ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಪಕ್ಕ ಹೋಗಿ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ; ನಿಮಗಂತೂ ಪಕ್ಕಾ ಉರಿಯತ್ತೆ ಎಂದ ಕಿಚ್ಚ!

Rakshitha: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ನಟ ಸಖತ್‌ ಹೈಲೈಟ್‌ ಆಗಿರೋ ಜೋಡಿ. ಆದರೆ ಈ ವೀಕೆಂಡ್‌ನಲ್ಲಿ ಗಿಲ್ಲಿ ಮಾಡಿದ ನಾಮಿನೇಶನ್‌ ಎಡವಟ್ಟಿಗೆ ಕಿಚ್ಚ ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾರೆ. ಇದೆಲ್ಲದರ ಹೊರತಾಗಿ ಗಿಲ್ಲಿ ಮೇಲೆ ರಕ್ಷಿತಾಗೆ ಪಾಸೆಸಿವ್‌ನೆಸ್‌ ಇರೋದು ಗೊತ್ತೇ ಇರುವ ವಿಚಾರ. ಸಾಕಷ್ಟು ಬಾರಿ ತೋರಿಸಿಕೊಂಡಿದ್ದಾರೆ. ಇದೀಗ ಕಿಚ್ಚ ಅವರೇ ಈ ಬಗ್ಗೆ ರಕ್ಷಿತಾಗೆ ಪರೋಕ್ಷವಾಗಿ ಹೇಳಿದ್ದಾರೆ.

ಗಿಲ್ಲಿ ಪಕ್ಕ ಕಾವ್ಯಾ ಕೂರ್ತಾರೆ ಎಂದ ರಕ್ಷಿತಾ! ಕಿಚ್ಚ ರಿಯಾಕ್ಷನ್‌ ಏನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 4, 2026 7:38 AM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಕಾವ್ಯ (Kavya Shaiva) ಹಾಗೂ ಗಿಲ್ಲಿ ನಟ (Gilli Nata) ಸಖತ್‌ ಹೈಲೈಟ್‌ ಆಗಿರೋ ಜೋಡಿ. ಆದರೆ ಈ ವೀಕೆಂಡ್‌ನಲ್ಲಿ ಗಿಲ್ಲಿ ಮಾಡಿದ ನಾಮಿನೇಶನ್‌ ಎಡವಟ್ಟಿಗೆ ಕಿಚ್ಚ ಕ್ಲಾಸ್‌ ಕೂಡ ತೆಗೆದುಕೊಂಡಿದ್ದಾರೆ. ಇದೆಲ್ಲದರ ಹೊರತಾಗಿ ಗಿಲ್ಲಿ ಮೇಲೆ ರಕ್ಷಿತಾಗೆ (Rakshitha Shetty) ಪಾಸೆಸಿವ್‌ನೆಸ್‌ ಇರೋದು ಗೊತ್ತೇ ಇರುವ ವಿಚಾರ. ಸಾಕಷ್ಟು ಬಾರಿ ತೋರಿಸಿಕೊಂಡಿದ್ದಾರೆ. ಇದೀಗ ಕಿಚ್ಚ (Sudeep) ಅವರೇ ಈ ಬಗ್ಗೆ ರಕ್ಷಿತಾಗೆ ಪರೋಕ್ಷವಾಗಿ ಹೇಳಿದ್ದಾರೆ.

ಬ್ರಾಸ್‌ಲೈಟ್‌ ಕುರಿತು ಚರ್ಚೆ

ಫ್ಯಾಮಿಲಿ ವೀಕ್‌ ಸಂದರ್ಭದಲ್ಲಿ ಕಾವ್ಯ ಅವರ ತಂದೆ ತಾಯಿ ಗಿಲ್ಲಿ ಅವರಿಗೆ ಬೆಳ್ಳಿಯ ಬ್ರಾಸ್‌ಲೈಟ್‌ ಹಾಕಿದರು. ಯಾವಾಗಲೂ ರಘು ಅವರ ಬ್ರಾಸ್‌ಲೈಟ್‌ನ್ನು ಗಿಲ್ಲಿ ತಗೊಂಡು ಹಾಕುತ್ತಿದ್ದರು. ಅದರಂತೆ ಈಗ ಗಿಲ್ಲಿಗೆ ಬ್ರಾಸ್‌ಲೈಟ್‌ ಗಿಫ್ಟ್‌ ಆಗಿ ಸಿಕ್ಕಿತ್ತು. ಸೂಪರ್‌ ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಇದನ್ನೂ ಓದಿ: Bigg Boss Kannada 12: ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು! ಮನಸಾಕ್ಷಿ ಬಗ್ಗೆ ಅಶ್ವಿನಿ ಮಾತು; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ

