Bigg Boss Kannada 12: ಗಿಲ್ಲಿ ಕಾಮಿಡಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ರಜತ್; ʻಬುಜ್ಜಿʼ ಸಪೋರ್ಟ್‌ಗೆ ಮನಸಾರೆ ಹೊಗಳಿದ ಮಾತಿನ ಮಲ್ಲ!
Gilli Nata: ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗಿಲ್ಲಿ-ಕಾವ್ಯ ಜೋಡಿ ಕಳಪೆ ಪ್ರದರ್ಶನ ತೋರಿತ್ತು. ಆಟ ಆಡುವಾಗಲೇ ಜೋಡಿ ಎಡವಿತ್ತು. ವಿಚಿತ್ರ ಅಂದರೆ ರಜತ್ ಅವರೇ ಎಷ್ಟೋ ಬಾರಿ ಗಿಲ್ಲಿ ಜೋಡಿಗೆ ಗೈಡ್ ಮಾಡ್ತಾನೆ ಇದ್ದರು. ಸೋತ ಬಳಿಕ ರಜತ್ ಅವರು ಒಂದಲ್ಲ ಒಂದು ದಿನ ಗೆಲ್ಲಬೇಕು ಒಳ್ಳೆತನ ಅಂದಿದ್ದಾರೆ. ಅಷ್ಟೇ ಅಲ್ಲ ಸ್ಪಂದನಾ ಅವರು ಗಿಲ್ಲಿ ಜೋಡಿ ಬಗ್ಗೆ ವ್ಯಂಗ್ಯ ಮಾಡಿದ ಬಳಿಕ ಗಿಲ್ಲಿ-ಕಾವ್ಯ ಚರ್ಚಿಸಿದ್ದಾರೆ. ಆ ವೇಳೆ ಗಿಲ್ಲಿ, ಬುಜ್ಜಿಯನ್ನ ಹೊಗಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಟಾಸ್ಕ್ ಹೊರತುಪಡಿಸಿ ಕೆಲವು ಸ್ಪರ್ಧಿಗಳ ಮಧ್ಯೆ ಇರುವ ಬಾಂಡಿಂಗ್ ಕೂಡ ವೀಕ್ಷಕರಿಗೆ ಖುಷಿಯನ್ನ ತರುತ್ತೆ. ಅದೇ ಈಗ ಬುಜ್ಜಿ ರಜತ್ (Bujji Rajath) ಹಾಗೂ ಗಿಲ್ಲಿ ವಿಚಾರದಲ್ಲಿಯೂ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ರಜತ್ ಹಾಗೂ ಗಿಲ್ಲಿ ಬಾಂಡಿಂಗ್ ವಿಡಿಯೋಗಳೇ ವೈರಲ್ ಆಗುತ್ತಿದೆ. ನಿನ್ನೆಯ ಎಪಿಸೋಡ್‌ನಲ್ಲಿಯೂ ಗಿಲ್ಲಿಯ (Gilli Nata) ಕಾಮಿಡಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ ರಜತ್. ಅಷ್ಟೇ ಅಲ್ಲ ಕಾವ್ಯ (Kavya Shaiva) ಬಳಿ ರಜತ್ ಕುರಿತಾಗಿ ಪಾಸಿಟಿವ್ ಆಗಿ ಮಾತನಾಡಿದ್ದಾರೆ.
ಬುಜ್ಜಿಯನ್ನ ಹೊಗಳಿದ ಗಿಲ್ಲಿ
ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗಿಲ್ಲಿ-ಕಾವ್ಯ ಜೋಡಿ ಕಳಪೆ ಪ್ರದರ್ಶನ ತೋರಿತ್ತು. ಆಟ ಆಡುವಾಗಲೇ ಜೋಡಿ ಎಡವಿತ್ತು. ವಿಚಿತ್ರ ಅಂದರೆ ರಜತ್ ಅವರೇ ಎಷ್ಟೋ ಬಾರಿ ಗಿಲ್ಲಿ ಜೋಡಿಗೆ ಗೈಡ್ ಮಾಡ್ತಾನೆ ಇದ್ದರು. ಸೋತ ಬಳಿಕ ರಜತ್ ಅವರು ಒಂದಲ್ಲ ಒಂದು ದಿನ ಗೆಲ್ಲಬೇಕು ಒಳ್ಳೆತನ ಅಂದಿದ್ದಾರೆ. ಅಷ್ಟೇ ಅಲ್ಲ ಸ್ಪಂದನಾ ಅವರು ಗಿಲ್ಲಿ ಜೋಡಿ ಬಗ್ಗೆ ವ್ಯಂಗ್ಯ ಮಾಡಿದ ಬಳಿಕ ಗಿಲ್ಲಿ-ಕಾವ್ಯ ಚರ್ಚಿಸಿದ್ದಾರೆ. ಆ ವೇಳೆ ಗಿಲ್ಲಿ, ಬುಜ್ಜಿಯನ್ನ ಹೊಗಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ವಿರುದ್ಧ ಕಿರುಚಾಡಿ ಆಕ್ರೋಶ ಹೊರ ಹಾಕಿದ ರಕ್ಷಿತಾ! ಟಾಸ್ಕ್ ವೇಳೆ ಆಗಿದ್ದೇನು?
