ಬಿಗ್ ಬಾಸ್ (Bigg Boss Kannada 12) ಮನೆ ಈಗ ವಿಲನ್ ಮನೆ ಆಗಿದೆ. ವಿಲನ್ ಕಠಿಣ ಟಾಸ್ಕ್ ನೀಡುತ್ತಿದ್ದಾರೆ. ಈಗಾಗಲೇ ರಜತ್ ಮತ್ತು ಅಶ್ವಿನಿ ಗೌಡ (Ashwini Gowda) ಅವರಿಗೆ ವಿಲನ್ ಒಂದು ಚಾಲೆಂಜ್ ನೀಡಿದರು. ಆ ಚಾಲೆಂಜ್ ಕಂಪ್ಲೀಟ್ ಮಾಡಿದರೆ ಪಾಂಯಿಟ್ಸ್ ಸಿಗುತ್ತದೆ. ನಿನ್ನೆ ಕಾವ್ಯ (Kavya Shaiva) ಅವರಿಗೆ ಕೂದಲಿಗೆ ಬಣ್ಣ ಹಾಕಿಸಿಕೊಂಡರೆ, ರಜತ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಮಾಳು (Malu) ಸರದಿ. ಹೊಸ ಪ್ರೋಮೋ ಔಟ್ ಆಗಿದೆ.
ಮಾಳು ಲುಕ್ ಚೇಂಜ್!
ಇದೀಗ ವಿಲನ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಚಿತ್ರದಲ್ಲಿ ತೋರಿಸುವಂತೆ ಹೇರ್ ಸ್ಟೈಲ್ ಮಾಡಿಸಿಕೊಳ್ಳಬೇಕಿದೆ.ಈ ವೇಳೆ ಗಿಲ್ಲಿ ಸಖತ್ ಉರಿಸಿದ್ದಾರೆ. ಮಾಳು ಅವರನ್ನ ನೋಡಿ ಸಖತ್ ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ. ಮಾಳು ಅವರು ಫೋಟೋ ಏನಾದರೂ ಮುಂಚೆ ನೋಡಿದ್ದರೆ ಸತ್ಯ ಒಪ್ತಾ ಇರಲಿಲ್ಲ. ತುಂಬಾ ಕೂದಲು ಉದ್ದ ಇರೋರು ಇದ್ರು ಅಂತ ಧ್ರುವಂತ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್! ಗಿಲ್ಲಿ -ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಈಗ 73 ದಿನಗಳು ಕಳೆದಿವೆ. ಗಿಲ್ಲಿ ನಟ ಅವರು ಸಖತ್ ಮಿಂಚುತ್ತಿದ್ದಾರೆ. ಈ ಬಾರಿ ಅವರೇ ಗೆಲ್ಲುವುದು ಎಂದು ವೀಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಇನ್ನು ಮನೆಯಲ್ಲಿ ಎರಡು ಗುಂಪಾಗಿದೆ. ಒಂದು ರಜತ್ ಟೀಂನಲ್ಲಿ ಧನುಷ್, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದರೆ, ಉಳಿದವರು ಅಶ್ವಿನಿ ಟೀಂ.
ಕಲರ್ಸ್ ಕನ್ನಡ ಪ್ರೋಮೋ
ನಿನ್ನೆಯ ಎಪಿಸೋಡ್‌ನಲ್ಲಿ ರಜತ್ ಅವರು ಟ್ಯಾಟು ಹಾಕಿಸಿಕೊಂಡಿದ್ದರು. ‘ನಾನು ತರಬೇತಿ ಪಡೆದ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ’ ಎಂದು ಬರೆದುಕೊಟ್ಟು ರಜತ್ ಅವರು ಸಹಿ ಮಾಡಿದ್ದಾರೆ.
ಬಿಗ್ ಬಾಸ್ ಶೋ ಸ್ಮರಣೀಯವಾಗಿದೆ. ಅದನ್ನು ಈ ಟ್ಯಾಟೂ ಮೂಲಕ ಶಾಶ್ವತವಾಗಿ ಇರಿಸಲು ಅವರು ತೀರ್ಮಾನಿಸಿದರು. ಭುಜದ ಮೇಲೆ ರಜತ್ ಅವರು ಬಿಗ್ ಬಾಸ್ ಲೋಗೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ವಿಲನ್ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!
‘ಬಿಗ್ ಬಾಸ್’ ಮನೆಯಿಂದ ಆಚೆ ಹೋಗಲು ಈ ವಾರ ರಜತ್, ಗಿಲ್ಲಿ, ಧ್ರುವಂತ್, ರಕ್ಷಿತಾ, ಸ್ಪಂದನಾ, ಅಶ್ವಿನಿ, ರಾಶಿಕಾ ನಾಮಿನೇಟ್ ಆಗಿದ್ದಾರೆ. ಈ ಏಳು ಮಂದಿ ಪೈಕಿ ಯಾರು ಔಟ್ ಆಗುತ್ತಾರೋ ಕಾದು ನೋಡಬೇಕಿದೆ.