ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

Gilli Nata: ರೂಮ್‌ನಲ್ಲಿ ಕಾವ್ಯ, ಸ್ಪಂದನಾ, ಗಿಲ್ಲಿ ಎಲ್ಲರೂ ಕುಳಿತುಕೊಂಡು ಆಂಕರಿಂಗ್‌ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಆಗ ಗಿಲ್ಲಿ ಆಂಕರಿಂಗ್‌ ಆಗುವ ಆಸೆ ಬಗ್ಗೆ ವ್ಯಕ್ತಪಡಿಸುತ್ತಾರೆ. ಗಿಲ್ಲಿ ಹಾಗೂ ಕಾವ್ಯ ತಮಾಷೆಯಾಗಿಯೇ ಚರ್ಚೆ ಶುರು ಮಾಡುತ್ತಾರೆ. ಆಗ ಗಿಲ್ಲಿ ತಾವು ಸವಿ ರುಚಿ ಕಾರ್ಯಕ್ರಮಕ್ಕೆ ಆಂಕರಿಂಗ್‌ ಆಗಬೇಕು ಎನ್ನುತ್ತಾರೆ. ಅದಕ್ಕೆ ಕಾವ್ಯ ಅವರು ಸವಿರುಚಿಗೆಲ್ಲ ಬೇಡ ಎನ್ನುತ್ತಾರೆ. ಇದಕ್ಕೆ ಪ್ರತಿಯಾಗಿ ಜಾಹ್ನವಿ, ಒಂದು ಶೋ ಬಗ್ಗೆ ಕೆಟ್ಟದ್ದಾಗಿ ಹೇಳ್ತಿದ್ದಾರೆ ಎಂದು ಬಿಂಬಿಸಲು ನೋಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಹಲವು ಸ್ಪರ್ಧಿಗಳು ವಾದ ಮಾಡೋದು ಒಂದೇ, ಜಾಹ್ನವಿ ಹಾಗೂ ಅಶ್ವಿನಿ (Ashwini Gowda) ಅವರು ಮನೆಯ ಶಾಂತಿ ಹಾಳು ಮಾಡಲು ಸದಾ ಮುಂದೆ ಅಂತ. ಅಷ್ಟೇ ಅಲ್ಲ ಧ್ರುವಂತ್‌ (Dhruvanth) ಕೂಡ ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್‌ ಲೀಡ್‌ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ. ಇದೀಗ ಈ ಎಲ್ಲ ಆರೋಪಗಳು ಪ್ರೂವ್‌ ಆದಂತಿದೆ. ಜಾಹ್ನವಿ ಏನು ಹೇಳಿದ್ದಾರೆ ಎಂದು ತಿಳಿಯದೇ ರಕ್ಷಿತಾ ಅವರು ಗಿಲ್ಲಿ ಅವರನ್ನ ನಾಮಿನೇಟ್‌ ಮಾಡಿದ್ದಾರೆ. ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಜಾಹ್ನವಿ ಹೇಳಿದ್ದೇನು?

ಆಂಕರಿಂಗ್‌ ವಿಚಾರ

ರೂಮ್‌ನಲ್ಲಿ ಕಾವ್ಯ, ಸ್ಪಂದನಾ, ಗಿಲ್ಲಿ ಎಲ್ಲರೂ ಕುಳಿತುಕೊಂಡು ಆಂಕರಿಂಗ್‌ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಆಗ ಗಿಲ್ಲಿ ಆಂಕರಿಂಗ್‌ ಆಗುವ ಆಸೆ ಬಗ್ಗೆ ವ್ಯಕ್ತಪಡಿಸುತ್ತಾರೆ. ಗಿಲ್ಲಿ ಹಾಗೂ ಕಾವ್ಯ ತಮಾಷೆಯಾಗಿಯೇ ಚರ್ಚೆ ಶುರು ಮಾಡುತ್ತಾರೆ. ಆಗ ಗಿಲ್ಲಿ ತಾವು ಸವಿ ರುಚಿ ಕಾರ್ಯಕ್ರಮಕ್ಕೆ ಆಂಕರಿಂಗ್‌ ಆಗಬೇಕು ಎನ್ನುತ್ತಾರೆ. ಅದಕ್ಕೆ ಕಾವ್ಯ ಅವರು ಸವಿರುಚಿಗೆಲ್ಲ ಬೇಡ ಎನ್ನುತ್ತಾರೆ. ‘ಆ ಶೋಗೆ ಟಿಆರ್​ಪಿ ಕಡಿಮೆ ಇದೆಯೇ’ ಎಂದು ಗಿಲ್ಲಿ ಕೇಳಿದರು. ‘ಕುಕಿಂಗ್ ಶೋ ಬೇಡ ಅಷ್ಟೇಎಂದು ಕಾವ್ಯ ಹೇಳಿದರು.

