ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಗಿಲ್ಲಿ ನಟನ ಪೋಷಕರಿಗೆ PR ಅಂದ್ರೆ ಗೊತ್ತಿಲ್ಲ, ಅವ್ರು ಹಳ್ಳಿಯ ಮಿಡಲ್‌ ಕ್ಲಾಸ್‌ ಜನʼ; ಸಕಲಕಲಾವಲ್ಲಭನ ಫ್ಯಾಮಿಲಿ ಹಿನ್ನೆಲೆ ಏನ್‌ ಗೊತ್ತಾ?

Bigg Boss 12 contestant Gilli Nata: ಬಿಗ್‌ ಬಾಸ್‌ ಸ್ಪರ್ಧಿ ಗಿಲ್ಲಿ ನಟ ಬಗ್ಗೆ ಕೇಳಿಬರುತ್ತಿರುವ 'ಪಿಆರ್' ಆರೋಪಗಳಿಗೆ ಅವರ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. "ನಮ್ಮದು ಹಳ್ಳಿಯ ರೈತ ಕುಟುಂಬ, ನಮಗೆ ಪಿಆರ್ ಅಂದ್ರೆ ಏನೆಂದೇ ಗೊತ್ತಿಲ್ಲ" ಎಂದು ಸಂಬಂಧಿಕರು ತಿಳಿಸಿದ್ದಾರೆ.

ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಸ್ಪರ್ಧಿ ಎಂದರೆ, ಅದು ಗಿಲ್ಲಿ ನಟ. ಸೋಶಿಯಲ್‌ ಮೀಡಿಯಾ ತುಂಬ ಈಗ ಗಿಲ್ಲಿ ನಟನದ್ದೇ ಹವಾ. ಹೀಗಿರುವಾಗ ಗಿಲ್ಲಿ ಬಗ್ಗೆ ಒಂದು ಆರೋಪ ಕೇಳಿಬಂದಿದೆ. ಹೊರಗಡೆ ಪಿಆರ್‌ ಮಾಡುತ್ತಿದ್ದಾರೆ. ತಮ್ಮ ಪರವಾಗಿ ಅಲೆ ಸೃಷ್ಟಿಯಾಗಲು ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಗಿಲ್ಲಿ ನಟ ಅವರ ಸಂಬಂಧಿಕರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅವರ ಕುಟುಂಬಕ್ಕೆ ಪಿಆರ್‌ ಎಂದರೆ ಏನೆಂಬುದೇ ತಿಳಿದಿಲ್ಲ ಎಂದಿದ್ದಾರೆ.

ಗಿಲ್ಲಿ ಕುಟುಂಬದವರು ಕೃಷಿ ಮಾಡ್ತಾರೆ

"ಗಿಲ್ಲಿ ನಟ ಅವರ ಕುಟುಂಬದವರು ಮಿಡಲ್‌ ಕ್ಲಾಸ್‌ ಜನ. ಅವರ ತಂದೆ ತಾಯಿ ಇಂದಿಗೂ ವ್ಯವಸಾಯ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಹೇಳುವಂತೆ ಪಿಆರ್‌ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಅವರ ತಂದೆ ತಾಯಿಗೆ ಪಿಆರ್‌ ಎಂದರೆ ಯಾರೂ ಎಂದೇ ಗೊತ್ತಿಲ್ಲ. ಗಿಲ್ಲಿ ಕುಟುಂಬದವರು ಈಗಲೂ ಕೃಷಿಯನ್ನೇ ನಂಬಿಕೊಂಡು ಇದ್ದಾರೆ" ಎಂದು ಸಂಬಂಧಿಕರು ಹೇಳಿದ್ದಾರೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಪಿಆರ್‌ ಮಾಡಿಸೋದು ಗೊತ್ತಿಲ್ಲ

