ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫಿನಾಲೆಗೆ ಎರಡೇ ದಿನ ಬಾಕಿ; ದಿಢೀರ್‌ ಅಂತ ಶಾಕ್‌ ನೀಡಿದ ʻಬಿಗ್‌ ಬಾಸ್‌ʼ, ಬೇಕು ಅಂದಾಗೆಲ್ಲಾ ಇನ್ನೇಲೆ ಸ್ಪರ್ಧಿಗಳನ್ನ ನೋಡೋಕಾಗಲ್ಲ!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ವಿದಾಯ ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ 12 ಫಿನಾಲೆ ಮುಗಿಯೋಕೆ ಇನ್ನೆರಡೇ ದಿನಗಳು ಬಾಕಿ ಇವೆ. ಈ ಮಧ್ಯೆ ಬಿಗ್‌ ಬಾಸ್‌ ವೀಕ್ಷಕರನ್ನು ನಿರಂತರವಾಗಿ ರಂಜಿಸಿದ್ದ ಜಿಯೋ ಹಾಟ್‌ಸ್ಟಾರ್‌ನ ಲೈವ್‌ ಈಗ ನಿಂತಿದೆ. 24 ಗಂಟೆಗಳ ಕಾಲ ಬಿಗ್‌ ಬಾಸ್‌ ಲೈವ್‌ ಫೀಡ್‌ ಅನ್ನು ವೀಕ್ಷಕರು ನೋಡುತ್ತಿದ್ದರು. ಈಗ ಅಧಿಕೃತವಾಗಿ ಲೈವ್‌ ಫೀಡ್‌ ನಿಂತಿದೆ ಎಂದು ಬಿಗ್ ಬಾಸ್‌ ಘೋಷಿಸಿದ್ದಾರೆ.

ಬಿಗ್‌ ಬಾಸ್‌ ಏನಂದ್ರು?

"ಸೂರ್ಯನ ಸಂಕ್ರಮಣವನ್ನು ಸೂಚಿಸುವ ಮಕರ ಸಂಕ್ರಾಂತಿ ಹಬ್ಬ. ಆತ್ಮಾವಲೋಕನ ಹಾಗೂ ಉಪಕಾರ ಸ್ಮರಣೆಯ ಸಮಯವೂ ಹೌದು. ನಮ್ಮ ಕನ್ನಡ ಸಂಸ್ಕೃತಿಯಲ್ಲಿ ಸಂಕ್ರಾಂತಿಗೆ ವಿಶಿಷ್ಠವಾಗಿ, ಒಂದು ನುಡಿ ಇದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಅಂತ. ಆದರೆ ಎಳ್ಳು ಬೆಲ್ಲ ಹಂಚಿಕೊಂಡು, ಒಳ್ಳೆಯ ಮತ್ತು ಅರ್ಥಪೂರ್ಣವಾದ ಮಾತುಗಳನ್ನು ಹಂಚಿಕೊಳ್ಳುವುದು ನಮ್ಮ ವಾಡಿಕೆ. ಅಂತೆಯೇ, ಇನ್ನು ನಾವು ಕೂಡ ಒಂದು ಸಂಕ್ರಮಣದ ಕ್ಷಣವನ್ನು ಬಂದು ತಲುಪಿದ್ದೇವೆ. ಇಂದಿನ ಲೈಟ್ಸ್‌ ಆಫ್‌ ಜೊತೆಗೆ ಸತತ 108 ದಿನಗಳ ಕಾಲ ಈ ಮನೆಯನ್ನು ವೀಕ್ಷಕರಿಗೆ ಪ್ರಸ್ತುತ ಪಡಿಸಿದ ಜಿಯೋ ಹಾಟ್‌ಸ್ಟಾರ್‌ನ ಲೈವ್‌ ಫೀಡ್‌ ಕೂಡ ಆಫ್‌ ಆಗಲಿದೆ" ಎಂದು ಬಿಗ್‌ ಬಾಸ್‌ ಹೇಳಿದ್ದಾರೆ.

