ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್ ಬಾಸ್‌ ಮನೆಯಿಂದ ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ

Bigg Boss Kannada Elimination: ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ. ಜಾಹ್ನವಿಯವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸ್ಪಷ್ಟ ಕನ್ನಡದಲ್ಲಿ ಹಾಗೂ ತಮ್ಮ ಬ್ಯೂಟಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಬಿಗ್‌ ಬಾಸ್‌ ಕನ್ನಡ

ಈ ವಾರ ಬಿಗ್‌ ಮನೆಯಿಂದ ಜಾಹ್ನವಿ (janhvi bigg boss kannada) ಔಟ್‌ (ನ.30) ಆಗಿದ್ದಾರೆ. ಈ ವಾರ ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದ್ಮೇಲೆ ಮತ್ತಷ್ಟು ರಣರೋಚಕವಾಗಿದೆ. ಮನೆಯ ಸ್ಪರ್ಧಿಗಳನ್ನ ಕೆರಳಿಸಿ ಕೆಂಡ ಮಾಡಿದ್ದರು. ಇನ್ನು ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ (Nominate) ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ (Out) ಬಂದಿದ್ದಾರೆ.

ಕಾಕ್ರೋಚ್ ಸುಧಿ ಬಳಿಕ ಜಾಹ್ನವಿ ಔಟ್‌!

ಬಿಗ್‌ಬಾಸ್ ಸೀಸನ್ 12ರಲ್ಲಿ ಕೂಡ ಕಾಕ್ರೋಚ್ ಸುಧಿ ಬಹಳ ಬೇಗ ಔಟ್ ಆಗಿದ್ದರು.49 ದಿನಗಳ ಕಾಲ ಸುಧಿ ಮನೆ ಒಳಗೆ ಇದ್ದರು. ಆರಂಭದಿಂದಲೂ ತಮ್ಮ ಡೈಲಾಗ್‌ಗಳ ಮೂಲಕ ಪ್ರಬಲ ಸ್ಪರ್ಧಿ ಎನ್ನುವಂತೆ ಆಡಿದ್ದರು. ಅಚ್ಚರಿ ಅಂದರೆ ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಜಾಹ್ನವಿ ಔಟ್‌ ಆಗಿರೋದು ಅವರ ಫ್ಯಾನ್ಸ್‌ಗೆ ಶಾಕ್‌ ಆಗಿದೆ.

ಇದನ್ನೂ ಓದಿ: Bigg Boss Kannada 12: ಜಾಹ್ನವಿ ಕುತಂತ್ರ ಫಲಿಸಿತಾ? ಅಸಲಿಗೆ ಗಿಲ್ಲಿ- ಕಾವ್ಯ ಮಾತನಾಡಿದ್ದಾದ್ರೂ ಏನು?

ಅಶ್ವಿನಿ ಗೌಡ ಗೆಳತಿ

ಬಿಗ್‌ ಬಾಸ್‌ ಮನೆಯಲ್ಲಿ ಮೊದಲಿನಿಂದಲೂ ನಿಯಮವನ್ನು ಪದೇ ಪದೇ ಮುರಿಯುತ್ತಿದ್ದ ಸ್ಪರ್ಧಿಗಳು ಅಂದರೆ ಅಶ್ವಿನಿ ಹಾಗೂ ಜಾಹ್ನವಿ. ಇವರಿಬ್ಬರೂ ಜೀವದ ಗೆಳತಿಯರೂ ಎಂಬುದು ಅಷ್ಟೇ ಸತ್ಯ. ಸಾಕಷ್ಟು ಬಾರಿ ಜಗಳ ಮಾಡಿಕೊಂಡಿದ್ದರೂ, ಮತ್ತೆ ಒಂದಾಗುತ್ತಿದ್ದರು.

