ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ರಕ್ಷಿತಾರನ್ನ ಅಭಿನಂದಿಸಲು ಹೋದ ಗಿಲ್ಲಿಗೆ ಖಡಕ್ ಎಚ್ಚರಿಕೆ ನೀಡಿದ ಕಾವ್ಯ!

Gilli Nata: ಗಿಲ್ಲಿ ಏನೇ ತಪ್ಪು ಮಾಡಿದ್ರೂ ಮೊದಲು ಕ್ಲಾಸ್‌ ತೆಗೆದುಕೊಳ್ಳುವುದೇ ಕಾವ್ಯ. ಗಿಲ್ಲಿ ಟಾಸ್ಕ್‌ ವೇಳೆ ಅದೆಷ್ಟೋ ಬಾರಿ ಕಾಮಿಡಿ ಮಾಡಿದ್ದಾರೆ. ಈ ಬಗ್ಗೆ ಕಾವ್ಯ ಕ್ಲಾಸ್‌ ತೆಗೆದುಕೊಂಡಿದ್ದಿದೆ. ಆದರೆ ಈ ಬಾರಿ ರಕ್ಷಿತಾ ವಿಚಾರಕ್ಕೆ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ರಕ್ಷಿತಾ ಟಾಸ್ಕ್‌ ಗೆದ್ದ ಬಳಿಕ ಗಿಲ್ಲಿ ವಂಶದ ಕುಡಿಯನ್ನ ತಬ್ಬಿಕೊಳ್ಳಲು ಹೋದರು. ಇದು ಕಾವ್ಯ ಅವರಿಗೆ ಕೋಪ ತರಿಸಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಅತ್ಯಂತ ಕ್ಯೂಟ್‌ ಜೋಡಿ ಅಂದ್ರೆ ಅದುವೇ ಕಾವ್ಯ ಹಾಗೂ ಗಿಲ್ಲಿ ಜೋಡಿ (Kavya And Gilli). ಗಿಲ್ಲಿ ಏನೇ ತಪ್ಪು ಮಾಡಿದ್ರೂ ಮೊದಲು ಕ್ಲಾಸ್‌ ತೆಗೆದುಕೊಳ್ಳುವುದೇ ಕಾವ್ಯ. ಗಿಲ್ಲಿ ಟಾಸ್ಕ್‌ ವೇಳೆ ಅದೆಷ್ಟೋ ಬಾರಿ ಕಾಮಿಡಿ ಮಾಡಿದ್ದಾರೆ. ಈ ಬಗ್ಗೆ ಕಾವ್ಯ ಕ್ಲಾಸ್‌ ತೆಗೆದುಕೊಂಡಿದ್ದಿದೆ. ಆದರೆ ಈ ಬಾರಿ ರಕ್ಷಿತಾ (Rakshitha Shetty) ವಿಚಾರಕ್ಕೆ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ರಕ್ಷಿತಾ ಟಾಸ್ಕ್‌ ಗೆದ್ದ ಬಳಿಕ ಗಿಲ್ಲಿ ವಂಶದ ಕುಡಿಯನ್ನ ತಬ್ಬಿಕೊಳ್ಳಲು ಹೋದರು. ಇದು ಕಾವ್ಯ ಅವರಿಗೆ ಕೋಪ ತರಿಸಿದೆ.

ಅನೇಕ ಬಾರಿ ಗಿಲ್ಲಿಯೇ ನಾಮಿನೇಟ್‌

ರಕ್ಷಿತಾ ಹಾಗೂ ಗಿಲ್ಲಿ ಮಧ್ಯೆ ಒಳ್ಳೆ ಸ್ನೇಹವಿತ್ತು. ಆದರೀಗ ರಕ್ಷಿತಾ ಅನೇಕ ಬಾರಿ ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ್ದಾರೆ. ಇಬ್ಬರ ಮಧ್ಯೆ ಮನಸ್ತಾಪವೂ ಇದೆ. ಗಿಲ್ಲಿ ನಟ ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದರು. ಆದರೆ ಈಗ ರಕ್ಷಿತಾ ಶೆಟ್ಟಿ ಅವರೇ ಗಿಲ್ಲಿ ವಿರುದ್ಧ ಆಗಿದ್ದಾರೆ. ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದರು. ರಕ್ಷಿತಾ ಅವರು ಮಾಳು ಅವರನ್ನ ಜೋಡಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರು ಜೋಡಿ ಆಗಿದ್ದರು.

