ಬಿಗ್ ಬಾಸ್ ಮನೆಯಲ್ಲಿ( Bigg Boss Kannada 12) ಕಾವ್ಯ ಹಾಗೂ ಗಿಲ್ಲಿ (Kavya Gilli) ಜೋಡಿ ಅಂದ್ರೆ ವೀಕ್ಷಕರಿಗೆ ಅತ್ಯಂತ ಮೆಚ್ಚುಗೆ. ಇವರಿಬ್ಬರನ್ನು ಹೊರತು ಪಡಿಸಿ ಗಿಲ್ಲಿ ಜೊತೆ ರಕ್ಷಿತಾ ಕೂಡ ಕ್ಲೋಸ್ ಆಗಿದ್ದಾರೆ. ಕೆಲವೊಮ್ಮೆ ಕಾವ್ಯ ವಿಚಾರಕ್ಕೆ ರಕ್ಷಿತಾ (Rakshitha) ಗರಂ ಆಗೋದು ನೋಡಿ ಪಾಸೆಸಿವ್‌ನೆಸ್ ಇದೆ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದೂ ಉಂಟು. ಇದೀಗ ಅದು ಸತ್ಯವಾದಂತಿದೆ. ಗಿಲ್ಲಿ ರೀತಿಯ ಹುಡುಗ ಬೇಕು, ಆದರೆ ಗಿಲ್ಲಿ ಬೇಡ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.
ಗಿಲ್ಲಿ ರೀತಿಯ ಹುಡುಗ ಬೇಕು, ಆದರೆ ಗಿಲ್ಲಿ ಬೇಡ
ನಿನ್ನೆಯ ಸಂಚಿಕೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಗೌರಿ ಕಲ್ಯಾಣ’ ಧಾರಾವಾಹಿ ಪಾತ್ರಧಾರಿಗಳು ಈ ವಾರ ಬಿಗ್ಬಾಸ್ ಮನೆಗೆ ಬಂದಿದ್ದರು. ಧಾರಾವಾಹಿಯ ಮುಖ್ಯ ಪಾತ್ರಗಳಾದ ತಾಯಿ, ಮೂವರು ಹೆಣ್ಣು ಮಕ್ಕಳು ಸಹ ಬಂದಿದ್ದರು. ಹಣದಿಂದ ಅಲ್ಲದಿದ್ದರೂ ತಮ್ಮ ಮಾತುಗಳಿಂದ ಮೋನಿಕಾ ಅನ್ನು ಇಂಪ್ರೆಸ್ ಮಾಡಲು ಮುಂದಾದ ಗಿಲ್ಲಿ, ಮೋನಿಕಾ, ನಿನಗೆ ಬೇಡ ಆತಂಕ ಎಂದು ಕವನವನ್ನೇ ಕಟ್ಟಿ ಹೇಳಿದರು. ಗಿಲ್ಲಿಯ ಕವನಕ್ಕೆ ಮೋನಿಕಾ ಫಿದಾ ಸಹ ಆಗಿ ಬಿಟ್ಟರು. ಗಿಲ್ಲಿ ಸಹ ‘ಮೋನಿಕಾ ಐ ಲವ್ ಯೂ’ ಎಂದು ಹೇಳಿಬಿಟ್ಟಿರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ನನ್ನ ಥರಾನೇ , ಬಿಗ್ ಬಾಸ್ ಗೆಲ್ಲೋದು ಅವರೇ; ಸಂಗೀತಾ ಶೃಂಗೇರಿ ನೇರ ಮಾತು
ಈ ಸ್ವಯಂವರದ ವೇಳೆ ಗಿಲ್ಲಿ ರೀತಿಯ ಹುಡುಗ ಬೇಕು, ಆದರೆ ಗಿಲ್ಲಿ ಬೇಡ ಎಂದು ಹೇಳುವ ಮೂಲಕ ರಕ್ಷಿತಾ ಚರ್ಚೆಗೆ ಕಾರಣರಾಗಿದ್ದಾರೆ.
