Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ
Gilli Nata: ಬಿಗ್ ಬಾಸ್ ಶುರುವಾದಾಗಿನಿಂದಲೂ ಅಶ್ವಿನಿ ಹಾಗೂ ಗಿಲ್ಲಿಗೆ ಅಷ್ಟಕಷ್ಟ. ಹಾವು ಮುಂಗುಸಿ ಥರ ಕಿತ್ತಾಡುತ್ತಲೇ ಇರುತ್ತಾರೆ. ಇದೀಗ ನಾಮಿನೇಶನ್ ವೇಳೆಯೂ ಅದೇ ಆಗಿದೆ. ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’ ಎಂದು ಅಶ್ವಿನಿ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಗಿಲ್ಲಿ ತಲೆಕೆಡಿಸಿಕೊಳ್ಳಲಿಲ್ಲ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಶುರುವಾದಾಗಿನಿಂದಲೂ ಅಶ್ವಿನಿ (Ashwini Gowda) ಹಾಗೂ ಗಿಲ್ಲಿಗೆ (Gilli Nata) ಅಷ್ಟಕಷ್ಟ. ಹಾವು ಮುಂಗುಸಿ ಥರ ಕಿತ್ತಾಡುತ್ತಲೇ ಇರುತ್ತಾರೆ. ಇದೀಗ ನಾಮಿನೇಶನ್ ವೇಳೆಯೂ ಅದೇ ಆಗಿದೆ. ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’ ಎಂದು ಅಶ್ವಿನಿ ಅವರು ಗಿಲ್ಲಿಗೆ ಎಚ್ಚರಿಕೆ (Warn) ನೀಡಿದರು. ಇದಕ್ಕೆ ಗಿಲ್ಲಿ ತಲೆಕೆಡಿಸಿಕೊಳ್ಳಲಿಲ್ಲ.
ಸ್ವಯ ಘೋಷಿತ ವಿನ್ನರ್ ಗಿಲ್ಲಿ
ಅಶ್ವಿನಿ ಅವರು ಗಿಲ್ಲಿಯನ್ನ ನಾಮಿನೇಟ್ ಮಾಡಿ ಕಾರಣವನ್ನು ಹೇಳಿದರು. ನಾನು ಸ್ವಯ ಘೋಷಿತ ವಿನ್ನರ್ ಗಿಲ್ಲಿಯನ್ನು ನಾಮಿನೇಟ್ ಮಾಡುತ್ತೇನೆ. ತುಂಬಾ ವೇಸ್ಟ್ ಅವನು. ನಾನು ಕೊಚ್ಚೆ ಅಂತಾನೆ. ಟಾಯ್ಲೆಟ್ ಹೋದರೆ ನೀರು ಹಾಕಲ್ಲ, ಶೇವ್ ಮಾಡಲ್ಲ, ತಟ್ಟೆ ತೊಳೆಯಲ್ಲ . ನಿನ್ನ ತಾಯಿ ಥರ ಇದ್ದೀನಿ ಮಾಡಿದ್ರೆ ತಪ್ಪಿಲ್ಲ. ನೀನು ಮಾತಾಡೋ ಮಾತುಗಳು ನಿನ್ನ ವ್ಯಕ್ತಿತ್ವ ತೋರಿಸುತ್ತೆ.
ಗಿಲ್ಲಿ ಕೂಡ ಸಖತ್ ಕೂಡ ಕೌಂಟರ್
ಅಧಿಕಾರ ಸಿಕ್ಕಿದ್ದಾಗ ದುರುಪಯೋಗ ಮಾಡಿಕೊಳ್ಳಬಾರದು. ಅಹಂಕಾರ ಪಡಬಾರದು. ನಿನ್ನ ಅಹಂಕಾರ ಇಡೀ ಮನೆ ನೋಡಿದೆ. ನಂದೇ ಸರ್ವಾಧಿಕಾರ ಅಂತ ಪ್ರೂವ್ ಮಾಡಿಕೊಂಡಿದ್ದೀಯಾ. ಒಂದೇ ವಾರದಲ್ಲಿ ಹೀಗೆಲ್ಲ ಚೇಂಜ್ ಆಗತ್ತೆ ಗೊತ್ತಿರಲಿಲ್ಲ. ಹೋದ ವಾರ ನಿನ್ನ ಟೈ, ಈ ವಾರ ನನ್ನ ಟೈಂ ಎಂದಿದ್ದಾರೆ. ಇನ್ನು ಗಿಲ್ಲಿ ಕೂಡ ಸಖತ್ ಕೂಡ ಕೌಂಟರ್ ಕೊಟ್ಟಿದ್ದಾರೆ. ಕ್ಯಾಪ್ಟನ್ ಆಗಿಲ್ಲ. ರೂಮ್ ಒಳಗೆ ಹೋಗಿಲ್ಲ. ಕ್ಯಾಪ್ಟನ್ ಆಗೋ ಯೋಗ್ಯತೆ ಇಲ್ವಲ್ಲ ಎಂದು ಅಬ್ಬರಿಸಿದ್ದಾರೆ.