ಇದನ್ನೂ ಓದಿ: Bigg Boss Kannada 12: ಟಾಸ್ಕ್‌ ವೇಳೆ ಕಾಲು ಮುರಿದುಕೊಂಡ ಸ್ಪಂದನಾ! ಪುಷ್ಪ ಸಾಂಗ್‌ ಹೇಳಿ ಮನೆಮಂದಿಯನ್ನ ನಗಿಸಿದ ಗಿಲ್ಲಿ

ಮೊದಲ ಹಂತದ ಆಟದಲ್ಲಿ ರಕ್ಷಿತಾ ಜೋಡಿ ವಿನ್‌ ಆಯ್ತು. ಹೀಗಾಗಿ ಗಿಲ್ಲಿ ಕೂಡ ನನ್ನ ವಂಶದ ಕುಡಿ ಅಂತ ತಬ್ಬಿಕೊಳ್ಳಲು ಹೋದರು. ಗಿಲ್ಲಿಯ ಈ ನಡೆ ಕಾವ್ಯ ಅವರಿಗೆ ಸಿಟ್ಟು ಬರುವಂತೆ ಮಾಡಿದೆ. ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಕಾವ್ಯ ಅವರು ವಾರ್ನಿಂಗ್ ಕೊಟ್ಟರು.



ಗಿಲ್ಲಿಗೆ ಕಾವ್ಯ ಎಚ್ಚರಿಕೆ

ಗಿಲ್ಲಿ ಹಲವು ಬಾರಿ ಕಾಮಿಡಿ ಮಾಡುತ್ತಾರೆ. ಬಿಗ್ ಬಾಸ್ ಕೆಲವು ಘೋಷಣೆಗಳನ್ನು ಮಾಡುವಾಗಲೂ ಕೂಡ ಗಿಲ್ಲಿ ನಡನಡುವೆ ಮಾತನಾಡಿ ಕಾಮಿಡಿ ಮಾಡಲು ಪ್ರಯತ್ನಿಸುತ್ತಾರೆ. ಲ್ಲಿ ನಟ ಅವರು ಎಲ್ಲ ಸಂದರ್ಭದಲ್ಲೂ ಕಾಮಿಡಿ ಮಾಡಿದ್ದಕ್ಕಾಗಿ ಅವರನ್ನು ಬಿಗ್ ಬಾಸ್ ಮನೆಯ ಹಲವು ಸದಸ್ಯರು ವಿರೋಧಿಸುತ್ತಿದ್ದಾರೆ.

ಕೌಂಟರ್‌ ಕೊಟ್ಟಿದ್ದ ಗಿಲ್ಲಿ

ನಾಮಿನೇಶನ್‌ ಸಮಯದಲ್ಲಿ ಗಿಲ್ಲಿ ಅವರು ರಕ್ಷಿತಾ ಅವರಿಗೆ ಸರಿಯಾಗಿ ಕೌಂಟರ್‌ ಕೊಟ್ಟಿದ್ದರು . ಗಿಲ್ಲಿ ನಟ - ರಕ್ಷಿತಾ ಶೆಟ್ಟಿ, ಕಾವ್ಯ ಶೈವ - ರಕ್ಷಿತಾ ಶೆಟ್ಟಿ ಮಧ್ಯೆ ಜೋರು ವಾಗ್ವಾದ ನಡೆದಿತ್ತು. ಇದಾದ್ಮೇಲೆ.. ‘ವಂಶದ ಕುಡಿ’ ರಕ್ಷಿತಾ ಶೆಟ್ಟಿ ಅವರನ್ನೇ ಗಿಲ್ಲಿ ನಟ ನಾಮಿನೇಟ್ ಮಾಡಿದರು. ಆಗ ಗಿಲ್ಲಿ ನಟ ಬಲವಾದ ಕಾರಣಗಳನ್ನೇ ಕೊಟ್ಟರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ-ಕಾವ್ಯಾ ಜೋಡಿಗೆ ಟಾಸ್ಕ್‌ನಿಂದ ಗೇಟ್‌ಪಾಸ್‌? ಅಶ್ವಿನಿ, ರಘು ನಿರ್ಧಾರ ಎನು?

ಮನೆಗೆಲಸ ಮಾಡ್ತಿಲ್ಲ ಅಂತ ಹೇಳ್ತಾಳೆ. ಆದರೆ, ರಕ್ಷಿತಾ ಅಡುಗೆ ಮನೆ ಬಿಟ್ಟು ಆಚೆ ಬಂದಿಲ್ಲ. ನಿನ್ನ ಸ್ಟ್ರಾಟೆಜಿ ಏನಾಗಿರಬಹುದು ಅಂದ್ರೆ.. ಎಲ್ಲರೂ ಜಾಸ್ತಿ ಬರೋದೇ ಅಡುಗೆ ಮನೆಗೆ ಅಲ್ವಾ. ಅದಕ್ಕೆ ನೀವು ಅಡುಗೆ ಮನೆಯಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದೀಯಾ. ಬೇರೆ ಎಲ್ಲಿ ಹಾಕಿದರೂ ಹೋಗಲ್ಲ. ಕೊನೆಗೆ ಕಿಚನ್‌ಗೆ ಬರ್ತೀಯಾ’’ ಎಂದು ರಕ್ಷಿತಾ ಸ್ಟ್ರಾಟೆಜಿಯನ್ನ ಗಿಲ್ಲಿ ನಟ ಬಯಲು ಮಾಡಿದರು.

Yashaswi Devadiga

View all posts by this author