ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬನಿಯನ್ನೇ ಹಾಕ್ಕೊಂಡು ಇದ್ರು ಬದುಕುತ್ತಿರುವುದು ರಾಜನ ರೀತಿ! ಗಿಲ್ಲಿ ಗುಟ್ಟು ರಿವೀಲ್‌ ಮಾಡಿದ ಕಿಚ್ಚ

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಈ ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ನಾಮಿನೇಶನ್‌ ವೇಳೆ ಕಾವ್ಯ ಅವರ ಬಗ್ಗೆ ಪಕ್ಷಪಾತ ಮಾಡಿರೋ ಬಗ್ಗೆಯೂ ಚರ್ಚಿಸಿದ್ದಾರೆ. ಗಿಲ್ಲಿ ರೀತಿ ಯಾರು ಕೂಡ ಬಿಗ್‌ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ ಎಂದೂ ಹೇಳಿದ್ದಾರೆ. ಕ್ಯಾಪ್ಟೆನ್ಸಿ ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್​​ಗಳಾಗಿದ್ದಾಗ ಗಿಲ್ಲಿಯ ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆಯೂ ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಈ ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ (Sudeep) ಅವರು ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ನಾಮಿನೇಶನ್‌ ವೇಳೆ ಕಾವ್ಯ ಅವರ ಬಗ್ಗೆ ಪಕ್ಷಪಾತ ಮಾಡಿರೋ ಬಗ್ಗೆಯೂ ಚರ್ಚಿಸಿದ್ದಾರೆ. ಗಿಲ್ಲಿ ರೀತಿ ಯಾರು ಕೂಡ ಬಿಗ್‌ಬಾಸ್ ಆಟ ಅರ್ಥ ಮಾಡಿಕೊಂಡಿಲ್ಲ ಎಂದೂ ಹೇಳಿದ್ದಾರೆ. ಕ್ಯಾಪ್ಟೆನ್ಸಿ (Captaincy) ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್​​ಗಳಾಗಿದ್ದಾಗ ಗಿಲ್ಲಿಯ (Gilli) ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆಯೂ ಹೇಳಿದ್ದಾರೆ.

ಬಿಗ್‌ ಬಾಸ್‌ ಆಟವೇ ಅರ್ಥ ಆಗಿಲ್ಲ

ಬೇರೆಯವರು ಕ್ಯಾಪ್ಟನ್‌ ಆಗಿದ್ದಾಗ, ಗಿಲ್ಲಿ ಅವರು ಸಖತ್‌ ಕ್ವಾಟ್ಲೆ ಕೊಟ್ಟಿದ್ದರು. ಅದರಲ್ಲೂ ರಘು ಕ್ಯಾಪ್ಟನ್ಸಿಯಲ್ಲಿ ಸಿಕ್ಕಾಪಟ್ಟೆ ತೊಂದರೆ ಕೊಟ್ಟಿದ್ದರು. ಆದರೀಗ ಗಿಲ್ಲಿ ಕ್ಯಪ್ಟನ್ಸಿಯಲ್ಲಿ ಇಡಿ ಮನೆ ಸರಾಗವಾಗಿ ಹೋಗಿದೆ. ಯಾವುದೇ ತೊಂದರೆ ತೊಡುಕುಗಳಿಲ್ಲದೇ ಮನೆಯಲ್ಲಿ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಮಿನೇಶನ್‌ ವೇಳೆಯೂ ಕಾವ್ಯ ಅವರ ಬಗ್ಗೆ ಫೇವರಿಸಮ್‌ ಮಾಡಿದ್ದರೂ ಗಿಲ್ಲಿಗೆ ಯಾರೊಬ್ಬರು ಪ್ರಶ್ನೆ ಹಾಕಿರಲಿಲ್ಲ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಥರ ನೂರು ಶತ್ರು ಇದ್ದರೂ ಓಕೆ, ರಘು ಥರ ಒಬ್ಬ ಸ್ನೇಹಿತನೂ ಬೇಡ; ಗಿಲ್ಲಿ ಫ್ಯಾನ್ಸ್‌ ಬೇಸರ

ನಾಮಿನೇಷನ್ ವೇಳೆ ಯಾಕೆ ಗಿಲ್ಲಿಯನ್ನು ಕೇಳಲಿಲ್ಲ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಾದ ಮಾಡುವ ಸಮಯದಲ್ಲಿ ಯಾಕೆ ಮಾಡಲಿಲ್ಲ ಎಂದು ಬೇರೆ ಸ್ಪರ್ಧಿಗಳನ್ನು ಕೇಳಿದ್ದಾರೆ. ಆ ಮೂಲಕ ಗಿಲ್ಲಿ ಮಾತ್ರವಲ್ಲ ಎಲ್ಲರೂ ಮಾಡಿದ್ದು ತಪ್ಪು ಎಂದು ಸುದೀಪ್ ಹೇಳಿದ್ದಾರೆ.