. ಈ ವೇಳೆ ಅಶ್ವಿನಿ ವಿರುದ್ಧ ಗಿಲ್ಲಿ ಒಂದಷ್ಟು ಆರೋಪಗಳನ್ನು ಮಾಡಿದರು. ಇತ್ತೀಚೆಗೆ ರಾಶಿಕಾ ವಿರುದ್ಧ ಆರೋಪ ಮಾಡುವಾಗ ಅಶ್ವಿನಿ ಅವರು, ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂದು ಆರೋಪಿಸಿದ್ದರು. ಇದನ್ನು ಗಿಲ್ಲಿ ಖಂಡಿಸಿದ್ದಾರೆ. ಗಿಲ್ಲಿಯನ್ನು ಕೊಚ್ಚೆ ಎಂದು ಕರೆದರು ಅಶ್ವಿನಿ.
ಅಶ್ವಿನಿಯನ್ನ ಟಾರ್ಗೆಟ್ ಮಾಡಿದ ಕಾವು
ಮನೆಯವರೆಲ್ಲರೂ ಹೆಚ್ಚಾಗಿ ಅಶ್ವಿನಿ ಅವರನ್ನು ನಾಮಿನೇಟ್ ಮಾಡುವಾಗ, ರಾಶಿಕಾ ಕುರಿತಾದ ಕಾರಣವನ್ನೇ ಹೇಳಿದರು. ಕಾವ್ಯ ಮಾತನಾಡಿ, `ಬಿಗ್ ಬಾಸ್ ಅನ್ನೋದು ಒಂದು ವ್ಯಕ್ತಿತ್ವದ ಆಟ. ಹೆಣ್ಣಿನ ಪರ ಹೊರಗಡೆ ಹೋರಾಟ ಮಾಡಿರಬಹುದು. ಆದರೆ ಈ ಮನೆಯಲ್ಲಿ ಹೆಣ್ಣಿನ ಬಗ್ಗೆ ಚಿಕ್ಕದಾಗಿ ಕೆಟ್ಟಾದಿಗಿ ಮಾತಾಡಿದ್ದಾರೆ ಅನ್ನೋದು ನೋಡಿಕೊಂಡು ಬರ್ತಾನೆ ಇದ್ದೇವೆ.
ಅವರ ಇರೋದಕ್ಕೂ, ಮನೆಯಲ್ಲಿ ನಡೆದುಕೊಳ್ಳೋದಕ್ಕೂ ಸಂಬಂಧ ಇಲ್ಲ. ಅವರು ನಾಟಕ ಮಾಡ್ತಾ ಇದ್ದಾರೆ. ಅಶ್ವಿನಿ ಅವರು 2.0 ಅಂತ ಏನು ಹೇಳ್ತಾ ಇದ್ದಾರೆ ಅದೆಲ್ಲ ನಾಟಕ. ಡ್ರಾಮ ಮಾಡ್ತಾ ಇದ್ದಾರೆ. ಅವರಿಗೆ ತಪ್ಪು ಅರ್ಥ ಆಗಿದೆ ಅನ್ಸಿಲ್ಲ, ಅವರಿಗೆ ಅನ್ಸೋದು ಇಲ್ಲ' ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ʻಅಶ್ವಿನಿ ಗೌಡ 2.O ವರ್ಷನ್ ನಾಟಕʼ! ಏಕವಚನಕ್ಕೆ ತಿರುಗಿದ ಕಾವ್ಯ-ಅಶ್ವಿನಿ ಗೌಡ ಜಗಳ
ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ನಾಮಿನೇಟ್ ಆಗಿದ್ದಾರೆ. ಇದೀಗ ಫಿನಾಲೆ ಟಿಕೆಟ್ ಯಾರಿಗೆ ಸಿಗುತ್ತೆ ಎಂಬುದೇ ಕುತೂಹಲ.ಮೊದಲ ಟಿಕೆಟ್ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಗಿಲ್ಲಿ ಔಟ್ ಆಗ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.