ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯ ಈಗ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಟಾಸ್ಕ್​​ನಲ್ಲಿ ಗೆಲ್ಲುವವರು ಫಿನಾಲೆ ಓಟಕ್ಕೆ ಆಯ್ಕೆ ಆಗುತ್ತಾರೆ. ಧ್ರುವಂತ್ ಮತ್ತು ಗಿಲ್ಲಿ ನಟ ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಗಿಲ್ಲಿ ಸದ್ಯ ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಉಳಿಯುವಂತಾಗಿದೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ರಕ್ಷಿತಾ ಸಖತ್‌ ಆಗಿ ಅಶ್ವಿನಿಗೆ ಕೌಂಟರ್‌ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯ ಈಗ ‘ಟಿಕೆಟ್ ಟು ಫಿನಾಲೆ’ (Ticket to Finale) ಟಾಸ್ಕ್ ನಡೆಯುತ್ತಿದೆ. ಟಾಸ್ಕ್​​ನಲ್ಲಿ ಗೆಲ್ಲುವವರು ಫಿನಾಲೆ ಓಟಕ್ಕೆ ಆಯ್ಕೆ ಆಗುತ್ತಾರೆ. ಧ್ರುವಂತ್ ಮತ್ತು ಗಿಲ್ಲಿ ನಟ (Gilli Nata) ನಡುವೆ ಪೈಪೋಟಿ ಬೆಳೆಯಿತು. ಮೊದಲ ಹಂತದಲ್ಲೇ ಧ್ರುವಂತ್ ಅವರು ಗಿಲ್ಲಿಯನ್ನು ಸೋಲಿಸಿದರು. ಗಿಲ್ಲಿ ಸದ್ಯ ಅವರು ‘ಟಿಕೆಟ್ ಟು ಟಾಪ್ 6’ ಆಟದಿಂದ ಹೊರಗೆ ಉಳಿಯುವಂತಾಗಿದೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ರಕ್ಷಿತಾ ಸಖತ್‌ ಆಗಿ ಅಶ್ವಿನಿಗೆ (Ashwini Gowda) ಕೌಂಟರ್‌ ಕೊಟ್ಟಿದ್ದಾರೆ.

ಧ್ರುವಂತ್‌ ಟೀಂ ವಿನ್‌

ಗಿಲ್ಲಿ, ಧ್ರುವಂತ್‌ ಟಾಸ್ಕ್‌ ಬಳಿಕ, ಎರಡು ತಂಡಗಳನ್ನು ರಚಿಸಿ ಆಡಿ ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದರಂತೆ ರಾಶಿಕಾ, ರಕ್ಷಿತಾ, ರಘು ಒಂದು ಟೀಂ ಆದ್ರೆ, ಅಶ್ವಿನಿ, ಧ್ರುವಂತ್‌, ಕಾವ್ಯ ಮತ್ತೊಂದು ಟೀಂನಲ್ಲಿ ಆಡಿದರು. ಬಳಿಕ ಧ್ರುವಂತ್‌ ಟೀಂ ವಿನ್‌ ಆಯ್ತು. ಈಗ ಮತ್ತೊಂದು ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ

ವೈರಲ್‌ ವಿಡಿಯೊ



ಗಿಲ್ಲಿಗೆ ಟಾಂಗ್‌

ಏಕಾಗ್ರತೆ ಕೆಡಿಸಿ ಇಬ್ಬರು ಸದಸ್ಯರು ಹಿಡಿದಿರುವ ಕಂಬವನ್ನು ಬಿಡುವಂತೆ ಮಾಡಬೇಕು. ರಾಶಿಕಾ ಆಟವನ್ನು, ಏಕಾಗ್ರತೆಯನ್ನ ಹಾಳು ಮಾಡಲು ಅಶ್ವಿನಿ ಹರಸಾಹಸ ಪಟ್ಟರು. ಗಿಲ್ಲಿಕೂಡ ಅಶ್ವಿನಿಗೆ ಕೌಂಟರ್‌ ಕೊಡ್ತಾ ಇದ್ದರು.

