ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ವೀಕ್ಷಕರ ಮೆಚ್ಚಿನ ಜೋಡಿ ಅಂದರೆ ಅದುವೇ ಕಾವ್ಯ (Kavya Shaiva) ಹಾಗೂ ಗಿಲ್ಲಿ (Gilli). ಆದರೆ ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರ ಹಲವಾರ ಪ್ರಶ್ನೆಗಳಿಗೆ ಕಾವ್ಯ ಅವರು ಗಿಲ್ಲಿ ವಿರುದ್ಧವಾಗಿ ಕೊಟ್ಟಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ಮಧ್ಯೆ ವೈಮನಸ್ಸು ಮೂಡಿರುವಂತಿದೆ. ಶನಿವಾರದ ಸಂಚಿಕೆಯಲ್ಲಿ ಗಿಲ್ಲಿ ಅವರು ಕಾವ್ಯ ಅವರು ಲೀಡರ್ ಅಲ್ಲ, ಫಾಲೋವರ್ ಎಂದು ಹೇಳಿದ್ದರು. ಇದು ಕಾವ್ಯ ಅವರಿಗೆ ಬೇಸರ ತರಿಸಿದೆ. ಸಂಚಿಕೆ ಆದ ಮೇಲೆಯೂ ಈ ಬಗ್ಗೆ ಗಿಲ್ಲಿ ಅವರ ಬಳಿ ಚರ್ಚಿಸಿದ್ದಾರೆ. ಆದರೆ ಭಾನುವಾರ, ಗಿಲ್ಲಿ, ಕಾವ್ಯಾ ಅವರನ್ನು ಸಲುಗೆಯಾಗಿ ತೆಗೆದುಕೊಂಡಿದ್ದಾರೆ’ ಎಂಬ ಹೇಳಿಕೆಗೆ ಕಾವ್ಯ ಹೌದು ಎಂದು ಹೇಳಿದ್ದಾರೆ.
ಗಿಲ್ಲಿಗೆ ಕಾವ್ಯ ಅಂದರೆ ಸಲುಗೆ
ಗಿಲ್ಲಿ ಅವರು ಎಷ್ಟೇ ಕಾಮಿಡಿ ಮಾಡಿದರೂ, ಟಾಸ್ಕ್ ಅಂತ ಬಂದಾಗ ಎಲ್ಲಿಯೂ ಡೈವರ್ಟ್ ಆಗಿಲ್ಲ. ಹಲವು ಬಾರಿ ಸ್ಪರ್ಧಿಗಳು, ಗಿಲ್ಲಿ ಅವರು ಕಾವ್ಯ ಅನ್ನೋ ಕಾರ್ಡ್ ಬಳಕೆ ಮಾಡ್ತಾರೆ ಎಂದು ಆರೋಪಿಸಿದ್ದರು. ಆದರೆ ಗಿಲ್ಲಿ ಹಾಗಲ್ಲ ಎಂದು ಎಷ್ಟೋ ಬಾರಿ ಆಟದ ಮೂಲಕ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ರಕ್ಷಿತಾ! ಅಶ್ವಿನಿ, ಜಾಹ್ನವಿ ಫೇಕ್ ಅಂದು ಅಬ್ಬರಿಸಿದ ಧ್ರುವಂತ್
ಸುದೀಪ್ ಕೇಳುವ ಪ್ರಶ್ನೆಗೆ ಸ್ಪರ್ಧಿಗಳು ಎಸ್ ಅಥವಾ ನೋ ಎಂದು ಬೋರ್ಡ್ ತೋರಿಸುವ ಮೂಲಕ ಉತ್ತರಿಸಬೇಕು. ಈ ವೇಳೆ ಸುದೀಪ್ ಅವರು ‘ಗಿಲ್ಲಿ, ಕಾವ್ಯಾ ಅವರನ್ನು ಸಲುಗೆಯಾಗಿ ತೆಗೆದುಕೊಂಡಿದ್ದಾರೆ’ ಎಂಬ ಹೇಳಿಕೆ ನೀಡಿದರು. ಅದಕ್ಕೆ ಕಾವ್ಯಾ ಸೇರಿದಂತೆ ಹಲವರು ಹೌದು ಎಂಬ ಉತ್ತರ ನೀಡಿದರು.
