Bigg Boss Kannada 12: `ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು'; ತಿರುಗಿಬಿದ್ದ ವಂಶದ ಕುಡಿಗೆ ಗಿಲ್ಲಿಯ ಖಡಕ್ ಉತ್ತರ!
Rakshitha shetty: ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಈಗ ಜಾಹ್ನವಿ ಮಾತನ್ನು ನಂಬಿದ ರಕ್ಷಿತಾ ಗಿಲ್ಲಿ ಮಾತನ್ನು ನಂಬಲಿಲ್ಲ.ನೋಡದೇ , ಕೇಳದೇ ಗಿಲ್ಲಿ ಅವರನ್ನ ನಾಮಿನೇಟ್ ಮಾಡಿದ್ದಾರೆ. ರಕ್ಷಿತಾ ನಾಮಿನೇಟ್ ಆದ ಬಳಿಕ ಗಿಲ್ಲಿ ಕೂಡ ಸಖತ್ ಆಗಿಯೇ ಕೌಂಟರ್ ಕೊಟ್ಟರು. ಅಷ್ಟು ಬುದ್ಧಿವಂತೆ ಆಗಿದ್ರೆ, ಪ್ರತ್ಯಕ್ಷ ಕಂಡ್ರು ಪ್ರಮಾಣಿಸಿ ನೋಡಬೇಕು. ಈ ವಿಚಾರದಲ್ಲಿ ಸುದೀಪ್ ಅವರು ಒಂದು ಹಾಡು ಹೇಳಿದ್ದರು. ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದುʼ ಎಂದು ಉತ್ತರ ಕೊಟ್ಟಿದ್ದಾರೆ ಗಿಲ್ಲಿ.
ಬಿಗ್ ಬಾಸ್ ಕನ್ನಡ -
ಇಷ್ಟು ದಿನಗಳ ಕಾಲ ಗಿಲ್ಲಿ ನಟ (Gilli Nata) ಮತ್ತು ರಕ್ಷಿತಾ ಶೆಟ್ಟಿ (Rakshita Shetty) ಅವರು ಆಪ್ತರಾಗಿದ್ದರು. ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಈಗ ಜಾಹ್ನವಿ ಮಾತನ್ನು ನಂಬಿದ ರಕ್ಷಿತಾ ಗಿಲ್ಲಿ ಮಾತನ್ನು ನಂಬಲಿಲ್ಲ.ನೋಡದೇ , ಕೇಳದೇ ಗಿಲ್ಲಿ ಅವರನ್ನ ನಾಮಿನೇಟ್ (Nominate) ಮಾಡಿದ್ದಾರೆ. ರಕ್ಷಿತಾ ನಾಮಿನೇಟ್ ಆದ ಬಳಿಕ ಗಿಲ್ಲಿ ಕೂಡ ಸಖತ್ ಆಗಿಯೇ ಕೌಂಟರ್ ಕೊಟ್ಟರು.
ನನ್ನ ತಲೇಲಿ ನಿಮ್ಮ ಹೆಸರೇ ಇರಲಿಲ್ಲ
ರಕ್ಷಿತಾ ಅವರು ಹೇಳಿದ್ದು ಹೀಗೆ, `ಮೊದಲಿಗೆ ನನ್ನ ತಲೇಲಿ ನಿಮ್ಮ ಹೆಸರೇ ಇರಲಿಲ್ಲ. ಆದರೆ ಈಗ ನನಗೆ ನಿಮ್ಮ ಬಗ್ಗೆ ಇದ್ದ ಓಪಿನಿಯನ್ ಚೇಂಜ್ ಆಯ್ತು. ಜಾಹ್ನವಿ ಅವರು ಹೇಳಿದ್ದರು, ಆಂಕರಿಂಗ್ ಬಗ್ಗೆ ಕೆಟ್ಟದ್ದಾಗಿ ಹೇಳಿದ್ದೀರಿ ಅಂತ, `ಯುಟ್ಯೂಬ್ ವ್ಲಾಗರ್ ಕೆಲಸ ಮಾಡಿಯೇ ಬಿಗ್‌ಬಾಸ್ ಮನೆಗೆ ಬಂದಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಯಾವುದೇ ಕೆಲಸದಲ್ಲಿ ದೊಡ್ಡ ಕೆಲಸ, ಚಿಕ್ಕ ಕೆಲಸ ಅನ್ನೋದು ಇಲ್ವೇ ಇಲ್ಲ. ಪ್ರೋಫೆಷನಲ್ ಬಗ್ಗೆನೇ ಕೀಳಾಗಿ ಮಾತನಾಡಿದರೆ, ನಿಮ್ಮ ಬಗ್ಗೆ ನಂಬುವುದು ಹೇಗೆ? ' ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ
ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು!