"ಗಿಲ್ಲಿ ನಟನಿಗೆ ಯಾವುದೇ ಪಿಆರ್‌ನ ಅವಶ್ಯಕತೆ ಇಲ್ಲ. ಅಲ್ಲದೆ, ಈ ತರ ಪಿಆರ್‌ ನೇಮಕ ಮಾಡಿಕೊಂಡು ಪ್ರಚಾರ ಮಾಡಿಸಿಕೊಳ್ಳುವಂತಹ ಅವರ ಕುಟುಂಬದಲ್ಲಿ ವ್ಯಕ್ತಿಗಳು ಯಾರೂ ಇಲ್ಲ. ಅವರು ಹಳ್ಳಿಯ ಮುಗ್ಧ ಜನ. ಈ ಪಿಆರ್‌ ಮಾಡಿಸೋದು, ಫೇಸ್‌ಬುಕ್‌-ಇನ್‌ಸ್ಟಾಗ್ರಾಮ್‌ನ ಮೇಂಟೇನ್‌ ಮಾಡಿಸೋದು ಎಲ್ಲಾ ಗೊತ್ತಿಲ್ಲ. ಇದ ಸತ್ಯಕ್ಕೆ ದೂರವಾದ ಮಾತು" ಎಂದು ಹೇಳಿದ್ದಾರೆ.

ಚಿಕ್ಕ ವಯಸ್ಸಿಗೆ ಇಷ್ಟೊಂದು ದೊಡ್ಡ ಹೆಸರು

"ನಾನು ತುಂಬಾ ಕಷ್ಟಪಟ್ಟಿದ್ದೀನಿ, ಒಳ್ಳೆಯ ಪ್ಲಾಟ್‌ಫಾರ್ಮ್‌ ಸಿಕ್ಕಿದೆ. ಸಾಧ್ಯವಾದಷ್ಟು ದಿವಸ ಪ್ರಾಮಾಣಿಕತೆಯಿಂದ ಆಡಿಕೊಂಡು ಬರುತ್ತೇನೆ, ಎಲ್ಲಾ ಸಪೋರ್ಟ್‌ ಮಾಡಿ" ಎಂದು ಬಿಗ್‌ ಬಾಸ್‌ ಮನೆಗೆ ಹೋಗುವುದಕ್ಕೂ ಮುನ್ನ ಗಿಲ್ಲಿ ನಟ ಹೇಳಿದ್ದರಂತೆ. "ಇವತ್ತು ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ದೊಡ್ಡಮಟ್ಟಕ್ಕೆ ಹೆಸರು ಮಾಡಿರುವುದು ನಮಗೆಲ್ಲಾ ಹೆಮ್ಮೆ ಇದೆ. ಅವನು ಶೋನಲ್ಲಿ ಗೆದ್ದು ಬರಲಿ" ಎಂದು ಸಂಬಂಧಿಕರು ಹಾರೈಸಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಗಿಲ್ಲಿ ನಟನ ಜರ್ನಿ

ಎಸ್‌ಎಸ್‌ಎಲ್‌ಸಿ ಆದಮೇಲೆ ಕೆಎಂ ದೊಡ್ಡಿಯಲ್ಲಿ ಐಟಿಐಗೆ ಸೇರಿಕೊಳ್ಳುವ ಗಿಲ್ಲಿ ನಟ, 2016ರಲ್ಲಿ ಒಮ್ಮೆ ನಾಟಕವೊಂದರಲ್ಲಿ ನಟಿಸಿದ್ದರು. ಅಂದು ಆ ನಾಟಕದ ತಂಡ ಗಿಲ್ಲಿ ಪ್ರತಿಭೆ ಬಗ್ಗೆ ಅನುಮಾನ ಪಟ್ಟಿತ್ತು. ಆದರೆ ಗಿಲ್ಲಿಯ ಇಂದಿನ ಜರ್ನಿ ಕಂಡವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. "ಬಡವರ ಮಕ್ಕಳು ಬೆಳೆಯಬೇಕು ಎನ್ನುತ್ತಾರೆ. ಆದರೆ ಆತ ಬಡವ ಕೂಡ ಹೌದು, ಜೊತೆಗೆ ಪ್ರತಿಭಾವಂತ. ಆತ ಬೆಳೆಯಬೇಕು ಎಂದು ನಾವೆಲ್ಲಾ ಹಾರೈಸುತ್ತೇವೆ" ಎಂದು ಸಂಬಂಧಿಕರು ಹೇಳಿದ್ದಾರೆ.