ಬಿಗ್‌ ಬಾಸ್‌ ಮನೆಯ ಮೂಲ ನಿಯಮಗಳಲ್ಲಿ ಒಂದು ಪಿಸು ಧ್ವನಿಯಲ್ಲಿ ಮಾತನಾಡುವಂತಿಲ್ಲ ಎಂಬುದು. ಮೈಕ್‌ ಧರಿಸದೇ ಯಾರು ಮಾತನಾಡುವಂತಿಲ್ಲ . ಆದರೂ ಜಾಹ್ನವಿ ಹಾಗೂ ಅಶ್ವಿನಿ ಗೌಡ ಈ ಹಿಂದೆ ಡ್ರೆಸ್ಸಿಂಗ್ ರೂಮ್​​ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿ ಸುದೀಪ್‌ ಅವರ ಬಳಿ ಕ್ಲಾಸ್‌ ತೆಗೆದುಕೊಂಡಿದ್ದು ಇದೆ. ಎರಡನೇ ಬಾರಿ ಮತ್ತದೇ ತಪ್ಪು ಮಾಡಿದಾಗ, ನೇರವಾಗಿ ನಾಮಿನೇಟ್‌ ಕೂಡ ಆಗಿದ್ದರು.



ಚಾನೆಲ್​ ವಿರುದ್ಧವೇ ಗುಡುಗಿದ್ದ ಜಾಹ್ನವಿ

ಜಾಹ್ನವಿ ಬಂದಾಗಿನಿಂದ ಪತಿಗೆ ಡಿವೋರ್ಸ್​ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಅವರು ನೀಡಿರೋ ಹೇಳಿಕೆ, ಬಳಿಕ ಇವರ ವಿರುದ್ಧ ಪತಿ ಮೀಡಿಯಾಗಳಲ್ಲಿ ಮಾಡಿರುವ ವೈಯಕ್ತಿಯ ನಿಂದನೆ ಎಲ್ಲವೂ ಭಾರಿ ಸುದ್ದಿಯಾಗುತ್ತಲೇ ಇತ್ತು. ತಮ್ಮ ದೃಷ್ಟಿಯಲ್ಲಿ ಯಾರು ಎಲಿಮಿನೇಟ್​ ಆಗಬೇಕಿತ್ತೋ ಅವರು ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದು ಜಾಹ್ನವಿ ಅವರ ಆರೋಪವಾಗಿತ್ತು. ಅವರನ್ನು ವಾಹಿನಿಯೇ ಸೇವ್​ ಮಾಡುತ್ತಿದೆ ಎಂದು ಹೇಳಿ ಪ್ರೇಕ್ಷಕರ ಕೆಂಗಣ್ಣಿಗೂ ಗುರಿಯಾಗಿದ್ದರು.

ಸಿನಿಮಾದಲ್ಲಿಯೂ ಮಿಂಚಿದ್ದ ಜಾಹ್ನವಿ

ಜಾಹ್ನವಿಯವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸ್ಪಷ್ಟ ಕನ್ನಡದಲ್ಲಿ ಹಾಗೂ ತಮ್ಮ ಬ್ಯೂಟಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನೇಕ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಫೇಮಸ್‌ ಆಗಿದ್ದರು. ಮಾತ್ರವಲ್ಲದೇ ಸಿನಿಮಾ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಜಗಳ, ಗದ್ದಲ ಶುರುವಾಗಿದ್ದೇ ಇಲ್ಲಿಂದ! ಕಿಚ್ಚನ ಮುಂದೆ ಗಿಲ್ಲಿ ವಿರುದ್ಧ ಸ್ಪರ್ಧಿಗಳ ದೂರು

"ಅಧಿಪತ್ರ" ಸಿನಿಮಾದಲ್ಲಿ ನಟಿಸಿವು ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದರು. ಕೇವಲ ಅಧಿಪತ್ರ ಸಿನಿಮಾ ಮಾತ್ರವಲ್ಲದೆ "ಮಿಸ್ ಕ್ಯಾಲಿಫೋರ್ನಿಯಾ" (2006) ಮತ್ತು "ಗೋಪಿಲೋಲ" ಮುಂತಾದ ಇತರ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ, ನಮ್ಮ ಅಮ್ಮ ಸೂಪರ್‌ ಸ್ಟಾರ್‌ ನಂತಹ ಭಾಗಿಯಾಗಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಚಿರಪರಿಚಿತರಾದಗಿದ್ದರು.

Yashaswi Devadiga

View all posts by this author