಮಾಡಿದರು. ಇದು ಮತ್ತೆ ಚೈತ್ರಾಗೆ ಸಿಟ್ಟು ಬರಿಸಿದೆ. ʻಒಂದು ಸಲ ಹೇಳ್ತೀನಿ, ಮೂರು ಸಲ ಹೇಳ್ತೀನಿ. ಇದನ್ನ ತಿದ್ದುಕೊಳ್ಳಲಿಲ್ಲ ಅಂದರೆ ನನೆ ಒಂದು ಭಾಷೆ ಇದೆ. ಅದರಲ್ಲಿ ಹೇಳಬೇಕಾಗುತ್ತೆʼ ಎಂದು ಕೂಗಾಡಿದರು. ಅದು ಯಾವ ಭಾಷೆಯಲ್ಲಿ ಹೇಳ್ತೀನಿ ನೋಡ್ತೀನಿ. ವಯಸ್ಸಾಗಿರೋರೆಲ್ಲ ಬಂದಿದ್ದಾರೆ ಅಂತ ಮತ್ತೆ ಗಿಲ್ಲಿ ವಾದಿಸಿದರು.
ಕಲರ್ಸ್ ಕನ್ನಡ ಪ್ರೋಮೋ
ರಕ್ಷಿತಾ ಟಾರ್ಗೆಟ್
ಮತ್ತೊಂದು ಕಡೆ ರಕ್ಷಿತಾ ಅವರನ್ನು ಮನೆಮಂದಿ ಟಾರ್ಗೆಟ್ ಮಾಡಿದ್ದಾರೆ ನಾಮಿನೇಶನ್ ಪ್ರಕ್ರಿಯೆಯಲ್ಲಿಯೂ ಅತಿರೇಕದ ವರ್ತನೆ ತೋರಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯವೂ ಹೌದು. ಈ ವಾರ ಕಾವ್ಯ ಅವರನ್ನು ನಾಮಿನೇಟ್ ಮಾಡುವಾಗ, ರಕ್ಷಿತಾ ಶೆಟ್ಟಿ ಹೈಡ್ರಾಮಾ ಸೃಷ್ಟಿಸಿದರು. ‘ಸ್ಟ್ರಾಟೆಜಿ’ ಏನು ಅಂತ ಗೊತ್ತಿಲ್ಲದೆ ಕಾವ್ಯ ಅವರನ್ನ ರಕ್ಷಿತಾ ಶೆಟ್ಟಿ ಡೇಂಜರ್ ಝೋನ್‌ಗೆ ತಳ್ಳಿದ್ದರು. ಈ ಬಗ್ಗೆ ಮನೆಯಲ್ಲಿ ಚರ್ಚೆಗಳೂ ನಡೆದಿತ್ತು,. ಇದೀಗ ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾ ಯೋಗ್ಯರಲ್ಲ ಎಂದಿದ್ದಾರೆ.
`ನನ್ನನ್ನು ನಾಮಿನೇಟ್ ಮಾಡುವಾಗ ಕೊಟ್ಟ ಕಾರಣ, ಯಾವದೂ ಅರ್ಥವೇ ಇರಲಿಲ್ಲ' ಎಂದಿದ್ದಾರೆ. ಅಭಿಷೇಕ್ ಕೂಡ, `ರಕ್ಷಿತಾ ಅವರು ಪ್ಯಾನಿಕ್ ಆಗಿ ಯಾವುದು ತಲೆಗೆ ಬರುತ್ತೋ ಅದನ್ನ ಕಾರಣಗಳನ್ನು ಕೊಡೋದು ಅಲ್ಲ' ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಸದ್ದಿಲ್ಲದೇ ಶುರುವಾಗಿದ್ಯಾ ಸೈಲೆಂಟ್ ಲವ್ ಸ್ಟೋರಿ? ಏನಿದು ಚರ್ಚೆ?
ಇನ್ನು ರಕ್ಷಿತಾ ಈ ಬಗ್ಗೆ ಪ್ರತಿಕ್ರಿಯಿಸಿ, `ನನಗೆ ಯಾವಾಗ ಏನು ನಿರ್ಧಾರ ತೆಗೆದುಕೊಂಡು ಹೇಳಬೇಕೋ ಅದನ್ನ ಆ ಕ್ಷಣಕ್ಕೆ ಯೋಚನೆ ಮಾಡಿಯೇ ಹೇಳುತ್ತೇನೆ' ಎಂದಿದ್ದಾರೆ. ಕಾವ್ಯ ಮಾತನಾಡಿ, `ಚಿಕ್ಕ ಹುಡುಗಿ ನಿರ್ಧಾರ ತೆಗೆದುಕೊಳ್ಳಲು ಆಗ್ತಾ ಇಲ್ವಾ ಅಂತ ಹೇಳೋದಾ? ಅಥವಾ ಸ್ಮಾರ್ಟೋ?' ಅಂತ ಹೇಳಿದ್ದಾರೆ.