ಕಾರಣವನ್ನು ತಿಳಿಸಿ ಎಎಂದ ಕಿಚ್ಚ

ಇನ್ನು ಕಾವ್ಯ ಬಗ್ಗೆ ೫ ಕಾರಣಗಳನ್ನು ಹೇಳಿ ಅಂತ ಸ್ವತಃ ಕಿಚ್ಚ ಅವರೇ ಗಿಲ್ಲಿ ಅವರನ್ನ ಕೇಳಿದ್ದರು. ಒಂದು ವೇಳೆ ಈಗ 3 ಕಾರಣ ನೀವು ಕೊಟ್ಟಿದ್ದರೆ ನೀವು ಸರಿ, ಉಳಿದರೆಲ್ಲಾ ತಪ್ಪು ಎನ್ನುವುದು ಸಾಬೀತಾಗುತ್ತಿತ್ತು" ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೂ ಗಿಲ್ಲಿ ಪ್ರತಿಕ್ರಿಯಿಸಲಿಲ್ಲ. ಫಿನಾಲೆಗೆ ಎರಡು ವಾರ ಇರುವಾಗ ಇದು ಸರಿಯಲ್ಲ ಎಂದು ಎಲ್ಲರಿಗೂ ಚಾಟಿ ಬೀಸಿದ್ದಾರೆ. ಗಿಲ್ಲಿ ಮಾಡಿದ್ದು ತಪ್ಪಲ್ಲ, ಅದು ಅವರಿಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿದ್ದಾರೆ.

ವೈರಲ್‌ ವಿಡಿಯೊ



ಬನಿಯನ್ನೇ ಹಾಕ್ಕೊಂಡು ಇದ್ರು ಬದುಕುತ್ತಿರುವುದು ರಾಜನ ರೀತಿ!

ಇದಾದ ಬಳಿಕ ಗಿಲ್ಲಿ ಅವರಿಗೆ ಕಿಚ್ಚ, ಎಷ್ಟು ಬಿಗ್​​ಬಾಸ್ ಸೀಸನ್ ನೋಡಿಕೊಂಡು ಬಂದಿದ್ದೀರಿ ಎಂದು ಕೇಳಿದ್ದಾರೆ. ನಾನು ಪ್ರತಿಯೊಂದು ಸೀಸನ್ನಿನ ಪ್ರತಿಯೊಂದು ಎಪಿಸೋಡ್ ನೋಡಿದ್ದೀನಿ ಎಂದರು. ಹನುಮಂತು, ಮತ್ತು ಡ್ರೋನ್ ಪ್ರತಾಪ್ ಇದ್ದ ಸೀಸನ್‌ ಎಂದಿದ್ದಾರೆ.

ಗಿಲ್ಲಿ, ಸ್ವಲ್ಪ ಹನುಮಂತು, ಸ್ವಲ್ಪ ಪ್ರತಾಪ್ ಅವರ ವ್ಯಕ್ತಿತ್ವವನ್ನು, ಆಟದ ರೀತಿಯಲ್ಲಿ ಇಲ್ಲಿ ತೋರಿಸುತ್ತಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ. ಅದು ತಪ್ಪು ಅಲ್ಲ ಎಂದಿದ್ದಾರೆ. ಗಿಲ್ಲಿ ಹಾಕುತ್ತಿರುವುದು ಬನಿಯನ್ನೇ ಆಗಿರಬಹುದು ಆದರೆ ಬದುಕುತ್ತಿರುವುದು ರಾಜನ ರೀತಿ ಎಂದಿದ್ದಾರೆ. ಗಿಲ್ಲಿ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ನೀವೆಲ್ಲಾ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ವ್ಯತ್ಯಾಸ ಇದೆ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಪಕ್ಕ ಹೋಗಿ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ; ನಿಮಗಂತೂ ಪಕ್ಕಾ ಉರಿಯತ್ತೆ ಎಂದ ಕಿಚ್ಚ!

ಹಾಗೆ ಕೊನೆಯಲ್ಲಿ ಅಶ್ವಿನಿ ಅವರು ಸೇಫ್‌ ಎಂದಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

Yashaswi Devadiga

View all posts by this author