Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್ ಮಾಡಿದ ರಾಶಿಕಾ!
Gilli Nata: ಬಿಗ್ ಬಾಸ್ ಸೀಸನ್ 12ರಲ್ಲಿ ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಹಾಗೂ ಚೈತ್ರಾ ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಎರಡು ವಾರಗಳ ಕಾಲ ವೋಟಿಂಗ್ ಲೈನ್ ಓಪನ್ ಕೂಡ ಇರಲಿಲ್ಲ. ಹೀಗಾಗಿ ಈ ವಾರ ಬಹುತೇಕ ಎರಡು ಸ್ಪರ್ಧಿಗಳು ಆದರೂ ಎಲಿಮಿನೇಟ್ ಆಗುತ್ತಾರೆ ಎನ್ನಲಾಗುತ್ತಿದೆ. ಇದೀಗ ನಾಮಿನೇಶನ್ ಪ್ರಕ್ರಿಯೆಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ (Rakath) ಹಾಗೂ ಚೈತ್ರಾ (Chaithra Kundapura) ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಎರಡು ವಾರಗಳ ಕಾಲ ವೋಟಿಂಗ್ ಲೈನ್ ಓಪನ್ ಕೂಡ ಇರಲಿಲ್ಲ. ಹೀಗಾಗಿ ಈ ವಾರ ಬಹುತೇಕ ಎರಡು ಸ್ಪರ್ಧಿಗಳು ಆದರೂ ಎಲಿಮಿನೇಟ್ ಆಗುತ್ತಾರೆ ಎನ್ನಲಾಗುತ್ತಿದೆ. ಸದ್ಯ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ (Elimination) ಜೋರಾಗುತ್ತಿದೆ. ಇದೀಗ ನಾಮಿನೇಶನ್ ಪ್ರಕ್ರಿಯೆಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ (Twist) ಕೊಟ್ಟಿದ್ದಾರೆ.
ಗಿಲ್ಲಿ ಕನ್ನಿಂಗ್
ಆಕ್ಟಿವಿಟಿ ರೂಮ್‌ನಲ್ಲಿ ಸದಸ್ಯ ಹೋಗಬೇಕು. ಉಳಿದ ಸದಸ್ಯರು ಯಾರನ್ನಾದರೂ ಹೊರಗೆ ಕಳಿಸಲು ಇಚ್ಚಿಸಿದ್ದಲ್ಲಿ ಕೆಂಪು ಬಣ್ಣದ ಬೋರ್ಡ್ ತೋರಿಸಬೇಕು. ಹಾಗೇ ನಾಮಿನೇಶನ್‌ನಿಂದ ಸೇಫ್ ಮಾಡಿಕೊಳ್ಳಲು ಬಿಗ್ ಬಾಸ್ ಒಂದು ಅವಕಾಶವನ್ನೂ ನೀಡಿದೆ.
ಇದನ್ನೂ ಓದಿ: Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!
ಯಾರು ಯಾರೂ ಹೊರಗೆ ಕಳಿಸಲು ಬಯಿಸಿದ್ದಾರೆ ಎಂದು ಊಹಿಸಬೇಕು. ಅದು ಸರಿಯಾದಲ್ಲಿ ಬಚಾವ್ ಆಗ್ತಾರೆ. ಇನ್ನು ಅಶ್ವಿನಿ ಅವರು ಸ್ಪಂದನಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ರಕ್ಷಿತಾ ಅವರು ಧನುಷ್ ಅವರನ್ನ ನಾಮಿನೇಟ್ ಮಾಡಿದ್ದಾರೆ. ಹಾಗೇ ರಾಶಿಕಾ ಅವರು 'ಗಿಲ್ಲಿ ಪ್ರತಿ ದಿನ ಒಂದೊಂದು ಪಾತ್ರ ಮಾಡುತ್ತಿದ್ದಾನೆ. ಕುತಂತ್ರಿ ಎಂದಿದ್ದಾರೆ.
ಸ್ಪಂದನಾ ವೀಕ್
ಈ ಹಿಂದೆ ಅಶ್ವಿನಿ ಅವರ ಸ್ನೇಹಿತೆಯಾಗಿದ್ದ ಜಾಹ್ನವಿ ಕೂಡ ಪದೇ ಪದೇ ಇದೇ ಮಾತನ್ನು ಹೇಳುತ್ತಿದ್ದರು.ಇದೀಗ ಅಶ್ವಿನಿ ಅವರು ಹಾಗೆ ಹೇಳದಿದ್ದರೂ ಎಲ್ಲರಿಗಿಂತಲೂ ಸ್ಪಂದನಾ ವೀಕ್ ಎಂದು ಹೇಳಿದ್ದಾರೆ.ಇನ್ನು, ಗಿಲ್ಲಿ ನಟ ದಿನವೂ ಒಂದೊಂದು ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾನೆ. ಆತ ಬಹುದೊಡ್ಡ ಮೋಸಗಾರ ಎಂದು ರಾಷಿಕಾ ಗಿಲ್ಲಿ ನಟ ಎಲಿಮಿನೇಟ್ ಆಗಬೇಕು ಎಂದಿದ್ದಾರೆ.
ವೀಕೆಂಡ್ ಬಂತು ಅಂದರೆ ಬಿಗ್ ಬಾಸ್ ಪ್ರಿಯರು ಕಾಯೋದು ಕಿಚ್ಚನ ಪಂಚಾಯ್ತಿಗೆ. ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ , ಅವರ ಲುಕ್, ಅವರ ಮಾತುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಆದರೀಗ ಸುದೀಪ್ ಅವರು ಒಂದು ಅನೌನ್ಸ್ ಮಾಡಿದ್ದಾರೆ. ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.
ಕಲರ್ಸ್ ಕನ್ನಡ ಪ್ರೋಮೋ
ಈ ವಾರ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ. ಸ್ವತಃ ಕಿಚ್ಚ ಅವರೇ ಈ ಬಗ್ಗೆ ರಿವೀಲ್ ಮಾಡಿದ್ದಾರೆ.ಗೊತ್ತಿರುವಂತೆ ಮಾರ್ಕ್ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಟ ʻಕಿಚ್ಚʼ ಸುದೀಪ್ ಅವರ ʻಮಾರ್ಕ್ʼ ಸಿನಿಮಾವು ಇದೇ ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
ಈ ಚಿತ್ರವನ್ನು ಗ್ರ್ಯಾಂಡ್ ಆಗಿ ಬಹುಭಾಷೆಯಲ್ಲಿ ತೆರೆಗೆ ತರುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಹುಬ್ಬಳ್ಳಿಯಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಈಗಾಗಲೇ ಮಾಡಿದೆ. ಹಾಗಾಗಿ ಈ ವಾರ ಮಿಡ್ ವೀಕ್ ಎಲಿಮಿನೇಶನ್ ಕೂಡ ಆಗಬಹುದು ಎನ್ನಲಾಗುತ್ತಿದೆ.