ಆಡುವ ಭರದಲ್ಲಿ ಯಾವುದೇ ವ್ಯಕ್ತಿತ್ವವನ್ನು ಕೆಳಗೆ ಇಡಬಾರದು ಎಂದು ಗಿಲ್ಲಿಗೆ ಟಾಂಗ್‌ ಕೊಟ್ಟಿದ್ದಾರೆ ಅಶ್ವಿನಿ. ರಕ್ಷಿತಾ ಕೂಡ ಅಶ್ವಿನಿಗೆ ಕೌಂಟರ್‌ ಕೊಟ್ಟಿದ್ದಾರೆ. ಫಸ್ಟ್‌ ವೀಕ್‌ ಇಂದ ಜನ ತೊಂದರೆ ಕೊಡ್ತಾನೇ ಇದ್ದಾರೆ. ಮುಖವಾಡ ಬೇಗ ಬದಲಾಗುತ್ತದೆ ಎಂದು ಕೌಂಟರ್‌ ಕೊಟ್ಟಿದ್ದಾರೆ.

ರಕ್ಷಿತಾ ಕೌಂಟರ್‌

ನೆಟ್ಟಿಗರು ಕಮೆಂಟ್‌ನಲ್ಲಿ ರಕ್ಷಿತಾ ಈಗ ಅಶ್ವಿನಿ ಅವರನ್ನು ಗುರಿಯಾಗಿಸಿಕೊಂಡು ಅವರನ್ನು ಕೆಳಗಿಳಿಸಲು ಶ್ರಮಿಸುತ್ತಿದ್ದಾಳೆ ಏಕೆಂದರೆ ಅವಳು ರಘು ವಿರುದ್ಧ ಟಾಸ್ಕ್ ಆಡುತ್ತಿದ್ದಾಳೆ ಮತ್ತು ಅದನ್ನು ಗೆಲ್ಲುತ್ತಿದ್ದಾಳೆ.

ಪರವಾಗಿಲ್ಲ, ಅಶ್ವಿನಿ ಹೆಚ್ಚು ತಾಳ್ಮೆ ತೋರಿಸಿ ಗಮನ ಹರಿಸಿದರೆ ಉನ್ನತ ಮತ್ತು ಉತ್ತಮ ಸ್ಥಾನವಿರುತ್ತದೆ ಎಂದು ಕಮೆಂಟ್‌ ಮಾಡಿದ್ದಾರೆ. ಇಂದಿನ ಟಾಸ್ಕ್‌ನಲ್ಲಿ ಯಾರು ಗೆಲ್ತಾರೆ ಅನ್ನೋದೇ ವೀಕ್ಷಕರಿಗೆ ಇರೋ ಕುತೂಹಲ.

ಇದನ್ನೂ ಓದಿ: Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ

ಸದ್ಯ ಫಿನಾಲೆ ಓಟದಲ್ಲಿ ಧನುಷ್‌, ಧ್ರುವಂತ್‌ ಆಯ್ಕೆ ಆಗಿದ್ದಾರೆ. ಗಿಲ್ಲಿ ಅವರಿಗೆ ಇದರಿಂದ ತೀವ್ರ ಹಿನ್ನಡೆ ಆಗಿದೆ. ಹಾಗಾಗಿ ಕಾವ್ಯಾ, ರಘು, ರಾಶಿಕಾ, ರಕ್ಷಿತಾ, ಧನುಷ್ ಅವರಿಗೆ ಶಾಕ್ ಆಗಿದೆ. ಅಲ್ಲದೇ ಗಿಲ್ಲಿಯನ್ನು ಬೆಂಬಲಿಸುವ ಪ್ರೇಕ್ಷಕರಿಗೂ ಬೇಸರ ಆಗಿದೆ.

Yashaswi Devadiga

View all posts by this author