ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಇವೆರಡು ಕಾರಣಕ್ಕೆ ಗಿಲ್ಲಿಗೆ ವಾರ್ನಿಂಗ್‌ ಕೊಟ್ಟ ಕಿಚ್ಚ; ಮನೆಗೆ ಹೋಗೋದು ಪಕ್ಕಾ ಅಂದಿದ್ಯಾಕೆ ಸುದೀಪ್‌?

ರಿಷಾ (Risha) ಅವರ ಜೊತೆ ಗಿಲ್ಲಿ ಅವರು ಸಖತ್‌ ಗಲಾಟೆ ಮಾಡಿಕೊಂಡಿದ್ದರು. ರಿಷಾ ಅವರ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಬಿಸಾಡಿ, ಬಳಿಕ ಅದೇ ರಿಷಾ ಅವರಿಗೆ ಕೋಪ ಬಂದು ಗಿಲ್ಲಿಗೆ (Gilli) ಹೊಡೆಯುತ್ತಾರೆ. ಆ ವಿಚಾರದ ಬಗ್ಗೆಯೂ ಸುದೀಪ್‌ ಮಾತನಾಡಿದ್ದಾರೆ. ಮೊದಲಿಗೆ ಕಿಚ್ಚ ಅವರಿಗೆ ಗಿಲ್ಲಿ ಅಂದರೆ ಖುಷಿ. ಆದರೀಗ ಗಿಲ್ಲಿಗೆ ಎರಡು ಬಾರಿ ಸುದೀಪ್‌ (Sudeep) ಅವರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹೀಗೆ ಮುಂದುವರಿದರೆ ಮನೆಗೆ ಹೋಗೋದು ಪಕ್ಕಾ ಅಂತ ನೇರವಾಗಿಯೇ ಹೇಳಿದ್ದಾರೆ.

Gilli Bigg Boss Kannada 12

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಮೊದಲ ಕಿಚ್ಚನ ಚಪ್ಪಾಳೆ (Kichchana Chappale) ಪಡೆದುಕೊಂಡಿದ್ದೇ ಗಿಲ್ಲಿ. ಮೊದ ಮೊದಲಿಗೆ ಕಿಚ್ಚ ಅವರಿಗೆ ಗಿಲ್ಲಿ ಅಂದರೆ ಖುಷಿ. ಆದರೀಗ ಗಿಲ್ಲಿಗೆ ಎರಡು ಬಾರಿ ಸುದೀಪ್‌ (Sudeep) ಅವರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹೀಗೆ ಮುಂದುವರಿದರೆ ಮನೆಗೆ ಹೋಗೋದು ಪಕ್ಕಾ ಅಂತ ನೇರವಾಗಿಯೇ ಹೇಳಿದ್ದಾರೆ.

ಟಾಸ್ಕ್‌ನಲ್ಲಿ ಗಂಭೀರತೆ ಇಲ್ಲ!

ಕಿಚ್ಚ ಸುದೀಪ್‌ ಅವರು ಮೊದಲಿಗೆ ಮಾತನಾಡಿ, `ಕಾಮಿಡಿ ಮಾಡೋದು ಸರಿ. ನಿಮ್ಮ ಕಾಮಿಡಿಯೇ ಒಂದು ಸ್ಟ್ರಾಟಜಿ ಇರಬಹುದು. ಆದರೆ ಟಾಸ್ಕ್‌ ಹಾಳಾಗುವಂತೆ ಗಂಭೀರತೆ ಇಲ್ಲದೇ ಇರಬಾರದು. ಟಾಸ್ಕ್‌ಗೆ ಹಾಗೇ ಬೇರೆಯವರು ಟಾಸ್ಕ್‌ ಆಡುವಾಗ ನಮ್ಮ ಕಾಮಿಡಿ ತೊಂದರೆ ಕೊಡಬಾರದು' ಎಂದರು.

ಇದನ್ನೂ ಓದಿ: Mahanati Winner: ವಂಶಿ ಮುಡಿಗೇರಿದ ಮಹಾನಟಿ ಕಿರೀಟ! ವಿಜೇತೆಗೆ ಸಿಕ್ಕ ಬಹುಮಾನ ಏನು?

