ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಧ್ರುವಂತ್ ಹಾಗೂ ರಕ್ಷಿತಾ (Dhruvanth Rakshitha) ಮಧ್ಯೆ ಬಾಡಿಂಗ್ ಅಷ್ಟಕಷ್ಟೆ. ಎಷ್ಟೋ ಬಾರಿ ಧ್ರುವಂತ್ ಅವರು ರಕ್ಷಿತಾ ಅವರ ಕುರಿತು ವ್ಯಂಗ್ಯ ಮಾಡಿದ್ದೂ ಇದೆ. ಅಷ್ಟೇ ಅಲ್ಲ ಸುದೀಪ್ ಅವರ ಮುಂದೆಯೇ ಧ್ರುವಂತ್ ವಿಚಾರವಾಗಿ ರಕ್ಷಿತಾ ಬೇಸರ ಹೊರ ಹಾಕಿದ್ದರು. ಇದೀಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ (Captaincy Task) ಇಬ್ಬರ ಮಧ್ಯೆ ವಾದ ವಿವಾದ ಆಗಿದೆ. ಧ್ರುವಂತ್ ಹಾಗೂ ಧನುಷ್ ಟಾಸ್ಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಟಾಸ್ಕ್‌ನಲ್ಲಿ ಸ್ಪರ್ಧಿಗಳು ಯಾವುದೇ ತಪ್ಪು ಮಾಡದಂತೆ ಇವರಿಬ್ಬರು ನೋಡಿಕೊಳ್ಳಬೇಕಿದೆ. ಈಗ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಕಿರಿಕ್‌ಗೆ ಕಾರಣವಾಗಿದೆ.
ಹೊಸ ಪ್ರೋಮೋ ಔಟ್!
ಹೊಸ ಪ್ರೋಮೋ ಔಟ್ ಆಗಿದೆ. ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಜೋಡಿಗಳಾಗಿ ಆಡುತ್ತಿದ್ದಾರೆ ಸ್ಪರ್ಧಿಗಳು. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಟಾಸ್ಕ್ ಆಡುತ್ತಿದ್ದಾರೆ. ರಾಶಿಕಾ ಹಾಗೂ ಸೂರಜ್ ಹೊರ ಬಿದ್ದಿದ್ದಾರೆ. ಇದೀಗ ಉಳಿದಿರುವ ಜೋಡಿಗೆ ಟಾಸ್ಕ್ ಕೊಟ್ಟಿದ್ದರು ಬಿಗ್ ಬಾಸ್.
ಇದನ್ನೂ ಓದಿ: Bigg Boss Kannada 12: ಟಾಸ್ಕ್ ವೇಳೆ ಕಾಲು ಮುರಿದುಕೊಂಡ ಸ್ಪಂದನಾ! ಪುಷ್ಪ ಸಾಂಗ್ ಹೇಳಿ ಮನೆಮಂದಿಯನ್ನ ನಗಿಸಿದ ಗಿಲ್ಲಿ
ಈವರೆಗಿನ ಟಾಸ್ಕ್‌ಗಳಲ್ಲಿ ಇದು ಕಡೆಯ ಟಾಸ್ಕ್. ಅತಿ ಹೆಚ್ಚು ಅಂಕ ಗಳಿಸುವ ಮೊದಲ ಮೂರು ಜೋಡಿಗಳು ಈ ವಾರದ ಕ್ಯಾಪ್ಟನ್ಸಿ ಅಭ್ಯರ್ಥಿಗಳು ಆಗುತ್ತಾರೆ ಎಂದಿದ್ದಾರೆ ಬಿಗ್ ಬಾಸ್. ಈ ಟಾಸ್ಕ್‌ನಲ್ಲಿ ರಕ್ಷಿತಾ ಟೀಂ ರೂಲ್ಸ್ ಬ್ರೇಕ್ ಮಾಡಿದೆ.