ಇದನ್ನೂ ಓದಿ : Bigg Boss Kannada 12: ಇದೊಂದು ಕಾರಣಕ್ಕೆ ಅಶ್ವಿನಿ ಹಿಂದೆ ಬಿದ್ದಿದ್ದಾರಂತೆ ಜಾಹ್ನವಿ! ಧ್ರುವಂತ್‌ ಹೊಸ ಆರೋಪ

ಇದಕ್ಕೆ ಪ್ರತಿಯಾಗಿ ಜಾಹ್ನವಿ, ʻಏನೋ ಒಂದು ಶೋ ಬಗ್ಗೆ ಕೆಟ್ಟದ್ದಾಗಿ ಹೇಳ್ತಿದ್ದಾರೆ ಎಂದು ಬಿಂಬಿಸಲು ನೋಡಿದ್ದಾರೆ. ಆಂಕರಿಂಗ್‌ ಎಂದರೆ ತಮಾಷೆನಾ? ಹೋಗ್ತಾನೆ ನಿನಗೆ ಅನುಬಂಧ ಅವಾರ್ಡ್‌ನಲ್ಲಿ ಚಾನ್ಸ್‌ ಕೊಡಬೇಕಾ? ಒಂದು ಶೋ ನಾ ಕೆಳಗೆ ಇಟ್ಟು ಮಾತಾಡ್ತಾ ಇದ್ದೀರಾ? ನಿನ್ನ ರೀತಿ ಸಮಯ ಸಾಧಕ ಅಲ್ಲ ಎನ್ನುತ್ತಾರೆʼ ಜಾಹ್ನವಿ.

ಬಳಿಕ ಗಿಲ್ಲಿ ಕೂಡ ʻನಿನ್ನಷ್ಟು ಚಾನೆಲ್‌ನಲ್ಲೇ ಕೆಳಗಿಟ್ಟು ನಾನು ಮಾತನಾಡಿಲ್ಲʼ ಎಂದಿದ್ದಾರೆ ಗಿಲ್ಲಿ. ಆದರೆ ಇದೆಲ್ಲವೂ ಅರಿಯದ ರಕ್ಷಿತಾ ಕೂಡ ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದರು.

