ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಈ ವಾರ ಕಾವ್ಯ ಶೈವ (Kavya Shaiva) ಅವರು ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ. ಆದರೆ ಗಿಲ್ಲಿ (Gilli Nata) ವರ್ತನೆಯಿಂದಾಗಿ ಬೇಸರ ಹೊರ ಹಾಕಿದ್ದಾರೆ ಕಾವ್ಯ. ಸುದೀಪ್ ಈ ಬಗ್ಗೆ ತಿಳಿ ಹೇಳಿದರೂ ಗಿಲ್ಲಿ ಬದಲಾದಂತಿಲ್ಲ. ಕತ್ತರಿ ಹಿಡಿದುಕೊಂಡು ಕಾವ್ಯಾ ಅವರ ಕೂದಲು ಕತ್ತರಿಸುವ ರೀತಿಯಲ್ಲಿ ನಟಿಸಿದರು. ಇದರಿಂದ ಕಾವ್ಯ ಅವರಿಗೆ ತುಂಬಾ ಕೋಪ ಬಂತು. ಕೋಪ ವ್ಯಕ್ತಪಡಿಸಿದರೂ ಸಹ ಗಿಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ.
ಕಾವ್ಯಗೆ ಬಂತು ಕೋಪ
ಸುದೀಪ್ ಅವರೇ ಕಿಚ್ಚನ ಪಂಚಾಯ್ತಿಯಲ್ಲಿ ಅವರ ಆಟವನ್ನು ಆಡಲು ಬಿಡಿ ಎಂದು ಪರೋಕ್ಷವಾಗಿ ತಿಳಿ ಹೇಳಿದ್ದರು. ಆದರೂ ಗಿಲ್ಲಿ ಬದಲಾದಂತಿಲ್ಲ. ಕಿಚನ್ ರೂಮ್‌ನಲ್ಲಿ ಕಾವ್ಯ ಬಿಡಿಸುತ್ತಿದ್ದ ದಾಳಿಂಬೆಯನ್ನು ತಿನ್ನಲು ಹೋದರು ಗಿಲ್ಲಿ.
ಇದನ್ನೂ ಓದಿ: Bigg Boss Kannada 12: ಇದೊಂದು ವಿಚಾರದಲ್ಲಿ ರಘು - ರಕ್ಷಿತಾ ಭ್ರಮೆಯಲ್ಲಿ ಇದ್ದಾರಂತೆ! ಗಿಲ್ಲಿ, ಕಾವ್ಯ ನೇರ ಮಾತು
‘ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ’ ಎಂದು ಕಾವ್ಯಾ ಅವರು ಹೇಳಿದರೂ ಕೂಡ ಗಿಲ್ಲಿ ನಟ ಅರ್ಥ ಮಾಡಿಕೊಂಡಿಲ್ಲ. ಕತ್ತರಿ ಹಿಡಿದುಕೊಂಡು ಕಾವ್ಯಾ ಅವರ ಕೂದಲು ಕತ್ತರಿಸುವ ರೀತಿಯಲ್ಲಿ ನಟಿಸಿದರು. ಇದರಿಂದ ಕಾವ್ಯ ಅವರಿಗೆ ತುಂಬಾ ಕೋಪ ಬಂತು. ಕೋಪ ವ್ಯಕ್ತಪಡಿಸಿದರೂ ಸಹ ಗಿಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ. ದಾಳಿಂಬೆ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮ್ಗೆ ತೆರಳಿದರು. ಇದಾದ ಬಳಿಕ ಕಾವ್ಯ ಅವರನ್ನು ಸಮಾಧಾನ ಪಡಿಸಲು ನೋಡಿದರು.
ವೈರಲ್ ವಿಡಿಯೋ
ಗಿಲ್ಲಿಯ ಈ ವರ್ತನೆ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಆರಂಭದಿಂದಲೂ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಮಧ್ಯೆ ಆತ್ಮೀಯತೆ ಇದೆ, ಅನ್ಯೋನ್ಯತೆ ಇದೆ. ಹಾಗ್ನೋಡಿದ್ರೆ, ಇಬ್ಬರೂ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟಿದ್ದೇ ಜಂಟಿಯಾಗಿ.
ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಮೊದಲನೇಯದ್ದಾಗಿ ರಾಶಿಕಾ ಅವರ ಸೋದರ ಮತ್ತು ತಾಯಿ ಆಗಮಿಸಿದ್ದಾರೆ. ಎರಡನೇಯದ್ದಾಗಿ ಸೂರಜ್ ತಾಯಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್ ಮಾಡಿದ ರಾಶಿಕಾ!
ರಾಶಿಕಾ ತಾಯಿ ಬರುತ್ತಿದ್ದಂತೆ ಗಿಲ್ಲಿ ಇಲ್ಲಿಯೂ ತರಲೆ ಮಾಡಿದ್ದಾರೆ. ಮನೆಯಲ್ಲಿರುವ ಐವರು ಪುರುಷ ಸ್ಪರ್ಧಿಗಳಲ್ಲಿ ನಿಮಗ್ಯಾರು ಇಷ್ಟ ಅಂತ ಕೇಳಿದ್ದಾರೆ. ಈ ಪ್ರಶ್ನೆಗೆ ರಾಶಿಕಾ ತಾಯಿ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಆದ್ರೆ ಪ್ರೋಮೋದಲ್ಲಿ ಗಿಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಬೇಸರ ಮಾಡಿಸಿದ್ದಾನೆ ಎಂಬರ್ಥದಲ್ಲಿಯೇ ರಾಶಿಕಾ ತಾಯಿ ಹೇಳಿದಂತೆ ತೋರಿಸಲಾಗಿದೆ.