ರಕ್ಷಿತಾ ಶೆಟ್ಟಿ ಆಕ್ರೋಶ
ಆ ಧ್ರುವಂತ್ ಅವರು ತಪ್ಪನ್ನು ಹೇಳಿದ್ದಾರೆ. ಇದು ರಕ್ಷಿತಾ ಅವರಿಗೆ ಕೋಪ ತರಿಸಿದೆ. ಧ್ರುವಂತ್ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗರಂ ಆಗಿ ರಕ್ಷಿತಾ ಆಟ ಬಿಟ್ಟು ಕೂಗಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೋಲಿನಿಂದ ಬಿಡಿಯುತ್ತಾ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮೆಯವರೆಲ್ಲರೂ ರಕ್ಷಿತಾಗೆ ಈ ರೀತಿ ವರ್ತಿಸದಂತೆ ಹೇಳಿದರೂ ರಕ್ಷಿತಾ ಆಕ್ರೋಶ ವ್ಯಕ್ತಪಡಿಸಿದರು.
ವೈರಲ್ ಪ್ರೋಮೋ
ಕುಗ್ಗದ ಧ್ರುವಂತ್
ಧ್ರುವಂತ್ ಅವರಿಗೆ ಬಿಗ್ ಬಾಸ್ ಉಸ್ತುವಾರಿ ನೀಡಿದ್ದರು. ಆದರೆ ನಿನ್ನೆಯ ರಿಂಗ್ (Ring Task) ಟಾಸ್ಕ್‌ನಲ್ಲಿ ಮಾತ್ರ ಧ್ರುವಂತ್ ಸಖತ್ ಹೈಲೈಟ್ ಆಗಿದ್ದಾರೆ. ಯಾವ ಸ್ಪರ್ಧಿಗೂ ನನ್ನಿಂದ ಅನ್ಯಾಯ ಆಗಬಾರದು ಅಂತ ಕಣ್ಣು ಮುಚ್ಚಿಕೊಂಡು ರಿಂಗ್ ಎಸೆದಿದ್ದಾರೆ ಧ್ರುವಂತ್.
ಈ ನ್ಯಾಯದ ಆಟಕ್ಕೆ ಶಭಾಷ್ ಅಂರ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು. 'ರಿಂಗ ರಿಂಗ' ಟಾಸ್ಕ್ ಅನ್ನು ಶ್ರದ್ಧೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಕಣ್ಣು ಮುಚ್ಚಿ ರಿಂಗ್ ಎಸೆದು ಪ್ರಾಮಾಣಿಕತೆ ತೋರಿದ್ದರಿಂದ, ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: Bigg Boss Kannada 12: ಮನೆಮಂದಿ ಎಷ್ಟೇ ಕೀಳಾಗಿ ಕಂಡರೂ ಕುಗ್ಗದ ಧ್ರುವಂತ್! ನ್ಯಾಯದ ಆಟಕ್ಕೆ ಶಭಾಷ್ ಅಂದ್ರು ವೀಕ್ಷಕರು
ಕಳೆದ ವಾರ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆಯೇ ಧ್ರುವಂತ್ ಅವರಿಗೆ ಸಾಕಷ್ಟು ಬಿರುದುಗಳು ಸಿಕ್ಕವು. ಅವರನ್ನು ಕೆಲವರು ಊಸರವಳ್ಳಿ ಎಂದರು, ಕೆಲವರು ಕಪಟಿ ಎಂದರು. ಹೀಗೆ ನಾನಾ ರೀತಿಯಲ್ಲಿ ಕರೆಯಲಾಯಿತು. ಹೀಗಾಗಿ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಅವರು ಹೇಳಿದರು. ಆದರೆ, ಇದಕ್ಕೆ ಸುದೀಪ್ ಒಪ್ಪಿಲ್ಲ. ಅದಾದ ಬಳಿಕವೂ ಬಿಗ್ ಬಾಸ್ ಬಳಿ ತನ್ನನ್ನು ಹೊರಗೆ ಕಳುಹಿಸಿ ಅಂತ ಮನವಿ ಕೂಡ ಮಾಡಿದ್ದರು.