ಬಜ್ಜಿ ಟಾಸ್ಕ್‌ ವೇಳೆ ಗಿಲ್ಲಿ ಅವರು ನಿಯಮಗಳನ್ನ ಫಾಲೋ ಮಾಡಿಲ್ಲ. ಹೀಗಾಗಿ ಕಿಚ್ಚ ಅವರು ಈ ಬಗ್ಗೆ ವಾರ್ನ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಹೀಗೆ ಮುಂದುವರಿಸಿಕೊಂಡು ಬಂದರೆ ವೇದಿಕೆ ಮೇಲೆ ಇರುತ್ತೀರಾ ಎಂದು ಸುದೀಪ್‌ ಹೇಳಿದ್ದಾರೆ.



ಬಟ್ಟೆಯ ವಿಚಾರ

ರಿಷಾ ಅವರ ಜೊತೆ ಗಿಲ್ಲಿ ಅವರು ಸಖತ್‌ ಗಲಾಟೆ ಮಾಡಿಕೊಂಡಿದ್ದರು. ರಿಷಾ ಅವರ ಬಟ್ಟೆಗಳನ್ನು ಬಾತ್‌ರೂಮ್‌ನಲ್ಲಿ ಬಿಸಾಡಿ, ಬಳಿಕ ಅದೇ ರಿಷಾ ಅವರಿಗೆ ಕೋಪ ಬಂದು ಗಿಲ್ಲಿಗೆ ಹೊಡೆಯುತ್ತಾರೆ. ಆ ವಿಚಾರದ ಬಗ್ಗೆಯೂ ಸುದೀಪ್‌ ಮಾತನಾಡಿದ್ದಾರೆ.

ಸುದೀಪ್‌ ಮಾತನಾಡಿ, `ರಿಷಾ ಎಷ್ಟು ತಪ್ಪು ಮಾಡಿದ್ರೋ ಅಷ್ಟೇ ತಪ್ಪು ಗಿಲ್ಲಿಯದ್ದೂ ಆಗಿದೆ. ನಾವು ಕೂಡ ಮನೆಯಲ್ಲಿ ಹೆಣ್ಣು ಮಕ್ಕಳ ಜೊತೆ ಬೆಳೆದುಕೊಂಡೇ ಬಂದದ್ದು. ಅವರದ್ದೇ ಆದ ಪ್ರೈವಿಸಿ ಇರತ್ತೆ. ನಾವು ಕೂಡ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆಗಳನ್ನು ಮುಟ್ಟುವುದಿಲ್ಲ. ಅಧಿಕಾರ ನಮಗಿಲ್ಲʼ ಎಂದರು.

ಚಂದ್ರಪ್ರಭ ಔಟ್‌

ಇನ್ನು ಈ ವಾರ ಚಂದ್ರಪ್ರಭ ಅವರು ಮನೆಯಿಂದ ಔಟ್‌ ಆಗಿದ್ದಾರೆ. ಇನ್ನು ಸ್ಪರ್ಧಿಗಳು ಒಮ್ಮತ ನಿರ್ಧಾರ ಮಾಡಿ, ರಿಷಾ ಅವರನ್ನು ಸೇಫ್‌ ಮಾಡಿದ್ದಾರೆ. ಬಳಿಕ ಉಳಿದುಕೊಂಡಿದ್ದು, ಕಾಕ್ರೋಚ್‌ ಸುಧಿ ಹಾಗೂ ಚಂದ್ರಪ್ರಭ ಅವರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್​​ಬಾಸ್ ಮನೆಯಲ್ಲೇ ಉಳಿದುಕೊಂಡರು.

ಇದನ್ನೂ ಓದಿ: Bigg Boss Kannada 12: ಡಮಾಲ್ ಡುಮಲ್ ಡಕ್ಕಾ, ಈ ಇಬ್ಬರು ಹೊರ ಹೋಗೋದು ಪಕ್ಕಾ?

ಚಂದ್ರಪ್ರಭ ಅವರು ಬೇಸರದಲ್ಲೇ ಇದ್ದರು. ಬಿಗ್​​ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಅದಕ್ಕೂ ಮುಂಚೆ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂಬ ಬಿರುದನ್ನು ಧನುಷ್‌ ನೀಡಿದರು. ಅದು ಸಹ ಅವರಿಗೆ ಬಹಳ ಬೇಸರ ತರಿಸಿತು ಎನ್ನಲಾಗುತ್ತಿದೆ. ಅಂತಿಮವಾಗಿ, ಸುಧಿ ತಮ್ಮ ಇಮ್ಯೂನಿಟಿಯನ್ನು ಬಳಸಿಕೊಂಡಿದ್ದರಿಂದ ಚಂದ್ರಪ್ರಭ ಎಲಿಮಿನೇಟ್ ಆದರು.

Yashaswi Devadiga

View all posts by this author