Bigg Boss Kannada 12: ಟಾಸ್ಕ್ ವೇಳೆ ಕಾಲು ಮುರಿದುಕೊಂಡ ಸ್ಪಂದನಾ! ಪುಷ್ಪ ಸಾಂಗ್ ಹೇಳಿ ಮನೆಮಂದಿಯನ್ನ ನಗಿಸಿದ ಗಿಲ್ಲಿ
Spandana: ಬಾಲ್ ಟಾಸ್ಕ್‌ನಲ್ಲಿ ಸಹ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ ಕೆಳಗೆ ಬಿದ್ದಿದ್ದರೂ ಅಭಿಷೇಕ್ ತನ್ನ ಕೈಲಿದ್ದ ಬಾಲ್ ರಕ್ಷಣೆ ಮಾಡಿಕೊಳ್ಳಲು ನಿಂತುಕೊಂಡು ಸ್ಪಂದನಾಳನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ಇತರ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಗಿಲ್ಲಿ ಕಾಮಿಡಿಗೂ ಮನೆಮಂದಿ ನಕ್ಕಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಟಾಸ್ಕ್ ಅಂದ ಮೇಲೆ ಪೆಟ್ಟು ಮಾಡಿಕೊಳ್ಳೋದು ಸಹಜ. ಈ ವಾರ ಕ್ಯಾಪ್ಟನ್ಸಿ ಟಾಸ್ಕ್ (Captaincy Task) ಆಡುವ ವೇಳೆ ಸ್ಪಂದನಾ ಸೋಮಣ್ಣ ಅವರ ಕಾಲಿಗೆ ಪೆಟ್ಟಾಗಿದೆ. ಬಿಗ್ ಬಾಸ್ ಲೈವ್‌ನ ವಿಡಿಯೋ ಕ್ಲಿಪ್‌ಗಳು ವೈರಲ್ ಆಗುತ್ತಿದೆ. ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ (Spandana Somanna) ಮನೆಯಲ್ಲಿ ಕುಂಟುತ್ತಿರುವ ದೃಶ್ಯ ಈಗ ವೈರಲ್ ಆಗ್ತಿದೆ. ಅಷ್ಟೇ ಅಲ್ಲ ಗಿಲ್ಲಿ (Gilli Nata) ಕಾಮಿಡಿಗೂ ಮನೆಮಂದಿ ನಕ್ಕಿದ್ದಾರೆ.
ಅಸಲಿಗೆ ಏನಾಯ್ತು?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳಲಾಗಿ ಟಾಸ್ಕ್ ನಿಭಾಯಿಸಬೇಕಿತ್ತು. ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು.
ವೈರಲ್ ವಿಡಿಯೋ
Gilli 😂🔥#BBKSeason12 #BBK12 #GilliNata #Gilli #KavyaShaiva pic.twitter.com/L0sSjvbeG6
— Gilli Entertainer (@traderashu086) December 3, 2025
ಇದನ್ನೂ ಓದಿ: Bigg Boss Kannada 12: ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್ ಸಖತ್ ವೈರಲ್
ಬಾಲ್ ಟಾಸ್ಕ್‌ನಲ್ಲಿ ಸಹ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಸ್ಪಂದನಾ ಕೆಳಗೆ ಬಿದ್ದಿದ್ದರೂ ಅಭಿಷೇಕ್ ತನ್ನ ಕೈಲಿದ್ದ ಬಾಲ್ ರಕ್ಷಣೆ ಮಾಡಿಕೊಳ್ಳಲು ನಿಂತುಕೊಂಡು ಸ್ಪಂದನಾಳನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ಇತರ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ.
ಮನೆ ಮಂದಿಯನ್ನ ನಗಿಸಿದ ಗಿಲ್ಲಿ!
ದೃಶ್ಯಗಳನ್ನು ನೋಡಿದರೆ, ಕಾಲಿಗೆ ಬ್ಯಾಂಡೇಜ್ ಮಾಡಿ ನೇರವಾಗಿಯೇ ಕಾಲನ್ನು ಇಟ್ಟುಕೊಳ್ಳುವುದಕ್ಕೆ ಬೆಲ್ಟ್ ಕೊಡಲಾಗಿದೆ. ಸ್ಪಂದನಾ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಅಭಿಷೇಕ್ ಸಹಾಯದಿಂದ ಓಡಾಡುವಾಗ ಗಿಲ್ಲಿ ನಟ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ನೋಟ ಸಿಂಗಾರವಾಯಿತೇ ಹಾಡಿನಲ್ಲಿ ಕಾಲೆಳೆದುಕೊಂಡು ನಡೆಯುವ ಸ್ಟೈಲ್ ಅನ್ನು ತೋರಿಸುತ್ತಾ ಮನೆ ಮಂದಿಯನ್ನು ನಗಿಸಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಅಷ್ಟೇ ಅಲ್ಲ ಬಿಗ್ ಬಾಸ್ ಕೂಡ ಪ್ರೋಮೋ ಒಂದನ್ನ ಶೇರ್ ಮಾಡಿಕೊಂಡಿದೆ. ಸ್ಪಂದನಾ ಅವರು ಕಣ್ಣೀರಿಡುತ್ತ ಕೂತ್ತಿದ್ದಾಗ, ಧನುಷ್, ಅಭಿಷೇಕ್, ಸೂರಜ್ ಅವರು ಸ್ಪಂದನಾ ರೀತಿಯೇ ಕುಣಿದು ಅವರನ್ನ ನಗಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ-ಕಾವ್ಯಾ ಜೋಡಿಗೆ ಟಾಸ್ಕ್‌ನಿಂದ ಗೇಟ್‌ಪಾಸ್? ಅಶ್ವಿನಿ, ರಘು ನಿರ್ಧಾರ ಎನು?
ಟಾಸ್ಕ್ ಕಥೆ ಏನು?
ರಘು ಹಾಗೂ ಅಶ್ವಿನಿ ಟೀಂ ಟಾಸ್ಕ್‌ನಲ್ಲಿ ಮುಂದೆ ಹೋಗಿದೆ. ಟಾಸ್ಕ್ ಒಂದರಲ್ಲಿ ರಘು ಮತ್ತು ಅಶ್ವಿನಿ ಗೆದ್ದಿದ್ದಾರೆ. ಬಿಗ್ಬಾಸ್ ಆಜ್ಞೆಯಂತೆ ಒಂದು ಜೋಡಿಯನ್ನು ಅಶ್ವಿನಿ ಮತ್ತು ರಘು ಅವರು ಟಾಸ್ಕ್‌ನಿಂದ ಹೊರಗೆ ಇಡಬೇಕಿದೆ.
ಈಗ ಅಶ್ವಿನಿ ಮತ್ತು ರಘು ಅವರುಗಳು ಯಾರನ್ನು ಹೊರ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.