ʻರಜತ್ ಅವರನ್ನ ಬಿಟ್ಟರೆ ಬೇರೆ ಯಾರೂ ಸಪೋರ್ಟ್ ಮಾಡಿಲ್ಲ. ಬಂದಾಗಿನಿಂದಲೂ ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ನಮಗೇ ಸಪೋರ್ಟ್ ಮಾಡಿದ್ದರುʼ ಅಂತ ಹೊಗಳಿದ್ದಾರೆ ಗಿಲ್ಲಿ.
ವೈರಲ್ ವಿಡಿಯೋ
ಹೊಟ್ಟೆ ಹುಣ್ಣಾಗುವಂತೆ ನಕ್ಕಿದ ರಜತ್!
ಮನೆಗೆ ಬಂದ ಆರಂಭದಲ್ಲಿ ಗಿಲ್ಲಿ ಹಾಗೂ ರಜತ್ ನಡುವೆ ಎಷ್ಟೋ ಬಾರಿ ವಾದ ಆಗಿದ್ದೂ ಇದೆ. ಸಾರಿ ಕೇಳ್ತಾನೆ.ಮತ್ತದೇ ತಪ್ಪು ಮಾಡ್ತಾನೆ ಅಂತ ಸುದೀಪ್ ಅವರ ಮುಂದೆಯೇ ಗಿಲ್ಲಿ ಬಗ್ಗೆ ದೂರು ಹೇಳಿದ್ದರು ರಜತ್. ಅಷ್ಟೇ ಅಲ್ಲ ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಅಂದಾಗ, ರಜತ್ ಹಾಗೂ ಗಿಲ್ಲಿ ಮಧ್ಯೆ ಒಂದಲ್ಲ ಒಂದು ದಿನ ಮಾರಾಮಾರಿ ಆಗೋದು ಫಿಕ್ಸ್ ಅಂತ ಎಷ್ಟೋ ನೆಟ್ಟಿಗರು ಕಮೆಂಟ್ ಮಾಡಿದ್ದೂ ಇದೆ. ಆದರೆ ಆ ಊಹೆ ತಪ್ಪಾಗಿದೆ. ರಘು ಹಾಗೂ ಗಿಲ್ಲಿ ಮಧ್ಯೆ ಯಾವಗ ಸಣ್ಣ ಬಿರುಕು ಆಯ್ತೋ, ರಜತ್ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಶುರುವಾಗಿದೆ.
ಸಖತ್ ಎಂಜಾಯ್ ಮಾಡ್ತಿರೋ ರಜತ್
ಬಿಗ್ ಬಾಸ್ ನಲ್ಲಿ ಈ ಜೋಡಿ ಎಲ್ಲೇ ಕೂತರು ಕಾಮಿಡಿ ಮಾಡುತ್ತೆ. . ಗಿಲ್ಲಿ ಮಾಡುವ ಎಲ್ಲ ಕಾಮಿಡಿಯನ್ನು ರಜತ್ ಅವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆ ಒಳಗೆ ರಜತ್ ತುಂಬಾ ಕೂಲ್ ಆಗಿದ್ದಾರೆ. ರಘು ಜೊತೆ ಸೇರಿ ಕಾಮಿಡಿ ಮಾಡುತ್ತಿದ್ದ ಗಿಲ್ಲಿ ನಟ ಅವರು ಈಗ ರಜತ್ ಜೊತೆ ಸೇರಿಕೊಂಡಿದ್ದಾರೆ.
ಸಿನಿಮಾಗಳ ಸಂಭಾಷಣೆಗಳನ್ನು ಬಳಸಿಕೊಂಡು ಭರ್ಜರಿ ಮನರಂಜನೆ ನೀಡುತ್ತಾರೆ ಗಿಲ್ಲಿ. ವೀಕ್ಷಕರು ಮಾತ್ರವಲ್ಲದೇ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕೂಡ ಇದನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಉಪೇಂದ್ರ ಸಿನಿಮಾದ ಡೈಲಾಗ್ ಇಮಿಟೇಟ್ ಮಾಡಿ ಗಿಲ್ಲಿ ಅವರು ಧ್ರುವಂತ್ ಬಗ್ಗೆ ಮಾತನಾಡಿದರು. ಅದನ್ನು ಕೇಳಿ ರಜತ್ ಅವರು ಬಿದ್ದು ಬಿದ್ದು ನಕ್ಕರು.