Bigg Boss 12: ʻವಯಸ್ಸಲ್ಲಿ ನೀವು ದೊಡ್ಡವರು, ನಿಮ್‌ ಮನಸ್ಸಿಗೆ ತುಂಬಾ ನೋವು ಮಾಡಿಬಿಟ್ಟಿದ್ದೀನಿʼ; ಅಶ್ವಿನಿಗೆ ಕ್ಷಮೆ ಕೇಳಿದ ಗಿಲ್ಲಿ ನಟ!

ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಕೊಟ್ಟ ಸೂಚನೆ ಏನು?

"ಲೈವ್‌ ಫೀಡ್‌ ಆಫ್‌ ಆಗುವುದಕ್ಕೂ ಮುನ್ನ ನಿಮ್ಮ ಈ ಮನೆಯ ಪ್ರಯಾಣದಲ್ಲಿ ಸಹ ಪ್ರಯಾಣಿಕರಾಗಿದ್ದ ಲೈವ್‌ ವೀಕ್ಷಕರ ಜೊತೆ ಮನಸ್ಪೂರ್ತಿಯಾಗಿ ಮಾತನಾಡಿ, ಅವರಿಗೆ ವಿದಾಯ ಹೇಳುತ್ತಾ, ಇಲ್ಲಿವರೆಗೂ ಕರೆತಂದವರಿಗೆ ತಮ್ಮನ್ನು ಗೆಲ್ಲಿಸುವಂತೆ ವಿನಂತಿಸಿಕೊಳ್ಳಿ" ಎಂದು ಬಿಗ್‌ ಬಾಸ್‌ ಸೂಚಿಸಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಗಿಲ್ಲಿ ನಟ ಮನವಿ ಮಾಡಿಕೊಂಡ ವಿಡಿಯೋ



ವೀಕ್ಷಕರಿಗೆ ಮನವಿ ಮಾಡಿಕೊಂಡ ಗಿಲ್ಲಿ ನಟ

"ನನ್ನ ಆಟದಲ್ಲಿ ಉತ್ಸಾಹ ಹುಮ್ಮಸ್ಸು ಹೇಗೆ ಬಂತು ಎಂದರೆ, ಅದು ನಿಮ್ಮಿಂದ. ಕರ್ನಾಟಕ ಜನತೆಯಿಂದ. ನೀವು ನನಗೆ ಮಾಡಿರುವ ಸಪೋರ್ಟ್‌, ವೋಟ್‌ ನಮ್ಮನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ನನ್ನ ಪ್ರಾಣ ಇರುವವರೆಗೂ ನಾನು ಕನ್ನಡ ಜನತೆಯನ್ನುಯಾವತ್ತೂ ಮರೆಯೋದಿಲ್ಲ. ಅವರ ಸಪೋರ್ಟ್‌ನಿಂದಲೇ ನಾಲ್ಕು ಜನ ಗುರುತಿಸುವಂತೆ ನಾನು ಆಗಿದ್ದೇನೆ. ಇಲ್ಲಿವರೆಗೂ ಕರೆದುಕೊಂಡು ಬಂದಿರುವ ನೀವು, ಫಿನಾಲೆಯಲ್ಲೂ ನನಗೆ ವೋಟ್‌ ಮಾಡಿ ಗೆಲ್ಲಿಸಿ. ನನ್ನ ಆಟ ನಿಮಗೆ ಇಷ್ಟವಾಗಿರುತ್ತದೆ ಎಂಬ ನಂಬಿಕೆ ನನಗೆ ಇದೆ. ದಯವಿಟ್ಟು ವೋಟ್‌ ಮಾಡಿ, ಫಿನಾಲೆಯಲ್ಲಿ ನನ್ನನ್ನು ಗೆಲ್ಲಿಸಿ" ಎಂದು ಮನವಿ ಗಿಲ್ಲಿ ನಟ ಮಾಡಿದ್ದಾರೆ.