ವೈರಲ್‌ ವಿಡಿಯೋ




ನಾಮಿನೇಷನ್‌ ವೇಳೆ ಜಾಹ್ನವಿ ಕೊಟ್ಟ ಕಾರಣ

ಮೊದಲಿಗೆ ಜಾಹ್ನವಿ ಕಾರಣ ಕೊಟ್ಟಿದ್ದು ಹೀಗೆ, ಮೊನ್ನೆ `ಇವರಿಗೆ ನಿರೂಪಣೆ ಮಾಡಬೇಕಂತೆ. ಸವಿರುಚಿ ನಿರೂಪಣೆ ಇವರಿಗೆ ಸಣ್ಣ ಕಾರ್ಯಕ್ರಮವಂತೆ. ಇವನಿಗೆ ಸೀದಾ ಅನುಬಂಧ ಆಂಕರಿಂಗ್‌ ಕೊಡಬೇಕು ಅಂತೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ರಕ್ಷಿತಾ ಅವರು ಗಿಲ್ಲಿ ಬಗ್ಗೆ ದೂರಿದ್ದು ಹೀಗೆ, `ಯುಟ್ಯೂಬ್‌ ವ್ಲಾಗರ್ ಕೆಲಸ ಮಾಡಿಯೇ ಬಿಗ್‌ಬಾಸ್ ಮನೆಗೆ ಬಂದಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಯಾವುದೇ ಕೆಲಸದಲ್ಲಿ ದೊಡ್ಡ ಕೆಲಸ, ಚಿಕ್ಕ ಕೆಲಸ ಅನ್ನೋದು ಇಲ್ವೇ ಇಲ್ಲ. ಪ್ರೋಫೆಷನಲ್‌ ಬಗ್ಗೆನೇ ಕೀಳಾಗಿ ಮಾತನಾಡಿದರೆ, ನಿಮ್ಮ ಬಗ್ಗೆ ನಂಬುವುದು ಹೇಗೆ? ' ಎಂದಿದ್ದಾರೆ.

ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು!

ಗಿಲ್ಲಿ ಈ ಬಗ್ಗೆ ಮಾತನಾಡಿ, ʻಆ ಮಾತುಕತೆ ಬಗ್ಗೆ ನೀನು ಮಾತನಾಡೋ ಹಾಗೇ ಇಲ್ಲ. ಯಾಕೆಂದರೆ ಆ ಸಮಯದಲ್ಲಿ ನೀನು ಅಲ್ಲಿ ಇರಲಿಲ್ಲ. ಅವರು ಹೇಳಿದ್ದು ನೀನು ನಂಬಿಕೊಂಡು ನಾಮಿನೇಟ್‌ ಮಾಡ್ತೀಯಾ ಅಂದರೆ, ನಾನು ಹೇಳ್ತೀನಿ, ಆ ಮಾತುಕತೆ ಅಲ್ಲಿ ಆಂಕರಿಂಗ್‌ ಬಗ್ಗೆ ನಾನು ತಪ್ಪಾಗಿ ಮಾತೇ ಆಡಿಲ್ಲ. ಬಳಿಕ ನೀನು ಜಾಹ್ನವಿ ಅವರನ್ನೇ ಕೇಳು, ನಿನಗೆ ಆಂಕರಿಂಗ್‌ ಬರಲ್ಲ, ಚೆನ್ನಾಗಿ ಮಾಡಲ್ಲ ಅಂತ ನಾನು ಹೇಳಿದ್ರೆ ಆವಾಗ ನಾನು ಆಂಕರಿಂಗ್‌ನ ಕೆಳಗೆ ಹಾಕಿ ಮಾತಾಡ್ತಾ ಇದ್ದೀನಿ ಅಂತ ಅರ್ಥ ʼಎಂದಿದ್ದಾರೆ ಗಿಲ್ಲಿ.

ಇದನ್ನೂ ಓದಿ: Bigg Boss Kannada 12: `ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು'; ತಿರುಗಿಬಿದ್ದ ವಂಶದ ಕುಡಿಗೆ ಗಿಲ್ಲಿಯ ಖಡಕ್‌ ಉತ್ತರ!

ʻಅಷ್ಟು ಬುದ್ಧಿವಂತೆ ಆಗಿದ್ರೆ, ಪ್ರತ್ಯಕ್ಷ ಕಂಡ್ರು ಪ್ರಮಾಣಿಸಿ ನೋಡಬೇಕು. ಈ ವಿಚಾರದಲ್ಲಿ ಸುದೀಪ್‌ ಅವರು ಒಂದು ಹಾಡು ಹೇಳಿದ್ದರು. ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದುʼ ಎಂದು ಉತ್ತರ ಕೊಟ್ಟಿದ್ದಾರೆ ಗಿಲ್ಲಿ.

Yashaswi Devadiga

View all posts by this author