ಗಿಲ್ಲಿ ಈ ಬಗ್ಗೆ ಮಾತನಾಡಿ, ʻಆ ಮಾತುಕತೆ ಬಗ್ಗೆ ನೀನು ಮಾತನಾಡೋ ಹಾಗೇ ಇಲ್ಲ. ಯಾಕೆಂದರೆ ಆ ಸಮಯದಲ್ಲಿ ನೀನು ಅಲ್ಲಿ ಇರಲಿಲ್ಲ. ಅವರು ಹೇಳಿದ್ದು ನೀನು ನಂಬಿಕೊಂಡು ನಾಮಿನೇಟ್ ಮಾಡ್ತೀಯಾ ಅಂದರೆ, ನಾನು ಹೇಳ್ತೀನಿ, ಆ ಮಾತುಕತೆ ಅಲ್ಲಿ ಆಂಕರಿಂಗ್ ಬಗ್ಗೆ ನಾನು ತಪ್ಪಾಗಿ ಮಾತೇ ಆಡಿಲ್ಲ. ಬಳಿಕ ನೀನು ಜಾಹ್ನವಿ ಅವರನ್ನೇ ಕೇಳು, ನಿನಗೆ ಆಂಕರಿಂಗ್ ಬರಲ್ಲ, ಚೆನ್ನಾಗಿ ಮಾಡಲ್ಲ ಅಂತ ನಾನು ಹೇಳಿದ್ರೆ ಆವಾಗ ನಾನು ಆಂಕರಿಂಗ್‌ನ ಕೆಳಗೆ ಹಾಕಿ ಮಾತಾಡ್ತಾ ಇದ್ದೀನಿ ಅಂತ ಅರ್ಥ ʼಎಂದಿದ್ದಾರೆ ಗಿಲ್ಲಿ.
ಆದರೆ ರಕ್ಷಿತಾ ಮಾತ್ರ, ಜಾಹ್ನವಿ ಅವರು ಕಾರಣ ಕೊಡುವಾಗಲೇ ಹೇಳಬೇಕಿತ್ತು ಎಂದಿದ್ದಾರೆ. ಅದಕ್ಕೆ ಗಿಲ್ಲಿ ಮಾತನಾಡಿ, ʻಅಷ್ಟು ಬುದ್ಧಿವಂತೆ ಆಗಿದ್ರೆ, ಪ್ರತ್ಯಕ್ಷ ಕಂಡ್ರು ಪ್ರಮಾಣಿಸಿ ನೋಡಬೇಕು. ಈ ವಿಚಾರದಲ್ಲಿ ಸುದೀಪ್ ಅವರು ಒಂದು ಹಾಡು ಹೇಳಿದ್ದರು. ಕೇಳಿದ್ದು ಸುಳ್ಳಾಗಬಹುದು - ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದುʼ ಎಂದು ಉತ್ತರ ಕೊಟ್ಟಿದ್ದಾರೆ ಗಿಲ್ಲಿ.
ವೈರಲ್ ವಿಡಿಯೋ
Hee justt roasted her left and right 😅🥵 mathh ali avn mundhe yav kaghe nu geloke agala 😂
— ❤️ (@itzme_liki) November 24, 2025
Gilli 📈📈📈#bbk12 pic.twitter.com/DfFt1nfhMQ
ನೆಟ್ಟಿಗರು ಗರಂ!
ʻರಕ್ಷಿತಾ ಅವರು ರಘು ಅವರ ವಿಚಾರದಲ್ಲಿ ಸುದೀಪ್ ಅವರು ಪ್ರವಚನ ಕೊಟ್ಟಿದ್ದು ಸಾಲಲಿಲ್ಲ ಅನ್ನಿಸುತ್ತೆ. ಯಾರೋ ಹೇಳಿದ್ದನ್ನ ಕೇಳಿ, ನಾಮಿನೇಷನ್ ಮಾಡ್ತಾಳೆ ಅಂದರೆ ಅವಳ ಮೇಲೆ ಇಟ್ಟಿದ್ದ ವಿಶ್ವಾಸ ಕಳೆದು ಹೋಗುತ್ತದೆ. ಹೀಗೆ ಅವಳು ಮುಂದುವರಿದರೆ, ಮನೆಗೆ ಹೋಗುವುದು ಖಂಡಿತʼ ಎಂದು ಇಬ್ಬರು ಕಮೆಂಟ್ ಮಾಡಿದ್ದಾರೆ.ಮತ್ತೊಬ್ಬರು ಹೀಗೆ ಕಮೆಂಟ್ ಮಾಡಿದ್ದಾರೆ, ʻಗಿಲ್ಲಿ ನಾಮಿನೇಟ್ ಮಾಡಿದ್ದಕ್ಕೆ ಜಾಹ್ನವಿ ಈ ರೀತಿ ಹೇಳಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಡಾಗ್ ಸತೀಶ್ 80 ಸಾವಿರ ರೂಪಾಯಿ ಶರ್ಟ್‌ನ್ನ ಸ್ಪಂದನಾ ಹಾಳು ಮಾಡಿದ್ದು ಹೌದಾ? ಏನಪ್ಪಾ ಮ್ಯಾಟ್ರು ?
ಮತ್ತೊಬ್ಬರು ʻಉಪ್ಪು ತಿಂದ ಮನೆಗೆ ಮೋಸ ಮಾಡ್ಬರದು. ರಕ್ಷಿತಾ ಗಿಲ್ಲಿ ನಾ ನಾಮಿನೇಟ್ ಮಾಡಿದ್ದು ಬೇಜಾರು ಇಲ್ಲ ಸರಿಯಾದ ಕಾರಣ ಕೊಟ್ಟಿಲ್ಲ ಬೇರೆಯವರು ಮಾತು ಕೇಳಿ ತಪ್ಪುಮಾಡಿದ್ದಾರೆ. ಒಂದು ವೀಚಾರ ಹೇಳೋಕೆ ಇಷ್ಟ ಪಡ್ತಿನಿ ನಾವು ರಕ್ಷಿತಾಗೆ ವೋಟ್ ಮಾಡಿದ್ದು ಒಳ್ಳೆ ಹುಡುಗಿ ಅಂತ. ಛೇ ಇಂಥ ಜನ ಇರತಾರೆ ಅಂತ ಗೊತಿರ್ಲಿಲ್ಲʼ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.