ಗಿಲ್ಲಿಯ ರೀತಿಯ ಗುಣ ಇರೋ ಹುಡುಗ ಸಿಕ್ಕರೆ ಸಾಕು
ಈ ವೇಳೆ ರಕ್ಷಿತಾ ಅವರಿಗೆ ಯಾವ ರೀತಿ ಹುಡುಗ ಬೇಕು ಎಂಬ ಪ್ರಶ್ನೆ ಎದ್ದಿದೆ. ‘ನನ್ನ ಹುಡುಗ ಗಿಲ್ಲಿ ರೀತಿಯೇ ಇರಬೇಕು ಎಂದರು. ಅದಕ್ಕೆ ಮನೆಯವರು ಗಿಲ್ಲಿಯನ್ನೇ ಮದುವೆ ಆಗಬಹುದು ಅಲ್ವಾ? ಅಂತ ಕೇಳಿದ್ದಾರೆ. ನನಗೆ ಗಿಲ್ಲಿ ಬೇಡ. ಗಿಲ್ಲಿಯ ರೀತಿಯ ಗುಣ ಇರೋ ಹುಡುಗ ಸಿಕ್ಕರೆ ಸಾಕು. ನಾನು ಅವನು ಬೆಸ್ಟ್ ಫ್ರೆಂಡ್ಸ್ ಎಂದಿದ್ದಾರೆ.
ವೈರಲ್ ವಿಡಿಯೋ
ಕಾವ್ಯಾ ಅವರನ್ನು ಕಂಡರೆ ರಕ್ಷಿತಾಗೆ ಸ್ವಲ್ಪವೂ ಆಗೋದಿಲ್ಲ. ಅವರ ವಿರುದ್ಧ ರಕ್ಷಿತಾ ಸಿಟ್ಟನ್ನು ತೋರಿಸುತ್ತಾ ಇರುತ್ತಾರೆ. ಇದಕ್ಕೆ ಕಾರಣ ಕಾವ್ಯಾ ಹಾಗೂ ಗಿಲ್ಲಿ ನಡುವಿನ ಗೆಳೆತನ ಎಂಬ ಮಾತೂ ಇದೆ. ಇದಕ್ಕೆ ಈಗ ಸಾಕ್ಷಿ ಎಂಬಂತೆ ರಕ್ಷಿತಾ ಕೂಡ ಅದೇ ರೀತಿ ನಡೆದುಕೊಂಡಿದ್ದಾರೆ.
ರಕ್ಷಿತಾರನ್ನು ಗಿಲ್ಲಿ ವಂಶದ ಕುಡಿ ಅಂತಾನೆ ಕರೀತಾರೆ. ಗಿಲ್ಲಿ ಎಲ್ಲೆ ಹೋದ್ರೂ ರಕ್ಷಿತಾ ಅಲ್ಲಿರ್ತಾರೆ. ಗಿಲ್ಲಿಗೆ ಏನೇ ಆದ್ರೂ ರಕ್ಷಿತಾ ಸಹಿಸೋದಿಲ್ಲ. ಸದಾ ಗಿಲ್ಲಿ ಬೆಂಬಲಕ್ಕೆ ನಿಲ್ಲುವ ರಕ್ಷಿತಾಗೆ ಗಿಲ್ಲಿ ಮೇಲೆ ವಿಶೇಷ ಪ್ರೀತಿ ಇದೆ.
ಗಿಲ್ಲಿ ಹಾಗೂ ತಮ್ಮ ಸಂಬಂಧದ ಬಗ್ಗೆ ರಕ್ಷಿತಾ ಈ ಹಿಂದೆಯೂ ಸ್ಪಷ್ಟನೆ ನೀಡಿದ್ದರು. ಸೂರಜ್ ಸಹೋದರಿ ಮನೆಗೆ ಬಂದಾಗ, ಬಿಗ್ ಬಾಸ್ ಮನೆಯಲ್ಲಿರೋರೆಲ್ಲ ರಕ್ಷಿತಾ ಅಣ್ಣಂದಿರು ಅಲ್ವಾ ಅಂತ ಕೇಳ್ತಾರೆ. ಅದಕ್ಕೆ ರಕ್ಷಿತಾ ತಕ್ಷಣ ಉತ್ತರ ನೀಡಿದ್ದರು. ಗಿಲ್ಲಿ ಒಬ್ಬರನ್ನು ಬಿಟ್ಟು ಎಲ್ಲರೂ ಅಣ್ಣಂದಿರು ಅಂತ. ಹಾಗಿದ್ರೆ ಗಿಲ್ಲಿ ಏನು ಎಂದಾಗ, ಗಿಲ್ಲಿ ನನ್ನ ಫ್ರೆಂಡ್ ಅಂತ ರಕ್ಷಿತಾ ಹೇಳಿದ್ದರು.