Bigg Boss Kannada 12: ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್! ಗಿಲ್ಲಿ -ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್
Gilli Nata: ಬಿಗ್ ಬಾಸ್‌ನಲ್ಲಿ ನಿನ್ನೆ (ಡಿ. 9) ನಾಮಿನೇಶನ್ ಪ್ರಕ್ರಿಯೆ ನಡೆದಿತ್ತು. ಸ್ಪರ್ಧಿಗಳ ಮಧ್ಯೆ ವಾದ ವಿವಾದಗಳು ನಡೆದಿವೆ. ಮಾರಾಮಾರಿನೂ ಆಗಿದೆ. ವಿಶೇಷ ಅಂದರೆ ಗಿಲ್ಲಿ ಅವರನ್ನು ಕಾವ್ಯ ನಾಮಿನೇಟ್ ಕೂಡ ಮಾಡಿದ್ದಾರೆ. ಗಿಲ್ಲಿ ಹಾಗೂ ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್ನಿಂದ ಗಿಲ್ಲಿ ಮತ್ತು ಅಶ್ವಿನಿಗೆ ಕ್ಯಾಪ್ಟನ್ಸಿ ಅವಕಾಶ ನೀಡಲಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್‌ನಲ್ಲಿ (Bigg Boss Kannada 12) ನಿನ್ನೆ (ಡಿ. 9) ನಾಮಿನೇಶನ್ ಪ್ರಕ್ರಿಯೆ ನಡೆದಿತ್ತು. ಸ್ಪರ್ಧಿಗಳ ಮಧ್ಯೆ ವಾದ ವಿವಾದಗಳು ನಡೆದಿವೆ. ಮಾರಾಮಾರಿನೂ ಆಗಿದೆ. ವಿಶೇಷ ಅಂದರೆ ಗಿಲ್ಲಿ ಅವರನ್ನು ಕಾವ್ಯ (Kavya) ನಾಮಿನೇಟ್ ಕೂಡ ಮಾಡಿದ್ದಾರೆ. ಗಿಲ್ಲಿ ಹಾಗೂ ಕಾವ್ಯಾ ಗೆಳೆತನಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್ನಿಂದ ಗಿಲ್ಲಿ ಮತ್ತು ಅಶ್ವಿನಿಗೆ ಕ್ಯಾಪ್ಟನ್ಸಿ ಅವಕಾಶ ನೀಡಲಿದೆ. ಆದರೆ, ಕಾವ್ಯಾನ ಅಳಿಸುವ ಈ ಟಾಸ್ಕ್ ಫ್ರೆಂಡ್‌ಶಿಪ್ (Friendship) ಮಧ್ಯೆ ಬಿರುಕು ಮೂಡುತ್ತಾ ಅನ್ನೋದೇ ವೀಕ್ಷರಲ್ಲಿ ಇರೋ ಕುತೂಹಲ.
ಇಷ್ಟೂ ದಿನ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಾವ್ಯ ಹಾಗೂ ಗಿಲ್ಲಿ ಗೆಳತೆನ ಬಗ್ಗೆಯೇ ಟಾರ್ಗೆಟ್ ಮಾಡಿ ಹೇಳುತ್ತಿದ್ದರು. ಆದರೆ ಈಗ ವಿಲನ್ ಈ ಟಾಸ್ಕ್ ಕೊಟ್ಟಿದ್ದಾರೆ. ಕಾವ್ಯಾನ ಅಳಿಸೋ ಸಂಚಿಗೆ ಅಶ್ವಿನಿ ಜೊತೆ ಗಿಲ್ಲಿ ಕೈ ಜೋಡಿಸಬೇಕಿದೆ.
ಇದನ್ನೂ ಓದಿ: Bigg Boss Kannada 12: ಕ್ಯಾಪ್ಟನ್ ಆಗ್ತಾರಾ ಚೈತ್ರಾ? ವಿಲನ್ ಡೀಲ್‌ಗೆ ಸ್ಪಂದನ ತತ್ತರ!
ಏನಿದು ರೂಲ್ಸ್?