ವೈರಲ್‌ ವಿಡಿಯೊ



ನಿಮಗಂತೂ ಸ್ವಲ್ಪ ಉರಿಯತ್ತೆ

ಏನು ಅನ್ನಿಸಿತ್ತು ಆ ಸಂದರ್ಭದಲ್ಲಿ ಅಂತ ಕಿಚ್ಚ ಅವರು ಗಿಲ್ಲಿಗೆ ಕೇಳಿದ್ದಾರೆ. ಬ್ರಾಸ್‌ಲೈಟ್‌ ತಂದುಕೊಡೋದು ನಮ್ಮನೆ ಸಂಪ್ರದಾಯ. ಹಾಗೆ ಮಾಡಿದರೆ ನಿಶ್ಚಿತಾರ್ಥ ಆಗೋಯ್ತು” ಎಂದು ಗಿಲ್ಲಿ ನಟ ಹೇಳಿದ್ದಾರೆ. ಆಗ ಕಾವ್ಯ ಶೈವ ಅವರು, “ನಮ್ಮನೆ ಕಡೆ ರಿಂಗ್‌ ಕೊಡೋದು ನಿಶ್ಚಿತಾರ್ಥ” ಎಂದಿದ್ದಾರೆ. ರಕ್ಷಿತಾ ಅವರು, “ಅವರು ಗಿಲ್ಲಿ, ಗಿಲ್ಲಿ ಹೇಳ್ತಾರೆ. ಆಮೇಲೆ ಗಿಲ್ಲಿ ಪಕ್ಕ ಹೋಗಿ ಕೂರ್ತಾರೆ” ಎಂದಿದ್ದಾರೆ. ಆಗ ಸುದೀಪ್‌ ಅವರು, “ಇದನ್ನೆಲ್ಲ ಕಾವ್ಯ ಎಂಜಾಯ್‌ ಮಾಡುತ್ತಾರೋ ಇಲ್ಲವೋ ನಿಮಗಂತೂ ಸ್ವಲ್ಪ ಉರಿಯತ್ತೆ. ಕಾವ್ಯ ಅವರನ್ನು ಹೇಗಾದರೂ ಕಳಿಸಿದರೆ, ನೀವು ಅವರ ಪಕ್ಕ ಕೂರಬಹುದು” ಎಂದು ಹೇಳಿದ್ದಾರೆ.

ಬಹಿರಂಗವಾಗಿ ಪಕ್ಷಪಾತ

ಗಿಲ್ಲಿಗೆ ಕಾವ್ಯಾ ಜೊತೆಗೆ ಬಹಳ ಆಪ್ತ ಗೆಳೆತನ ಇದೆ. ಗಿಲ್ಲಿ, ಸದಾ ಕಾವ್ಯಾ ಪರ ನಿಲ್ಲುತ್ತಾರೆ. ಕಳೆದ ವಾರ ನಡೆದ ಟಾಸ್ಕ್ ಒಂದರಲ್ಲಿ ಸಹ ಕಾವ್ಯಾ, ಟಾಸ್ಕ್​​ನಲ್ಲಿ ಸೋತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಸಹ ಗಿಲ್ಲಿ, ಕಾವ್ಯಾ ಗೆದ್ದಿದ್ದಾಳೆ ಎಂದು ವಾದಿಸಿದ್ದರು. ಇನ್ನು ನಾಮಿನೇಷನ್​​ನಲ್ಲಂತೂ ಗಿಲ್ಲಿ ಬಹಿರಂಗವಾಗಿ ಪಕ್ಷಪಾತ ಮಾಡಿದರು.

ಪಕ್ಷಪಾತ ಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಗಿಲ್ಲಿ, ಅದನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಪ್ರಯತ್ನ ಸುದೀಪ್ ಅವರಿಗೆ ಹಿಡಿಸಲಿಲ್ಲ. ಎರಡು ಕಾರಣ ಕೊಡು ನೋಡೋಣ ಎಂದರು. ಆದರೆ ಗಿಲ್ಲಿಗೆ ಅಲ್ಲಿ ಮಾತೇ ಹೊರಳಲಿಲ್ಲ. ಕಾವ್ಯಾರನ್ನು ನಾಮಿನೇಟ್ ಮಾಡಲು ಕೇವಲ ಒಂದು ಕಾರಣವನ್ನೂ ಸಹ ಗಿಲ್ಲಿಗೆ ನೀಡಲಾಗಲಿಲ್ಲ.

ಇದನ್ನೂ ಓದಿ: Bigg Boss Kannada 12: ಅಧಿಕಾರ ಕೊಟ್ಟಾಗ, ನಮ್ಮಲ್ಲಿರೋ ಅಹಂಕಾರ ಹೇಗೆ ಹೊರಗೆ ಬರತ್ತೆ ಅನ್ನೋದಕ್ಕೆ ಗಿಲ್ಲಿನೇ ಸಾಕ್ಷಿ ಎಂದ ಅಶ್ವಿನಿ!

ಆದರೆ ಸುದೀಪ್​ ಬೇಸರ ವ್ಯಕ್ತಪಡಿಸಿದ್ದು, ಇಡೀ ಮನೆಯ ಸದಸ್ಯರು ನಾಮಿನೇಷನ್ ಅನ್ನು ಲಘುವಾಗಿ ಪರಿಗಣಿಸಿರುವ ರೀತಿಗೆ. ಫಿನಾಲೆ ವಾರಕ್ಕೆ ಹತ್ತಿರದಲ್ಲಿರುವಾಗಲೂ ಸಹ ಮನೆ ಮಂದಿ ನಾಮಿನೇಷನ್ ಅನ್ನು ಸಿಲ್ಲಿಯಾಗಿ ಪರಿಗಣಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.