ಕಾವ್ಯ ಹೇಳಿದ್ದೇನು?
ಕಾವ್ಯ ಈ ಬಗ್ಗೆ ಹೇಳಿದ್ದು ಹೀಗೆ, ಈ ಹಿಂದೆ ಟಾಸ್ಕ್ ಸಮಯದಲ್ಲೂ ಹಾಗೇ ಆಗಿದೆ. ಗಿಲ್ಲಿ ಅವರ ಬಳಿ ನಾನು ಹೋಗಿ ಯಾರೆಲ್ಲ ಆಟ ಆಡುತ್ತಿದ್ದಾರೆ? ಎಂದು ಕೇಳಿದಾಗ, ಗಿಲ್ಲಿ ಸರಿಯಾಗಿ ಉತ್ತರ ನೀಡಿಲ್ಲ. ಗಿಲ್ಲಿ ಅವರು ಹಲವು ಬಾರಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡಿದ್ದಾನೆ.
ನಾನು ಸಾಕಷ್ಟು ಬಾರಿ ಬುದ್ಧಿ ಹೇಳಿದರೂ ಅದನ್ನ ಸೀರೆಯೆಸ್ ಆಗಿ ತೆಗೆದುಕೊಳ್ಳಲ್ಲ ಎಂದಿದ್ದಾರೆ. ಆದರೆ ಈ ಬಗ್ಗೆ ಗಿಲ್ಲಿ ಹೇಳಿದ್ದು ಹೀಗೆ, ನಾನು ಕಾವ್ಯ ಅವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಆದರೆ ಅವರಿಗೆ ಸಲುಗೆ ತರ ಅನ್ನಿಸಿದೆ. ಕಾವ್ಯ ಟಾಸ್ಕ್ ಆಗುವಾಗ ಯಾರನ್ನು ಆಟ ಆಡಿಸುತ್ತಿದ್ದೀಯಾ ಎಂದಾಗ, ಆಗ ನಾನು ಯೋಚನೆ ಮಾಡುತ್ತಿದ್ದೆ ಅದಕ್ಕೆ ಪ್ರತಿಕ್ರಿಯೆ ಸರಿಯಾಗಿ ನೀಡಲಿಲ್ಲ. ಆದರೆ ಅದನ್ನು ಕಾವ್ಯಾ ತಪ್ಪಾಗಿ ಅರ್ಥ ಮಾಡಿಕೊಂಡಳು. ಕಾವ್ಯ ಹೇಳಿದ ಮಾತುಗಳನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೆ ಎಂದರು.
ನೋಯಿಸುವ ಅಪರಾಧ
ನಿನ್ನೆ ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಯಾರು ಮಾಡುತ್ತಿದ್ದಾರೆ? ಎಂದು ಸುದೀಪ್ ಪ್ರಶ್ನೆ ಇಟ್ಟರು. ಕಾವ್ಯ ಅವರು ಸುದೀಪ್ ಅವರ ಮುಂದೆ ಗಿಲ್ಲಿ ವಿರುದ್ಧವೇ ಆರೋಪ ಮಾಡಿದ್ದಾರೆ. ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಕಾವ್ಯ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ; ಕಣ್ಣೀರಿಟ್ಟ ಅಶ್ವಿನಿ ಗೌಡ
ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ʻನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ. ಅದು ಯಾರನ್ನು ಕೆಳಗಿಟ್ಟು ಮಾತನಾಡೋದು ಆಗಲ್ಲ. ಯಾರೋ ಯಾವುದೋ ಮೂಲೆಯಲ್ಲಿ ಕುಳಿತು ಮಾತಾಡರ್ತೀರಾ? ಹೊರಗೆ ಹೋಗಿ ನೋಡಿದ್ಮೇಲೆ ಸತ್ಯ ಗೊತ್ತಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಹೇಳಿದಾಗ ಅದಕ್ಕೆ ನಿಮಗೆ ಹಾಗೆ ಅನ್ನಿಸಿರಬಹುದುʼ ಎಂದು ಗಿಲ್ಲಿ ನಟ ಹೇಳಿದ್ದಾರೆ.