Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ರಕ್ಷಿತಾ! ಅಶ್ವಿನಿ, ಜಾಹ್ನವಿ ಫೇಕ್ ಅಂದು ಅಬ್ಬರಿಸಿದ ಧ್ರುವಂತ್
Ashwini Gowda: ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್ ಲೀಡ್ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ. ಗ್ರೂಪಿಸಮ್ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್, ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಅಶ್ವಿನಿ ಹಾಗೂ ಜಾಹ್ನವಿ ಮೇಲೆ ಕಿರುಚಾಡಿದ್ದಾರೆ ಧ್ರುವಂತ್.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ (Bigg Boss Kannada 12) ರಣರಂಗವಾಗಿದೆ. ನಾಮಿನೇಷನ್ (Nomination) ಪ್ರಕ್ರಿಯೆ ಜೋರಾಗಿದೆ. ಅದರಲ್ಲೂ ಗಿಲ್ಲಿ (Gilli) ಅವರನ್ನೇ ರಕ್ಷಿತಾ ಅವರು ನಾಮಿನೇಟ್ ಮಾಡಿದ್ದಾರೆ. ಗ್ರೂಪಿಸಮ್ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್ (Dhruvanth), ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಅಶ್ವಿನಿ (Ashwini Gowda) ಹಾಗೂ ಜಾಹ್ನವಿ ಮೇಲೆ ಕಿರುಚಾಡಿದ್ದಾರೆ ಧ್ರುವಂತ್.
ಅಶ್ವಿನಿ ಫೇಕ್!
ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್ ಲೀಡ್ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ. ಇದರಿಂದ ಕೋಪಗೊಂಡ ಅಶ್ವಿನಿ, ʻಧ್ರುವಂತ್ ಅವರೇ ಫೇಕ್. ನನ್ನ ಜಾಹ್ನವಿ ಅವರನ್ನು ಅವರ ತೆಕ್ಕೆಗೆ ತೆಗೆದುಕೊಳ್ಳಲು ನೋಡಿದರು ಆದರೆ ಅದು ಆಗಿಲ್ಲ. ಮಲ್ಲಮ್ಮ ಥರ ಅಲ್ಲ ನಾವು ನಿಮ್ಮ ತೆಕ್ಕೆಗೆ ಬೀಳೋಕೆʼ ಎಂದು ಅಬ್ಬರಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ; ಕಣ್ಣೀರಿಟ್ಟ ಅಶ್ವಿನಿ ಗೌಡ
ʻಫೇಕ್ ಅಲ್ಲಿ ಮಾತಾಡೋ ನಿಮಗೆ ಇಷ್ಟು ಇರಬೇಕಾದರೆ, ತಾಕತ್ ತೋರಿಸೋ ನನಗೆ ಎಷ್ಟು ಇರಬೇಡʼ ಎಂದು ಕೂಗಾಡಿದ್ದಾರೆ ಅಶ್ವಿನಿ.
ಕಲರ್ಸ್ ಕನ್ನಡ ಪ್ರೋಮೋ
ಅಶ್ವಿನಿ ಮೇಲೆ ಕೆಂಡ ಆಗ್ತಿರೋ ಧ್ರುವಂತ್
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು. ಒಂದು ಗಿಲ್ಲಿ ತಂಡ ಆದರೆ ಇನ್ನೊಂದು ಅಶ್ವಿನಿ ಗೌಡ. ಆದರೆ ಧ್ರುವಂತ್ ಅವರಿಗೆ ಆಟ ಆಡಲು ಅವಕಾಶ ನೀಡಲು ಅಶ್ವಿನಿ ಅವರು ಹಿಂದೇಟು ಹಾಕಿದ್ದರು. ಬಳಿಕ ಹೇಗೋ ವಾದ ಮಾಡಿ, ಆಟವನ್ನೂ ಆಡಿ, ಗೆದ್ದು ತೋರಿಸಿದ್ದರು. ʻನನಗೆ ಅವಕಾಶ ಕೊಡ್ತಿರಲಿಲ್ಲ, ಅಶ್ವಿನಿ ಮೇಡಂ ತಾನು ಹೇಳಿದ್ದೇ ಆಗಬೇಕು ಅಂತ ಅಂತಾರೆ” ಅಂತ ರಘು ಅವರ ಬಳಿಯೂ ಧ್ರುವಂತ್ ಅಸಮಾಧಾನ ಹೊರ ಹಾಕಿದ್ದರು.
ಅಶ್ವಿನಿ ಹಾಗೂ ರಘು ವಾದ ಆದಾಗಲೂ, ಅಶ್ವಿನಿ ಗೌಡ ಮುಂದೆ ಹೋಗಿ “ಏನು ನಡೆಯಿತು ಅಂತ ಗೊತ್ತಿಲ್ಲ” ಎಂದು ಧ್ರುವಂತ್ ಹೇಳಿದ್ದರು. ಅಷ್ಟೇ ಅಲ್ಲ ಗಿಲ್ಲಿ ಟೀಂನಲ್ಲಿಯೂ ಆಟ ಆಡಿದ್ದರು. ಈ ಬಗ್ಗೆ ಅಶ್ವಿನಿ ಅವರು ಜಾಹ್ನವಿ ಅವರ ಬಳಿ ಅಸಮಾಧಾನ ಹೊರ ಹಾಕಿದ್ದರು. ನಮ್ಮ ಜೊತೆ ಇದ್ದುಕೊಂಡು ಹಿಂದೆಯಿಂದ ಚೂರಿ ಹಾಕೋದು ಹೀಗೆ ಎಂದು ಮಾತನಾಡಿದ್ದರು. ಕಳಪೆ ಸಮಯದಲ್ಲೂ ಧ್ರುವಂತ್ ಅಶ್ವಿನಿ ಅವರ ಹೆಸರನ್ನು ಸೂಚಿಸಿದ್ದರು.
ಇದನ್ನೂ ಓದಿ: Bigg Boss Kannada 12: ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ! ಗಿಲ್ಲಿ ಹೇಳಿದ್ದೇನು?
‘’ಮಾತೇ ಮುತ್ತು ಮಾತೇ ಮೃತ್ಯು’ ಅಂತ ಹೇಳ್ತಾರೆ. ಆ ಮಾತಿಗೆ ಬಹುಶಃ ಅಶ್ವಿನಿಯವರು ಬಹಳ ಸೂಕ್ತವಾಗಿ ಸೂಟ್ ಆಗ್ತಾರೆ. ನನ್ನನ್ನ ಆಟ ಆಡೋಕೆ ಬಿಡ್ತಾರೆ ಅಂದುಕೊಂಡಿದ್ದೆ. ಆದರೆ, ರೂಮ್‌ಗೆ ಬಂದು ಧನುಷ್ ಹೆಸರು ಹೇಳಿದರು. ನಿನ್ನೆ ಹೋಗಿ ಅವರು ಆಟ ಆಡಿ ಗೆದ್ದಿದ್ದಾರೆ ಈಗ ನನ್ನ ಸರದಿ ಅಂದ್ರೆ ಕೇಳಲಿಲ್ಲ. ಕ್ಯಾಪ್ಟನ್ ಆಗಿ ನನ್ನ ನಿರ್ಣಯ ತಗೊಳ್ತೀನಿ ಅಂತಾರೆ. ಆಗ ನನಗೆ ಟ್ರಿಗರ್ ಆಗುತ್ತೆ. ಈ ಆಟ ನಾನು ಆಡಲೇಬೇಕು ಅಂತ ನಿಲುವು ತೆಗೆದುಕೊಳ್ತೀನಿ ಎಂದು ಹೇಳಿದ್ದರು.