Bigg Boss Kannada 12: ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾಗೆ ಯೋಗ್ಯತೆನೇ ಇಲ್ಲ ಎಂದ ಮನೆಮಂದಿ
Rakshitha Shetty: ಈ ವಾರ ರಕ್ಷಿತಾ ಶೆಟ್ಟಿ ಅವರು ಹೈಲೈಟ್ ಆಗಿದ್ದಾರೆ. ನಾಮಿನೇಶನ್ ಪ್ರಕ್ರಿಯೆಯಲ್ಲಿಯೂ ಅತಿರೇಕದ ವರ್ತನೆ ತೋರಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯವೂ ಹೌದು. ಈ ವಾರ ಕಾವ್ಯ ಅವರನ್ನು ನಾಮಿನೇಟ್ ಮಾಡುವಾಗ, ರಕ್ಷಿತಾ ಶೆಟ್ಟಿ ಹೈಡ್ರಾಮಾ ಸೃಷ್ಟಿಸಿದರು. ಈ ಬಗ್ಗೆ ಮನೆಯಲ್ಲಿ ಚರ್ಚೆಗಳೂ ನಡೆದಿತ್ತು,. ಇದೀಗ ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾ ಯೋಗ್ಯರಲ್ಲ ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ -
ಈ ವಾರ ರಕ್ಷಿತಾ ಶೆಟ್ಟಿ (Rakshitha Shetty) ಅವರು ಹೈಲೈಟ್ ಆಗಿದ್ದಾರೆ. ನಾಮಿನೇಶನ್ (Nomination) ಪ್ರಕ್ರಿಯೆಯಲ್ಲಿಯೂ ಅತಿರೇಕದ ವರ್ತನೆ ತೋರಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯವೂ ಹೌದು. ಈ ವಾರ ಕಾವ್ಯ ಅವರನ್ನು ನಾಮಿನೇಟ್ ಮಾಡುವಾಗ, ರಕ್ಷಿತಾ ಶೆಟ್ಟಿ ಹೈಡ್ರಾಮಾ ಸೃಷ್ಟಿಸಿದರು. ‘ಸ್ಟ್ರಾಟೆಜಿ’ ಏನು ಅಂತ ಗೊತ್ತಿಲ್ಲದೆ ಕಾವ್ಯ (Kavya Shaiva) ಅವರನ್ನ ರಕ್ಷಿತಾ ಶೆಟ್ಟಿ ಡೇಂಜರ್ ಝೋನ್‌ಗೆ ತಳ್ಳಿದ್ದರು. ಈ ಬಗ್ಗೆ ಮನೆಯಲ್ಲಿ ಚರ್ಚೆಗಳೂ ನಡೆದಿತ್ತು,. ಇದೀಗ ಬಿಗ್ ಬಾಸ್ (Bigg Boss) ಕೊಟ್ಟ ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾ ಯೋಗ್ಯರಲ್ಲ ಎಂದಿದ್ದಾರೆ.
ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲ
ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಸದಸ್ಯರನ್ನು ಘೋಷಿಸಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಬಹುತೇಕ ಎಲ್ಲ ಸದಸ್ಯರು ರಕ್ಷಿತಾ ಹೆಸರನ್ನೇ ಹೇಳಿದ್ದಾರೆ. ಸ್ಪಂದನಾ ಕೂಡ ಈ ಬಗ್ಗ ಹೇಳಿದ್ದು ಹೀಗೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಜಂಟಿ ಕ್ಯಾಪ್ಟನ್ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು
`ನನ್ನನ್ನು ನಾಮಿನೇಟ್ ಮಾಡುವಾಗ ಕೊಟ್ಟ ಕಾರಣ, ಯಾವದೂ ಅರ್ಥವೇ ಇರಲಿಲ್ಲ' ಎಂದಿದ್ದಾರೆ. ಅಭಿಷೇಕ್ ಕೂಡ, `ರಕ್ಷಿತಾ ಅವರು ಪ್ಯಾನಿಕ್ ಆಗಿ ಯಾವುದು ತಲೆಗೆ ಬರುತ್ತೋ ಅದನ್ನ ಕಾರಣಗಳನ್ನು ಕೊಡೋದು ಅಲ್ಲ' ಎಂದಿದ್ದಾರೆ. ಇನ್ನು ರಕ್ಷಿತಾ ಈ ಬಗ್ಗೆ ಪ್ರತಿಕ್ರಿಯಿಸಿ, `ನನಗೆ ಯಾವಾಗ ಏನು ನಿರ್ಧಾರ ತೆಗೆದುಕೊಂಡು ಹೇಳಬೇಕೋ ಅದನ್ನ ಆ ಕ್ಷಣಕ್ಕೆ ಯೋಚನೆ ಮಾಡಿಯೇ ಹೇಳುತ್ತೇನೆ' ಎಂದಿದ್ದಾರೆ. ಕಾವ್ಯ ಮಾತನಾಡಿ, `ಚಿಕ್ಕ ಹುಡುಗಿ ನಿರ್ಧಾರ ತೆಗೆದುಕೊಳ್ಳಲು ಆಗ್ತಾ ಇಲ್ವಾ ಅಂತ ಹೇಳೋದಾ? ಅಥವಾ ಸ್ಮಾರ್ಟೋ?' ಅಂತ ಹೇಳಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ನಿನ್ನೆಯ ಎಪಿಸೋಡ್‌ನಲ್ಲಿಯೂ ರಕ್ಷಿತಾ ಅವರು ನಾಮಿನೇಟ್ ಮಾಡಿರುವ ವಿಚಾರದ ಬಗ್ಗೆ ಚೈತ್ರಾ, ರಾಶಿಕಾ , ಸೂರಜ್ ಚರ್ಚೆ ಮಾಡಿದ್ದರು. ಆ ವೇಳೆ ರಕ್ಷಿತಾ, ನಾನು ಏನೇ ಇದ್ದರೂ ಆ ಕ್ಷಣಕ್ಕೆ ಹೇಳುತ್ತೇನೆ. ಅದನ್ನು ತುಂಬಾ ಕ್ಯಾರಿ ಮಾಡ್ತಾ ಹೋಗಲ್ಲ. ಗಿಲ್ಲಿ ಅವರನ್ನ ನಾಮಿನೇಟ್ ಮಾಡಿದೆ ಹೌದು. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಸಪೋರ್ಟ್ ಅವರಿಗೆ ಮಾಡಿಯೇ ಮಾಡ್ತೇನೆ. ನಾಮಿನೇಟ್ ಮಾಡಿದ ತಕ್ಷಣ ಅವರನ್ನೇ ಟಾರ್ಗೆಟ್ ಮಾಡ್ತೀನಿ ಅಂತಲ್ಲ ಎಂದಿದ್ದರು.
ಅತಿರೇಕದ ವರ್ತನೆ
ರಕ್ಷಿತಾ ಇತ್ತೀಚಗೆ ಅತಿರೇಕದ ವರ್ತನೆಯನ್ನೂ ತೋರುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಅವರು ನಿನ್ನೆಯ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿ, ಧ್ರುವಂತ್ ಮಾತಿಗೆ ತಿರುಗಿ ಬಿದ್ದಿದ್ದರು. ಇದರ ಜೊತೆಗೆ ಉಳಿದವರು ಏನೂ ಹೇಳಿದರೂ ಕೇಳದೆ, ವ್ಯಂಗ್ಯ ಮಾಡಿದ್ದರು. ಆಮೇಲೆ ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ನೀರಿನಲ್ಲಿ ಕೋಲಿನಿಂದ ಹೊಡೆದಿದ್ದರು. ನಿಲ್ಲಿಸು ಎಂದರೂ ಕೂಡ ಅವರು ಕೇಳಲಿಲ್ಲ.