ವಿಲನ್ ಕಡೆಯಿಂದ ಸೀಕ್ರೆಟ್ ಟಾಸ್ಕ್ ಒಂದು ಸಿಕ್ಕಿದೆ. ಈ ಟಾಸ್ಕ್ ಅನುಸಾರ ಕಾವ್ಯ ಅವರನ್ನು ಅಶ್ವಿನಿ ಹಾಗೂ ಗಿಲ್ಲಿ ಸೇರಿಕೊಂಡು ಅಳಿಸಬೇಕು. ಇಷ್ಟೇ ಅಲ್ಲ, ಕಿಚ್ಚನ ಚಪ್ಪಾಳೆ ಬೋರ್ಡ್ನಲ್ಲಿರುವ ಮೂರು ಬೋರ್ಡ್ಗಳನ್ನು ತಂದು ಸ್ಟೋ ರೂಂನಲ್ಲಿ ಇಡಬೇಕು. ಇದೆಲ್ಲವೂ ರಹಸ್ಯ ಟಾಸ್ಕ್ಗಳನ್ನು ಇದನ್ನು ಪೂರ್ಣಗೊಳಿಸಿದರೆ ಗಿಲ್ಲಿ ಹಾಗೂ ಅಶ್ವಿನಿಗೆ ಕ್ಯಾಪ್ಟನ್ಸಿ ಓಟದಲ್ಲಿ ಅವಕಾಶ ಸಿಗಲಿದೆ.
ಗಿಲ್ಲಿ ಹಾಗೂ ಕಾವ್ಯಾ ಗೆಳೆತನದ ಮಧ್ಯೆ ಸಣ್ಣದಾಗಿ ಬಿರುಕು ಮೂಡುತ್ತಿದೆ. ಈಗ ಗಿಲ್ಲಿ ಅವರು ಕಾವ್ಯಾ ವಿರುದ್ಧ ತಿರುಗಿಬಿದ್ದರೆ ಅವರಿಗೆ ಮತ್ತಷ್ಟು ಬೇಸರ ಆಗಬಹುದು.
ಗೆಳೆತನದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇದೆ. ಈ ಸಂಚು ಮನೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
#BBK12
— Cinema Premi✍🏻 (@karansharmain) December 9, 2025
Who all noticed?
Gilli didn't eat his favourite mutton meal today. He didn't have his dinner.
Just because he made Kavya cry. 🥹
Anna is stealing hearts at a wholesale strike rate. 🫡🫶🏻#BBKSeason12 | #GilliNata pic.twitter.com/jXHLybgOHD
ನಾಮಿನೇಟ್ ಮಾಡಿದ ಕಾವ್ಯ
ಕಾವ್ಯ ಅವರು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನೊಬ್ಬ ಸ್ಪರ್ಧಿ ರಜತ್ ಕಿಶನ್ ಅವರನ್ನು ಕಾವ್ಯ ನಾಮಿನೇಟ್ ಮಾಡಿದ್ದಾರೆ. ರಜತ್, ಅವರು ಕಾವ್ಯ ಜೊತೆ ಕಿತ್ತಾಡಿದ್ದಾರೆ. ಕೊನೆಗೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆಯಾಗಿದೆ.
ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ನನ್ನ ಜರ್ನಿಯಲ್ಲಿ ಯಾರು ಹಾವಾಗಿದ್ದಾರೆ, ಏಣಿಯಾಗಿದ್ದಾರೆ ಎನ್ನೋದನ್ನು ಹೇಳಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಇದನ್ನೂ ಓದಿ: Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್ ಮನವಿ ಮಾಡಿದ್ದೇನು?
ಆಗ ಬಹುತೇಕರು ಗಿಲ್ಲಿಗೆ ಹಾವಿನ ಸ್ಥಾನವನ್ನು ಕೊಟ್ಟಿದ್ದರು. ಕಾವ್ಯ ಕೂಡ ಎರಡೂ ಗಿಲ್ಲಿಗೆ ನೀಡಿದ್ದರು. ಅಷ್ಟೇ ಅಲ್ಲ ಮನೆಯಲ್ಲಿ ರಘು ಅವರು ಗಿಲ್ಲಿ ಬಗ್ಗೆ ಅಸಮಾಧಾನ ಹೊರ ಹಾಕಿದಾಗ, ಕಾವ್ಯ ಅವರು ರಘುಗೆ ಸಾಥ್ ಕೊಟ್ಟರು. ಒಟ್ಟಾರೆಯಾಗಿ ಕಾವ್ಯ ಅವರ ಈ ನಡೆಯ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ ನೆಟ್ಟಿಗರು.