ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಹಲವು ಟ್ವಿಸ್ಟ್‌ಗಳಿಂದ ಸಾಗುತ್ತಿದೆ. ಈಗಾಗಲೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ರಜತ್ ಹಾಗೂ ಚೈತ್ರಾ (Rajath and Chaithra) ಬಂದಿದ್ದಾರೆ. ಹೀಗಾಗಿ ಮನೆಯೊಳಗೆ ಈಗಾಗಲೇ ಪೈಪೋಟಿ ಹೆಚ್ಚಾಗಿದೆ. ಕ್ಯಾಪ್ಟನ್ ಧನುಷ್‌ಗೆ ಒಂದು ಟಾಸ್ಕ್ ಅನ್ನು ನೀಡಿತ್ತು. ರಜತ್ ಮತ್ತು ಚೈತ್ರಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಧನುಷ್ (Dhanush) ಅವರು ರ‍್ಯಾಂಕಿಂಗ್ ನೀಡಿದರು. ಕಾವ್ಯ ಶೈವ ಅವರಿಗೆ ಧನುಷ್ ನಂಬರ್ 1 ಸ್ಥಾನ ನೀಡಿದರು. ಹಾಗೇ 11ನೇ ಸ್ಥಾನವನ್ನು ಮಾಳು ಅವರಿಗೆ ನೀಡಿದರು. ಈ ವೇಳೆ ಸ್ಪರ್ಧಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಗಿಲ್ಲಿಗೆ ಎರಡನೇ ಸ್ಥಾನ
ಧನುಷ್ 11ನೇ ಸ್ಥಾನವನ್ನು ಮಾಳುಗೆ ಕೊಟ್ಟರೆ, 9ನೇ ಸ್ಥಾನ ಧ್ರುವಂತ್, 8ನೇ ಸ್ಥಾನ ರಾಶಿಕಾ, 7ನೇ ಸ್ಥಾನ ಸ್ಪಂದನಾ, 6ನೇ ಸ್ಥಾನ ರಘು, 4ನೇ ಸ್ಥಾನ ರಕ್ಷಿತಾ ಶೆಟ್ಟಿ ಹಾಗೂ 3ನೇ ಸ್ಥಾನವನ್ನು ಅಶ್ವಿನಿ ಗೌಡಗೆ ನೀಡಲಾಗಿತ್ತು. ಆದರೆ ಅಶ್ವಿನಿ ಅವರಿಗೆ ಕೂಡ ಇದು ಸರಿ ಎನಿಸಲಿಲ್ಲ. ಹೆಚ್ಚಾಗಿ ಗಿಲ್ಲಿ ಅವರಿಗೆ ಎರಡನೇ ಸ್ಥಾನವನ್ನು ನೀಡಿದ್ದಕ್ಕಾಗಿ ರಘು ಹಾಗೂ ರಕ್ಷಿತಾ ಸೇರಿದಂತೆ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: Bigg Boss Kannada 12: ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?
ಗಿಲ್ಲಿ ಮೇಲೆ ಕೂಗಾಡಿದ ರಘು
ರಘು ಅವರು ಗಿಲ್ಲಿ ಮೈ ಮೇಲೆ ಎಗರಾಡಿದರು. ಅಷ್ಟೇ ಅಲ್ಲ ರಕ್ಷಿತಾ ಕೂಡ ಗಿಲ್ಲಿ ಮೇಲೆ ಕೂಗಾಡಿದ್ದಾರೆ. `ಮನೆ ಕೆಲಸ ಆಗಲಿ ಏನೂ ನಿಭಾಯಿಸಲ್ಲ' ಅಂತ ಗಿಲ್ಲಿ ಬಗ್ಗೆ ರಕ್ಷಿತಾ ಕಾರಣ ಕೊಟ್ಟರು. `ಮನೆಯಲ್ಲಿ ಶುದ್ಧ ಸೋಮಾರಿ ಅವನೇ . ಆದರೆ ಎರಡನೇ ಸ್ಥಾನದಲ್ಲಿ ಇದ್ದಾರೆ' ಅವರು ಅಂತ ರಘು ಕಾರಣ ಕೊಟ್ಟರು. ಇದನ್ನು ಕೇಳಿ ಗಿಲ್ಲಿ ಕೆಂಡ ಆಗಿದ್ದಾರೆ. `ಯಾರೂ ಕೇಳಿದರು ಮನೆಕೆಲಸ ಅಂತ ಕಾರಣ ಕೊಡ್ತಾರೆ. ಏನು ಮನೆ ಕೆಲಸಕ್ಕಾ ನಾನು ಬಂದಿದ್ದು'? ಅಂತ ಕೂಗಾಡಿದ್ದಾರೆ. ಗಿಲ್ಲಿ ಮಾತು ರಘುಗೆ ಇನ್ನಷ್ಟು ಕೆರಳಿಸಿದೆ. ಮಾತನಾಡಬೇಡ ಅಂತ ಗಿಲ್ಲಿ ಮೇಲೆ ಕೂಗಾಡಿದ್ದಾರೆ ರಘು.
ಕಾವ್ಯಾಗೆ ನಂ 1 ಸ್ಥಾನವನ್ನು ಕೊಟ್ಟಿದ್ದರು ಧನುಷ್. ಮನೆ ಮಂದಿಯೆಲ್ಲ ಧನುಷ್ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕಾವ್ಯಾ ನಂ 1 ಆಗಿಬಿಟ್ಟರು ಅನ್ನೋವಾಗಲೇ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಅವರಿಗೆ ಬಿಗ್ ಬಾಸ್ ಒಂದು ಅಧಿಕಾರ ನೀಡಿದರು. ಇಬ್ಬರೂ ಚರ್ಚಿಸಿ ಯಾವುದಾದರೂ ಒಂದು ಸ್ಥಾನವನ್ನು ಅದಲು ಬದಲು ಮಾಡುವಂತೆ ಸೂಚಿಸಲಾಯಿತು.
6ನೇ ಸ್ಥಾನದಲ್ಲಿದ್ದ ರಘು ಮೊದಲನೇ ಸ್ಥಾನ
ಆಗ ಇಬ್ಬರು ಚರ್ಚೆ ಮಾಡಿ 6ನೇ ಸ್ಥಾನದಲ್ಲಿದ್ದ ರಘು ಅವರಿಗೆ ಮೊದಲನೇ ಸ್ಥಾನ ಮತ್ತು ಕಾವ್ಯಾಗೆ 6ನೇ ಸ್ಥಾನಕ್ಕೆ ಕಳುಹಿಸಿದರು.ಇಷ್ಟು ವಾರಗಳ ಕಾಲ ಕಾವ್ಯ ಅವರು ನಾಮಿನೇಷನ್ನಿಂದ ಪಾರಾಗುತ್ತಿದ್ದರು. ಆದರೆ ಈ ವಾರ ಅವರು ಕೆಲವರ ಟಾರ್ಗೆಟ್ ಆಗಿದ್ದಾರೆ. ಕಾವ್ಯ ಮತ್ತು ಗಿಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಅದನ್ನೇ ಕಾರಣವನ್ನಾಗಿ ಇಟ್ಟುಕೊಂಡು ಎಲ್ಲ ಸದಸ್ಯರು ಕಾವ್ಯ ಅವರನ್ನು ಟೀಕಿಸುತ್ತಿದ್ದಾರೆ.
ಇಂದಿನ ಪ್ರೋಮೋದಲ್ಲಿಯೂ ರಾಶಿಕಾ ಅವರು ಗಿಲ್ಲಿ ಹಾಗೂ ಕಾವ್ಯ ಫ್ರೆಂಡ್‌ಶಿಪ್ ಬಗ್ಗೆಯೇ ಟಾಂಗ್ ಕೊಟ್ಟಿದ್ದಾರೆ.